ಭೂಗತ ಪಾತಕಿಗಳ ನಡುವೆ ಕಡಿದುಹೋಯಿತೇ ಸಂಬಂಧ?
ಕರಾಚಿ, ಡಿಸೆಂಬರ್ 13: ಭೂಗತ ಪಾತಕಿಗಳ ಲೋಕದಿಂದ ಬಿಗ್ ಬ್ರೇಕಿಂಗ್ ನ್ಯೂಸ್ ಹೊರ ಬಂದಿದೆ. ಡಿ ಕಂಪನಿ ಒಡೆದು ಇಬ್ಭಾಗವಾಗಿದೆ. ದಾವೂದ್ ಇಬ್ರಾಹಿಂ ಅವರನ್ನು ಬಿಟ್ಟು ಬಲಗೈ ಬಂಟ ಛೋಟಾ ಶಕೀಲ್ ಅವರು ದೂರಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆ ವರದಿ ಮಾಡಿದೆ.
ಕರಾಚಿಯ ಕ್ಲಿಫ್ಟನ್ ನಲ್ಲಿ ನೆಲೆಯೂರಿದ್ದ ಶಕೀಲ್ ಅವರು ತಮ್ಮ ನೆಲೆಯನ್ನು ಬದಲಾಯಿಸುವ ಮಾಹಿತಿ ಸಿಕ್ಕಿದೆ. 80ರ ದಶಕದಿಂದ ದಾವೂದ್ ಹಾಗೂ ಶಕೀಲ್ ಕರಾಚಿಯಲ್ಲಿ ನೆಲೆಸಿದ್ದಾರೆ.

ಡಿ ಕಂಪನಿ ನಡೆಸುವ ವಿಚಾರದಲ್ಲಿ ದಾವೂದ್ ಅವರ ಸೋದರ ಅನೀಸ್ ಹಾಗೂ ಛೋಟಾ ಶಕೀಲ್ ನಡುವೆ ವೈಮನಸ್ಯ ಉಂಟಾಗಿತ್ತು. ಈ ವಿಷಯದಲ್ಲಿ ದಾವೂದ್ ಕೂಡಾ ಅನೀಸ್ ಪರ ನಿಂತಿದ್ದು, ಶಕೀಲ್ ನನ್ನು ಕೆರಳಿಸಿತ್ತು.
ಹೀಗಾಗಿ, ಪೂರ್ವ ಏಷ್ಯಾ ದೇಶಗಳಲ್ಲಿ ಹೊಸ ನೆಲೆ ಕಂಡುಕೊಳ್ಳಲು ಶಕೀಲ್ ಯತ್ನಿಸಿದ್ದ. ಈ ಸಂಬಂಧವಾಗಿ ದಾವೂದ್ ಜತೆ ಜಗಳವಾಡಿಕೊಂಡ ಶಕೀಲ್ ಈಗ ಡಿ ಕಂಪನಿಯಿಂದ ಹೊರ ಬಂದಿದ್ದಾನೆ.












Click it and Unblock the Notifications