ಚೆನ್ನೈನಲ್ಲಿ ನಡೆದ ಅಮೇರಿಕದ 248 ನೇ ರಾಷ್ಟ್ರೀಯ ದಿನದ ಅಧ್ಯಕ್ಷತೆವಹಿಸಿದ ಭಾರತದಲ್ಲಿನ ಅಮೇರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ
ಚೆನ್ನೈ ಜುಲೈ 20: ಭಾರತದಲ್ಲಿನ ಅಮೇರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಜುಲೈ 18 ಗುರುವಾರ ಚೆನ್ನೈಯಲ್ಲಿ ಅಮೆರಿಕದ 248ನೇ ರಾಷ್ಟ್ರೀಯ ದಿನಾಚರಣೆಯ ಸಂಭ್ರಮ ಆಚರಿಸಿದರು.
ಎರಿಕ್ ಗಾರ್ಸೆಟ್ಟಿ ಅವರು ಬಾಹ್ಯಾಕಾಶ ಅನ್ವೇಷಣೆ ಮತ್ತು STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಕ್ಷೇತ್ರಗಳಲ್ಲಿ ವಿಸ್ತರಿಸುತ್ತಿರುವ ಯು.ಎಸ್.-ಭಾರತ ಪಾಲುದಾರಿಕೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಅಮೇರಿಕದಲ್ಲಿ 1776ರ ಜುಲೈ 4 ರಂದು ಸ್ವಾತಂತ್ರ್ಯ ಘೋಷಣೆ (ಡಿಕ್ಲರೇಷನ್ ಆಫ್ ಇಂಡಿಪೆಂಡೆನ್ಸ್) ಮಾಡಲಾಯಿತು. ಅದರ ಸ್ಮರಣಾರ್ಥ ಅಮೇರಿಕದ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.ಇದನ್ನು ಫೋರ್ಥ್ ಆಫ್ ಜುಲೈ ಎಂದೂ ಕರೆಯಲಾಗುತ್ತದೆ.

ರಾಯಭಾರಿ ಗಾರ್ಸೆಟ್ಟಿ, ಎರಡೂ ದೇಶಗಳ ನಡುವಣ ಅದರಲ್ಲೂ ಬಾಹ್ಯಾಕಾಶ ತಂತ್ರಜ್ಞಾನ ಮತ್ತು STEM ಶಿಕ್ಷಣ ವಲಯದಲ್ಲಿನ ಸಹಭಾಗಿತ್ವಗಳ ವ್ಯೂಹಾತ್ಮಕ ಸಂಬಂಧಗಳ ಮಹತ್ವವನ್ನು ಸಾರಿದರು. ಅಮೇರಿಕ-ಭಾರತದ ಬಾಹ್ಯಾಕಾಶ ಸಂಬಂಧದಲ್ಲಿ ದಕ್ಷಿಣ ಭಾರತ ಮಹತ್ವದ ಪಾತ್ರವಹಿಸುತ್ತಿದ್ದು, ಈ ವಲಯದಲ್ಲಿನ ಅನೇಕ ಉಪಕ್ರಮಗಳ ಅನುಷ್ಠಾನದಲ್ಲಿ, ಅದರಲ್ಲೂ ವಿಶೇಷವಾಗಿ ನೈಸಾರ್ (ನಾಸಾ-ಇಸ್ರೋ ಸಿಂಥಟಿಕ್ ಅಪರ್ಚರ್ ರಾಡಾರ್) ಮಿಷನ್‌ನ ಸಹಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯರನ್ನು ಕಳುಹಿಸುವ ಬಗ್ಗೆ ತಿಳಿಸಿದರು.
"ಬಾಹ್ಯಾಕಾಶ ನಮ್ಮ ಸಂಕುಚಿತ ಗುರುತುಗಳ ತೆಗೆದೊಗೆದು, ಗಡಿ-ಸಾಗರಗಳ ಮೀರಿ ನಮ್ಮನ್ನು ಜೋಡಿಸುತ್ತದೆ. ಇದು ಇಂಡೋ-ಪೆಸಿಫಿಕ್‌ನಲ್ಲಿ ವಿಶೇಷ ಸಂಬಂಧವನ್ನು ನಿರ್ಮಿಸುತ್ತಿದೆ, ಹಾಗೆಯೇ ಅದನ್ನೂ ಮೀರಿ ಜತೆಯಾಗಿ ಒಂದು ದೊಡ್ಡ ಮಾನವ ಕುಟುಂಬವಾಗಿಸುತ್ತದೆ," ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಪ್ರತಿನಿಧಿಸಿದ್ದ ತಮಿಳುನಾಡಿನ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಾಮೊಳಿ, "ಚೆನ್ನೈನಲ್ಲಿರುವ ಅಮೇರಿಕದ ದೂತಾವಾಸ ಸಂವಹನ ಮತ್ತು ಸಹಕಾರದ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅಮೇರಿಕದ ಕಾನ್ಸುಲೇಟ್‌ನ ಸಹಯೋಗವು ಜಾಗತಿಕ ದೃಷ್ಟಿಕೋನಗಳು, ಸಂಶೋಧನೆ ಮತ್ತು ಉತ್ತಮ ಅಭ್ಯಾಸಗಳನ್ನು ಸಂಯೋಜಿಸುವ ಮೂಲಕ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತದೆ. ನಾವು ಅಮೇರಿಕನ್ ಇತಿಹಾಸದಲ್ಲಿನ ಮೈಲಿಗಲ್ಲನ್ನು ಸ್ಮರಿಸುವ ಈ ಹೊತ್ತಿನಲ್ಲಿ, ತಮಿಳುನಾಡು ಮತ್ತು ಅಮೇರಿಕದ ನಡುವಿನ ಸ್ನೇಹ ಸಂಬಂಧಗಳನ್ನು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ನಮ್ಮ ಯುವಕರು ಮತ್ತು ಸಮುದಾಯಗಳ ಸಮೃದ್ಧ ಭವಿಷ್ಯಕ್ಕಾಗಿ ಅಮೇರಿಕನ್ ದೂತಾವಾಸದ ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಸದುಪಯೋಗಪಡಿಸಿಕೊಳ್ಳುವ ಪಾಲುದಾರಿಕೆ ಮತ್ತು ಸಹಕಾರದ ಮನೋಭಾವವನ್ನು ಮುಂದುವರಿಸೋಣ.."
ಸಮಾರಂಭದಲ್ಲಿ ಹಾಜರಿದ್ದ ಚೆನ್ನೈನಲ್ಲಿನ ಅಮೇರಿಕದ ಕಾನ್ಸಲ್ ಜನರಲ್ ಕ್ರಿಸ್ ಹಾಡ್ಜಸ್, ಮುಖ್ಯ ಅತಿಥಿ ಕಮಲ ಹಾಸನ್, ಅಮೇರಿಕ-ಭಾರತದ ಸಂಬಂಧಗಳ ಬಹುಮುಖಿ ಸ್ವರೂಪ ಅದರಲ್ಲೂ ವಿಶೇಷವಾಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು STEM ಶಿಕ್ಷಣವನ್ನು ಅಭಿವೃದ್ಧಿಪಡಿಸುವಲ್ಲಿನ ಪಾತ್ರದ ಬಗ್ಗೆ ಒತ್ತಿ ಹೇಳಿದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕಮಲ ಹಾಸನ್ ಬಾಹ್ಯಾಕಾಶ ವಿಷಯದ ಸುತ್ತ ಹೆಣೆಯಲಾದ ಅಮೇರಿಕ ರಾಷ್ಟೀಯ ದಿನ ಕಾರ್ಯಕ್ರಮವನ್ನು ಪ್ರಶಂಸಿಸಿದರು, ಇತ್ತೀಚಿನ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರಶಸ್ತಿ ವಿಜೇತ ಯುವ ಗಾಯಕಿ ಐನಾ ಪಡಿಯತ್ ಅಮೇರಿಕದ ರಾಷ್ಟ್ರಗೀತೆಯನ್ನು ಹಾಡಿದರೆ, ಪವಿತ್ರಾ ಚಾರಿ ಭಾರತದ ರಾಷ್ಟ್ರಗೀತೆ ಹಾಡಿದರು.
ಯು.ಎಸ್. ಕಾನ್ಸುಲೇಟ್ ಜನರಲ್ ಚೆನ್ನೈ ಗುರುವಾರ ಜುಲೈ 18, 2024 ರಂದು ಆಯೋಜಿಸಿದ್ದ ಅಮೇರಿಕದ 248 ನೇ ರಾಷ್ಟ್ರೀಯ ದಿನ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಅಮೇರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರ ಭಾಷಣ ನೋಡಲು ಈ ಲಿಂಕ್ ಕ್ಲಿಕ್ಕಿಸಿ
ಚಿತ್ರ ಶೀರ್ಷಿಕೆ ೧: (ಎಡದಿಂದ ಬಲಕ್ಕೆ) ಚೆನ್ನೈನಲ್ಲಿ ಗುರುವಾರ ಜುಲೈ 18, 2024 ರಂದು ನಡೆದ ಅಮೇರಿಕದ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟ ಕಮಲ್ ಹಾಸನ್, ಭಾರತದಲ್ಲಿನ ಅಮೇರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ, ತಮಿಳುನಾಡಿನ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಾಮೊಳಿ, ಮತ್ತು ಚೆನ್ನೈನಲ್ಲಿನ ಅಮೇರಿಕದ ಕಾನ್ಸಲ್ ಜನರಲ್ ಕ್ರಿಸ್ ಹಾಡ್ಜಸ್.
ಚಿತ್ರ ಶೀರ್ಷಿಕೆ ೨: ಚೆನ್ನೈನಲ್ಲಿ ಗುರುವಾರ ಜುಲೈ 18, 2024 ರಂದು ನಡೆದ ಅಮೇರಿಕದ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ 2024ರ ವಿಮೆನ್ ಇನ್ ಸೈನ್ಸ್ ದಕ್ಷಿಣ ಏಷ್ಯಾ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೊಂದಿಗೆ ಭಾರತದಲ್ಲಿನ ಅಮೇರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಚೆನ್ನೈನಲ್ಲಿನ ಅಮೇರಿಕದ ಕಾನ್ಸಲ್ ಜನರಲ್ ಕ್ರಿಸ್ ಹಾಡ್ಜಸ್ ಮತ್ತು ಅವರ ಪತ್ನಿ ಜಾಯ್ಸಿಲಿನ್ ನಾರಾಯಣ್.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications