Get Updates
Get notified of breaking news, exclusive insights, and must-see stories!

Cannes Film Festival 2023: ಜನಪ್ರಿಯ 76ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಇಂದಿನಿಂದ ಆರಂಭ

ನವದೆಹಲಿ ಮೇ 16: ಕೆಲ ದಿನಗಳ ಹಿಂದೆ ಆಸ್ಕರ್ ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲಿ ಹಬ್ಬದ ವಾತಾವರಣವಿತ್ತು. ಒಂದಷ್ಟು ಗ್ಯಾಪ್ ನ ನಂತರ ಇನ್ನೂ ಹತ್ತು ದಿನಗಳ ಕಾಲ ಮತ್ತೊಂದು ಸಂಭ್ರಮಕ್ಕೆ ಹಾಲಿವುಡ್ ರೆಡಿಯಾಗಿದೆ. ಅದೇ ಕೇನ್ಸ್ ಚಲನಚಿತ್ರೋತ್ಸವ. ಮೇ 16 ರಂದು ಕೇನ್ಸ್ ಚಲನಚಿತ್ರೋತ್ಸವದ 76 ನೇ ಆವೃತ್ತಿ ಪ್ರಾರಂಭವಾಗಲಿದೆ. ಈ ಉತ್ಸವವನ್ನು 10 ದಿನಗಳವರೆಗೆ ಅಂದರೆ ಮೇ 27 ರವರೆಗೆ ನಡೆಸಲಾಗುತ್ತದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕ್ಯಾನೆಸ್ ಚಲನಚಿತ್ರೋತ್ಸದಲ್ಲಿ ಸ್ಟಾರ್‌ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ನೃತ್ಯ ಕಲಾವಿದರು, ಸಿಂಗರ್ಸ್ ಇತರರು ಭಾಗಿಯಾಗಲಿದ್ದಾರೆ. ಬಾಲಿವುಡ್‌ನ ಅನೇಕ ದೊಡ್ಡ ತಾರೆಯರು ತಮ್ಮ ಉಪಸ್ಥಿತಿಯೊಂದಿಗೆ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಲಿದ್ದಾರೆ.

ವಿರಾಟ್ ಕೊಹ್ಲಿ ಪತ್ನಿ ಜನಪ್ರಿಯ ನಾಯಕಿ ಅನುಷ್ಕಾ ಶರ್ಮಾ ಈ ಬಾರಿಯ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್ ಅಂತರಾಷ್ಟ್ರೀಯ ಸಿನಿಮಾಗಳ ವಾರ್ಷಿಕ ಆಚರಣೆಯಾಗಿದೆ. ಇದು ಪ್ರಪಂಚದಾದ್ಯಂತದ ನಿರ್ದೇಶಕರು, ನಟರು, ನಿರ್ಮಾಪಕರು, ವಿತರಕರು ಮತ್ತು ಚಲನಚಿತ್ರ ವಿಮರ್ಶಕರನ್ನು ಒಂದೇ ವೇದಿಕೆಯಲ್ಲಿ ತರುತ್ತದೆ. ಹೀಗಾಗಿ ಕೇನ್ಸ್ ಚಲನಚಿತ್ರೋತ್ಸವ ಸಾಕಷ್ಟು ಪ್ರಸಿದ್ಧವಾಗಿದೆ. ವಿಶ್ವದ ಚಲನಚಿತ್ರೋದ್ಯಮದ ಅತ್ಯುತ್ತಮ ಚಲನಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಉತ್ಸವದಲ್ಲಿ, ಎಲ್ಲಾ ಕ್ಷೇತ್ರಗಳ ತಜ್ಞರು ಮತ್ತು ಪರಿಣಿತರು ತೀರ್ಪುಗಾರರ ಸದಸ್ಯರಾಗಿರುತ್ತಾರೆ.

Cannes Film Festival 2023

ಕೇನ್ಸ್ ಚಲನಚಿತ್ರೋತ್ಸವ ಯಾವಾಗ ಮತ್ತು ಎಲ್ಲಿ..?

ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾ ಪ್ರದೇಶದ ಕ್ಯಾನೆಸ್ ಪಟ್ಟಣದಲ್ಲಿ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಈ ಸಮಾರಂಭವನ್ನು ನೇರವಾಗಿ ಕೇನ್ಸ್ ಚಲನಚಿತ್ರೋತ್ಸವದ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಇದಲ್ಲದೆ, ಕಾನ್ಸ್ ಫಿಲ್ಲಿ ಫೆಸ್ಟಿವಲ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಇದನ್ನು ವೀಕ್ಷಿಸಬಹುದು.

ಕೇನ್ಸ್ ಫಿಲ್ಮ್ ಫೆಸ್ಟಿವಲ್ 2023 ರಲ್ಲಿ ಭಾರತದಿಂದ ಎಷ್ಟು ಚಿತ್ರಗಳು..?

ಆಸ್ಕರ್‌ನಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ ಪ್ಯಾನ್ ಇಂಡಿಯಾ ಮೂವಿ ಆರ್‌ಆರ್‌ಆರ್ ಕೇನ್ಸ್‌ನಲ್ಲಿ ನಿರಾಶೆಯಾಗಿ ಉಳಿದಿದೆ. ಆದರೆ ಕಾನು ಭೇಲ್ ಅವರ ಆಗ್ರಾ ಚಿತ್ರ ತೆರೆ ಕಾಣಲಿದೆ. ಹಿರಿಯ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಕೆನಡಿ ಚಿತ್ರವೂ ಪ್ರದರ್ಶನಗೊಳ್ಳಲಿದೆ. ಅದರಲ್ಲಿ ಸನ್ನಿ ಲಿಯೋನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯುಧಾಜಿತ್ ಬಸು ಅವರ ನೆಹಿಮಿಕ್ ಸಿನಿಮಾ ಕೂಡ ಲಾ ಸಿನೆಫ್ ವಿಭಾಗದಲ್ಲಿ ಪ್ರೀಮಿಯರ್ ಆಗಲಿದೆ. ಮಣಿಪುರಿ ಸಿನಿಮಾ ಇಶಾನ್ಹೋ ಕ್ಲಾಸಿಕ್ ವಿಭಾಗದಲ್ಲಿ ತೆರೆಕಾಣಲಿದೆ.

Cannes Film Festival 2023

1946 ರಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಅನ್ನು ಪ್ರಾರಂಭಿಸಲಾಯಿತು. ಈ ಪ್ರತಿಷ್ಠಿತ ಉತ್ಸವದ ಪ್ರಾರಂಭದಿಂದಲೂ ಹಿಂದಿ ಚಲನಚಿತ್ರಗಳು ಉತ್ಸವದಲ್ಲಿ ಪ್ರಾಬಲ್ಯ ಹೊಂದಿವೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಯಾವ ಚಲನಚಿತ್ರವನ್ನು ಮೊದಲು ಪ್ರದರ್ಶಿಸಲಾಯಿತು ಮತ್ತು ಇದುವರೆಗೆ ಯಾವ ಚಲನಚಿತ್ರಗಳನ್ನು ಗೌರವಿಸಲಾಗಿದೆ? ನೋಡೋಣ.

*1946 ರಲ್ಲಿ ಕೇನ್ಸ್ ಚಲನಚಿತ್ರೋತ್ಸವ ಮೊದಲು ಪ್ರಾರಂಭಿಸಿದಾಗ ಭಾರತೀಯ ಚಲನಚಿತ್ರ 'ನೀಚಾ ನಗರ್' ಉತ್ಸವದ ಪಾಮ್ ಡಿ'ಓರ್ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯಿತು. ಚಿತ್ರವನ್ನು ಚೇತನ್ ಆನಂದ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಚೇತನ್ ಆನಂದ್ ಅವರ ಪತ್ನಿ ಉಮಾ ಆನಂದ್, ರಫೀಕ್ ಅನ್ವರ್, ಕಾಮಿನಿ ಕೌಶಲ್ ಮತ್ತು ಜೋಹ್ರಾ ಸೆಹಗಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರವಿಶಂಕರ್ ಸಂಗೀತ ನೀಡಿದ್ದಾರೆ.

Cannes Film Festival 2023

*1946ರ ನಂತರ, 1954 ರಲ್ಲಿ ಬಿಮಲ್ ರಾಯ್ ಅವರ ಚಲನಚಿತ್ರ 'ದೋ ಬಿಘಾ ಜಮೀನ್' ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿತು. ಇದರ ಜೊತೆಗೆ 1955ರ ಬೇಬಿ ನಾಜ್ ಅವರ 'ಬೂಟ್ ಪಾಲಿಷ್' ಚಿತ್ರ 'ಬಾಲ ಕಲಾವಿದ' ಪ್ರಶಸ್ತಿಯನ್ನು ಪಡೆಯಿತು.

*1954 ರಿಂದ 1957 ರವರೆಗೆ ವಿಭಿನ್ನ ಹಿಂದಿ ಚಲನಚಿತ್ರಗಳು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾದಾರ್ಪಣೆ ಮಾಡಿದವು. ಸತ್ಯಜಿತ್ ರೇ ಅವರ ಬಂಗಾಳಿ ಚಿತ್ರ 'ಪಥೇರ್ ಪಾಂಚಾಲಿ' ಅತ್ಯುತ್ತಮ ಮಾನವ ದಾಖಲೆ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

ಈ ಚಿತ್ರಗಳು 1983 ರಲ್ಲಿ ಗೌರವವನ್ನು ಪಡೆದವು:-

60ರ ದಶಕದ ಅವಧಿಯಲ್ಲಿ ಹಿಂದಿಯ ಅನೇಕ ಚಲನಚಿತ್ರಗಳು ಪ್ರಶಸ್ತಿ ಪಡೆದಿವೆ. ಜೊತೆಗೆ ಭಾರತದ ಅನೇಕ ದೊಡ್ಡ ಚಲನಚಿತ್ರಗಳು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿವೆ ಮತ್ತು ಅನೇಕ ಚಲನಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ.

*1983 ರಲ್ಲಿ ಬೆಂಗಾಲಿ ಮತ್ತು ಹಿಂದಿ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ ಅವರ ಚಲನಚಿತ್ರ 'ಖರ್ಜಿ' ಜ್ಯೂರಿ ಪ್ರಶಸ್ತಿ ವಿಭಾಗದಲ್ಲಿ ಗೌರವಿಸಲ್ಪಟ್ಟರೆ, ನಿರ್ದೇಶಕಿ ಮೀರಾ ನಾಯರ್ ಅವರ ಚಲನಚಿತ್ರ 'ಸಲಾಮ್ ಬಾಂಬೆ' ಕ್ಯಾಮೆರಾ ಡಿ'ಓರ್ ಉಲ್ಲೇಖ ವಿಶೇಷ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯಿತು.

*ಇದಲ್ಲದೆ 1998ರಲ್ಲಿ ಮುರಳಿ ನಾಯರ್ ಅವರ ಡೆತ್ ಥ್ರೋನ್, ಮನೀಶ್ ಝಾ ಅವರ 'ಎ ವೆರಿ ವೆರಿ ಸೈಲೆಂಟ್ ಫಿಲ್ಮ್', ಗೀತಾಂಜಲಿ ರಾವ್ ಅವರ 'ಪ್ರಿಂಟೆಡ್ ರಾಂಬೋ', 2013 ರಲ್ಲಿ ರಿತೇಶ್ ಬಾತ್ರಾ ಅವರ ದಿ ಲಂಚ್‌ಬಾಕ್ಸ್ ಅನ್ನು ವಿವಿಧ ವಿಭಾಗಗಳಲ್ಲಿ ಪ್ರದರ್ಶಿಸಿ ಗೌರವಿಸಲಾಯಿತು.

*2015ರಲ್ಲಿ ನೀರಜ್ ಘಯ್ವಾನ್ ಅವರ 'ಮಸಾನ್' ಚಲನಚಿತ್ರವನ್ನು ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ವಿಕ್ಕಿ ಕೌಶಲ್ ಮತ್ತು ರಿಚಾ ಚಡ್ಡಾ ಮುಂತಾದ ತಾರೆಯರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

*ಇನ್ನೂ 2021 ರಲ್ಲಿ ಪಾಯಲ್ ಕಪಾಡಿಯಾ ಅವರ 'ಎ ನೈಟ್ ಆಫ್ ನೋಯಿಂಗ್ ನಥಿಂಗ್' ಚಲನಚಿತ್ರದ ಪ್ರದರ್ಶನದ ನಂತರ, ಇದನ್ನು ಗೋಲ್ಡನ್ ಐ ವಿಭಾಗದಲ್ಲಿ ಗೌರವಿಸಲಾಯಿತು. ಇದಲ್ಲದೆ ಶೌನಕ್ ಸೇನ್ ಅವರ ಆಲ್ ದಿ ಬ್ರೀತ್ಸ್ ಅನ್ನು 'ಗೋಲ್ಡನ್ ಐ' ನಲ್ಲಿ ಗೌರವಿಸಲಾಯಿತು.

*ಜೊತೆಗೆ 2022 ಉತ್ಸವದಲ್ಲಿ ನಟ ಟಾಮ್ ಕ್ರೂಸ್ ಅವರಿಗೆ ಗೌರವ ಸಲ್ಲಿಸಲಾಯಿತು. ಅವರ ಚಲನಚಿತ್ರ ಟಾಪ್ ಗನ್: ಮೇವರಿಕ್ ಉತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ಅಲ್ಲಿ ನಟನಿಗೆ ಗೌರವ ಪಾಮ್ ಡಿ'ಓರ್ ಪ್ರಶಸ್ತಿಯನ್ನು ನೀಡಲಾಯಿತು. ಈ ಬಾರಿ ಯಾವ ಚಿತ್ರಕ್ಕೆ ಪಾಮ್ ಡಿ'ಓರ್ ಪ್ರಶಸ್ತಿ ಸಂದಲಿದೆ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+