• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆನಡಾದಲ್ಲಿ ಕೊರೊನಾ ವೈರಸ್‌ಗೆ ಮೊದಲ ಬಲಿ

|

ವೊಟ್ಟಾವಾ, ಮಾರ್ಚ್ 10: ಕೆನಡಾದಲ್ಲಿ ಕೊರೊನಾ ವೈರಸ್ ಮೊದಲ ಬಲಿ ಪಡೆದಿದೆ. ಇದುವರೆಗೆ ಕೆನಡಾದಲ್ಲಿ 71 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ.

ರೋಗಿಯು ಬ್ರಿಟಿಷ್ ಕೊಲಂಬಿಯಾದ ಲಿನ್ ವ್ಯಾಲಿ ಕೇರ್ ಸೆಂಟರ್‌ನಲ್ಲಿದ್ದ ದಾಖಲಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ರೋಗಿಯ ಸಾವಿಗೆ ಆರೋಗ್ಯಾಧಿಕಾರಿ ಡಾ. ಬಾನಿ ಹೆನ್ರಿ ವಿಷಾದ ವ್ಯಕ್ತಪಡಿಸಿದ್ದಾರೆ. ಸೋಮವಾರ ರಾತ್ರಿ ರೋಗಿ ಸಾವನ್ನಪ್ಪಿದ್ದಾನೆ.

ಇಟಲಿ ಟು ಪಂಜಾಬ್: ಕೊರೊನಾ ಹೊತ್ತು ತಂದವನ ಕಥೆ

ಶನಿವಾರದ ವರೆಗೆ ಹೊಸ 14 ಪ್ರಕರಣಗಳು ದಾಖಲಾಗಿದ್ದವು.ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 3136ಕ್ಕೆ ಏರಿಕೆಯಾಗಿದೆ. 80,750 ಮಂದಿ ಕೊರೊನಾಕ್ಕೆ ತುತ್ತಾಗಿದ್ದಾರೆ. 59 ಸಾವಿರ ಮಂದಿ ಗುಣಮುಖರಾಗುತ್ತಿದ್ದಾರೆ.

ಕರ್ನಾಟಕದಲ್ಲಿ ಮೊದಲ ಕೊರೊನಾ ಪಾಸಿಟಿವ್‌ ಕೇಸ್‌ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಅಮೆರಿಕದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಪ್ರಕರಣವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಖಚಿತಪಡಿಸಿದ್ದಾರೆ.

40 ವರ್ಷದ ಟೆಕ್ಕಿಯಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿದ್ದು, ಅಮೆರಿಕದಿಂದ ಮಾರ್ಚ್‌ 1ರಂದು ಬೆಳಗ್ಗೆ 8.30ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿ, ಆತನ ಪತ್ನಿ, ಮಗು, ಚಾಲಕನನ್ನು ಪ್ರತ್ಯೇಕವಾಗಿ ಇಡಲಾಗಿದೆ.

ಈಜಿಪ್ಟ್ ಹಡಗಿನಲ್ಲೂ ಕೊರೊನಾ ವೈರಸ್ ಹಾವಳಿ; 18 ಭಾರತೀಯರು ಗಲಿಬಿಲಿ!

ಸೋಂಕಿತನನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಬೆಂಗಳೂರಿನಲ್ಲಿ ಕೊರೊನಾ ಪತ್ತೆ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ 5ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

English summary
Canada Reported its First Death from Coronavirus on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X