Canada: ಅಮೆರಿಕದ ವಿರುದ್ಧ ರೊಚ್ಚಿಗೆದ್ದ ಕೆನಡಾ, ಹಲವು ಯೋಜನೆಗಳು ದಿಢೀರ್ ಕ್ಯಾನ್ಸಲ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಕೈಗೊಂಡಿರುವ ಕ್ರಮಗಳು ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಕೋಲಾಹಲ ಸೃಷ್ಟಿಸಿದೆ. ಅದರಲ್ಲೂ ತೆರಿಗೆ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಈಗ ಕೈಗೊಂಡಿರುವ ಕ್ರಮ ಸ್ವತಃ ಅಮೆರಿಕದ ಮಿತ್ರ ದೇಶಗಳು ಕೂಡ ತಿರುಗಿಬೀಳುವ ರೀತಿ ಮಾಡಿದೆ. ಹೀಗಿದ್ದಾಗಲೇ ಕೆನಡಾ ಕೂಡ ಸೇಡಿಗೆ ಸೇಡು ತೀರಿಸಿಕೊಳ್ಳಲು ಅಮೆರಿಕ ವಿರುದ್ಧ ಮಹತ್ವದ ಕ್ರಮಕ್ಕೆ ಆದೇಶ ನೀಡಿದೆ. ಇದು ಎರಡೂ ದೇಶಗಳ ನಡುವೆ ಸಂಬಂಧ ಹಾಳಾಗಿ ಹೋಗುವಂತೆ ಮಾಡಿದೆ.

ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್, ಪನಾಮ ವಿಚಾರದ ಬಗ್ಗೆ ಮಾತನಾಡಿ ವೈರಲ್ ಆಗಿದ್ದರು. ಆ ನಂತರ ಕೆನಡಾ ನೆಲದ ವಿಚಾರವನ್ನೂ ಪ್ರಸ್ತಾಪ ಮಾಡಿ ಇಡೀ ಕೆನಡಾ ದೇಶದ ನೆಲವನ್ನು ಅಮೆರಿಕಗೆ ಸೇರಿಸಿಕೊಳ್ಳುವ ಪ್ರಸ್ತಾಪ ಮಾಡಿದ್ದರು. ಇದಾದ ಬಳಿಕ ಕೆನಡಾ ಕೂಡ ಸರಿಯಾಗೇ ತಿರುಗೇಟು ನೀಡಿತ್ತು, ಅಲ್ಲಿಂದ ಇಬ್ಬರ ನಡುವೆ ದೊಡ್ಡ ಜಟಾಪಟಿ ಶುರುವಾಗಿತ್ತು. ಇದೀಗ ಕೆನಡಾ ಮೂಲಕ ಬರುವ ಎಲ್ಲಾ ವಸ್ತುಗಳಿಗೆ ಬರೋಬ್ಬರಿ ಶೇಕಡಾ 25 ರಷ್ಟು ಟ್ಯಾಕ್ಸ್ ಹಾಕುವ ಆದೇಶಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರ ಕಿಚ್ಚು ಹೊತ್ತಿಸಿದ್ದು, ದೊಡ್ಡ ಗಲಾಟೆಗೆ ಕೂಡ ಕಾರಣವಾಗಿದೆ.

Canada Cancels Starlink Deal And Threatens US Electricity Cuts Over Tariffs

ಸೇಡಿಗೆ ಸೇಡು ತೀರಿಸಿಕೊಂಡ ಕೆನಡಾ!

ಅಂದಹಾಗೆ ಅಮೆರಿಕ ತಮ್ಮ ವಿರುದ್ಧ ತೆರಿಗೆ ಹೇರಿಕೆ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಕೆನಡಾ, ಭಾರಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಆ ಪ್ರಕಾರ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಜೊತೆ ಮಾಡಿಕೊಂಡಿದ್ದ 100 ಮಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದ ಮುರಿದು ಹಾಕಿ ಎಳ್ಳುನೀರು ಬಿಟ್ಟಿದ್ದು, ಮತ್ತೊಂದು ಕಡೆ ಅಮೆರಿಕಗೆ ಕೆನಡಾ ಸರಬರಾಜು ಮಾಡುತ್ತಿದ್ದ ವಿದ್ಯುತ್ ಕಡಿತಗೊಳಿಸಲು ನಿರ್ಧಾರ ಮಾಡಿದೆ. ಈ ಮೂಲಕ ಅವರಿಗೆ ಕೂಡ ನೋವು ಗೊತ್ತಾಗಲಿ ಎಂದು ಗುಡುಗಿದೆ ಕೆನಡಾ. ಇನ್ನೊಂದು ಕಡೆ ಕೆನಡಾ ಘೋಷಿಸಿರುವ ಈ ನಿರ್ಧಾರ ಭವಿಷ್ಯದಲ್ಲಿ ಅಮೆರಿಕದ ಪ್ರಜೆಗಳಿಗೆ ಸಮಸ್ಯೆ ಮಾಡುವ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+