ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಲು ಪುಟಿನ್ ಪ್ರೇಯಸಿಯ ಒಂದು ಮಾತು ಸಾಕೇ!?
ಕೀವ್, ಮಾರ್ಚ್ 23: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸುವಂತೆ ಯಾರು ಏನೇ ಜಪ್ಪಯ್ಯಾ ಎಂದರೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತ್ರ ಕ್ಯಾರೇ ಅಂತಿಲ್ಲ. ಇದರ ಮಧ್ಯೆ ಯುದ್ಧ ನಿಲ್ಲಿಸುವುದಕ್ಕೆ ಪುಟಿನ್ ಪ್ರೇಯಸಿಯಿಂದ ಸಾಧ್ಯವಾಗುತ್ತದೆಯೇ ಎಂಬ ಸುದ್ದಿ ಹರಿದಾಡುತ್ತಿದೆ.
"ಪ್ಲೀಸ್. ದಯವಿಟ್ಟು ನೀವೊಮ್ಮೆ ರಷ್ಯಾಗೆ ಹೋಗಿ. ನೀವಾದರೂ ವ್ಲಾಡಿಮಿರ್ ಪುಟಿನ್ ಅವರ ಮನವೊಲಿಸಿ. ಉಕ್ರೇನ್ ಮೇಲೆ ಮುರಿದು ಬಿದ್ದಿರುವ ರಷ್ಯಾದ ಯುದ್ಧವನ್ನು ನಿಲ್ಲಿಸಿ, ಅಮಾಯಕರ ಜೀವವನ್ನು ರಕ್ಷಿಸಿ," ಇಂಥ ಮನವಿಗಳು ಹಾಗೂ ಸಂದೇಶಗಳು ಪುಟಿನ್ ಪ್ರೇಯಸಿಗೆ ಬರುತ್ತಿವೆ.
ಪುಟಿನ್ ಖಾಸಗಿ ಬದುಕು ಊಹಿಸಿದ್ದಕ್ಕಿಂತ ಭಿನ್ನವಾಗಿದೆ. ಪುಟಿನ್ 2014 ರಲ್ಲಿ ತನ್ನ ಮೊದಲ ಪತ್ನಿ ಲ್ಯುಡ್ಮಿಲಾ ಒಚೆರೆಟ್ನಾಯಾಗೆ ವಿಚ್ಛೇದನ ನೀಡಿದರು. ಅವರು ತಮ್ಮ ಖಾಸಗಿ ಜೀವನ ರಕ್ಷಿಸುವಲ್ಲಿ ಆಕ್ರಮಣಕಾರಿಯಾಗಿದ್ದಾರೆ ಎಂದು ಕರೆದರು. ನಂತರ ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಅಲೀನಾ ಕಬೇವಾ ಜೊತೆ ವಿವಾಹವಾಗಿರುವ ವ್ಲಾಡಿಮಿರ್ ಪುಟಿನ್ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ ಎಂಬ ವದಂತಿಗಳೂ ಇವೆ. ಇಂದು ಅದೇ ಅಲೀನಾ ಕಬೇವಾ ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧವನ್ನು ನಿಲ್ಲಿಸುತ್ತಾರಾ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಅಲೀನಾ ಕಬೇವಾ ಯಾರು ಗೊತ್ತಾ?
ಪುಟಿನ್‌ನ ಹಿಟ್ಲರ್‌ಗೆ "ಇವಾ ಬ್ರೌನ್" ಎಂದು ಕರೆಯಲ್ಪಟ್ಟ ಕಬೇವಾ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತಮ್ಮ ಮಕ್ಕಳೊಂದಿಗೆ ಭದ್ರಕೋಟೆಯ ಕಾವಲಿನಲ್ಲಿ ವಾಸವಾಗಿದ್ದಾರೆ ಎಂಬ ವದಂತಿಗಳಿವೆ. ಅಲ್ಲದೇ ಹಲವು ಹೆಸರುಗಳಲ್ಲಿ ಪಾಸ್ ಪೋರ್ಟ್ ಅನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವದ ಅತ್ಯಂತ ಅಲಂಕರಿಸಿದ ಲಯಬದ್ಧ ಜಿಮ್ನಾಸ್ಟ್‌ಗಳಲ್ಲಿ ಆಲೀನಾ ಕಬೇವಾ ಕೂಡಾ ಒಬ್ಬರಾಗಿದ್ದಾರೆ. ದೂರದರ್ಶನ ಚಾಟ್ ಶೋ ಅನ್ನು ಆಯೋಜಿಸಿದ್ದ ಅವರು, ರಷ್ಯಾದ ಸಂಸತ್ತಿನ ಕ್ರೆಮ್ಲಿನ್ ಪರ ಸದಸ್ಯರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಕಳೆದ 2004ರ ಒಲಂಪಿಕ್ಸ್‌ನಲ್ಲಿ ಚಿನ್ನವನ್ನು ಗೆದ್ದಿದ್ದ ಕಬೇವಾ, ಸೋಚಿಯಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ರಷ್ಯಾಕ್ಕೆ ಪದಕ ತಂದು ಕೊಟ್ಟಿದ್ದರು. ಕ್ರೀಡೆಯಲ್ಲಿ 14 ವಿಶ್ವ ಚಾಂಪಿಯನ್‌ಶಿಪ್ ಪದಕಗಳು ಮತ್ತು 21 ಯುರೋಪಿಯನ್ ಚಾಂಪಿಯನ್‌ಶಿಪ್ ಪದಕಗಳನ್ನು ಪಡೆದುಕೊಂಡಿದ್ದಾರೆ.
ಇತ್ತೀಚಿನ ವರದಿಯಲ್ಲಿ ಕಬೇವಾ ಅವರ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬಾರಿ ಬಾರಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಷ್ಯಾಗೆ ಹಿಂತಿರುಗಿ ಹೋಗಿ ಯುದ್ಧವನ್ನು ನಿಲ್ಲಿಸುವಂತೆ ಪುಟಿನ್ ಮನವೊಲಿಸಲು ಕಬೇವಾ ಬಳಿ ಬೇಡಿಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಲಾಗುತ್ತಿದೆ. ಆದರೆ ಪುಟಿನ್ ಭದ್ರಕೋಟೆಯನ್ನು ಭೇದಿಸಿ ಅವರನ್ನು ತಲುಪುವುದು ಅಷ್ಟು ಸುಲಭದ ಮಾತಾಗಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ವರದಿ ಹೇಳಿದೆ.

ಉಕ್ರೇನ್ ಮೇಲಿನ ದಾಳಿ ನಿಲ್ಲಿಸಲು ಪುಟಿನ್ ಮೇಲೆ ಒತ್ತಡ
ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ಜಾಗತಿಕ ಮಟ್ಟದಲ್ಲಿ ರಷ್ಯಾ ದೊಡ್ಡ ಮಟ್ಟದ ನಿರ್ಬಂಧವನ್ನು ಎದುರಿಸುತ್ತಿದೆ. ಹೀಗಾಗಿ ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸುವಂತೆ ಪುಟಿನ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮುಂದುವರಿದ ರಾಷ್ಟ್ರಗಳ ಒತ್ತಡದ ಹೊರತಾಗಿ, ಅಲೀನಾ ಕಬೇವಾ ಮಧ್ಯಪ್ರವೇಶದಿಂದ ಸಂಧಾನ ಪ್ರಕ್ರಿಯೆಯು ಮುಂದಿನ ಹಂತಕ್ಕೆ ತಲುಪಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವ್ಲಾಡಿಮಿರ್ ಪುಟಿನ್ ಹತ್ತಿರದ ಪ್ರೇಯಸಿ ಸಲಹೆ ಹಾಗೂ ಹೆಚ್ಚು ವರ್ಕ್ ಔಟ್ ಆಗುತ್ತದೆ. ಸಂಧಾನ ಮಾತುಕತೆಯ ತೂಕ ಹೆಚ್ಚಾಗಲಿದೆ. ಉಕ್ರೇನ್ ಮೇಲೆ ಪುಟಿನ್ ಜಿದ್ದು ಕೊಂಚ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಅಲೀನಾ ಕಬೇವಾ ವಿರುದ್ಧ ಸಹಿ ಸಂಗ್ರಹಕ್ಕೆ ಕಾರಣವೂ ಇದೆ
ಉಕ್ರೇನ್ ಪರವಾಗಿ ಅಲೀನಾ ಕಬೇವಾ ವಕಾಲತ್ತು ವಹಿಸಿದರೆ ಯುದ್ಧ ನಿಲ್ಲಿಸುವುದಕ್ಕೆ ಸಾಧ್ಯ ಎಂಬುದು ಸೃಷ್ಟಿಸಿದ ಹಸಿ ಸುಳ್ಳು ಎಂದು ಕೆಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಸ್ವತಃ ಪುಟಿನ್ ಆಪ್ತ ವಲಯಗಳೇ ಇಂಥದೊಂದು ಸುದ್ದಿಯನ್ನು ಸೃಷ್ಟಿಸಿ ಹರಿ ಬಿಡುತ್ತಿವೆ. ಏಕೆಂದರೆ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದಲ್ಲಿ ಇದೇ ಕಬೇವಾ ಅನ್ನು ಯುದ್ಧ ಅಪರಾಧಿ ಎಂದು ಬಿಂಬಿಸಲಾಗುತ್ತಿತ್ತು. ದೇಶದಲ್ಲಿ ಈಗಾಗಲೇ ಅವರ ವಿರುದ್ಧ ಸಾರ್ವಜನಿಕ ಅಭಿಪ್ರಾಯದಲ್ಲಿ ಸಹಿ ಸಂಗ್ರಹವನ್ನು ನಡೆಸಲಾಗುತ್ತಿದೆ. 50,000ಕ್ಕೂ ಹೆಚ್ಚು ಜನರು ಸಹಿ ಸಂಗ್ರಹಣವನ್ನು ಮಾಡಿದ್ದು, ಸ್ವಿಟ್ಜರ್ಲೆಂಡ್ ನಿಂದ ಕಬೇವಾರನ್ನು ಗಡೀಪಾರು ಮಾಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

ದೇಶದಲ್ಲಿ ಸಂದೇಹವಾದಿಗಳ ವಿರುದ್ಧ ಕೆರಳಿದ ಪುಟಿನ್
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದಿಂದ ಸಂತ್ರಸ್ತರಾದ ಪ್ರತಿಯೊಬ್ಬ ರಷ್ಯನ್ನರ ಪರವಾಗಿ ನಿಲ್ಲುತ್ತೇನೆ. "ಇಲ್ಲಿ ಹಣವನ್ನು ಗಳಿಸುವವರು, ಆದರೆ ಅಲ್ಲಿ ವಾಸಿಸುವವರನ್ನು ಕ್ರೆಮ್ಲಿನ್ ಐದನೇ ಗುಂಪಿನಲ್ಲಿ ನೋಡುತ್ತದೆ. ಅದು "ನಮ್ಮ ಸಮಾಜವನ್ನು ವಿಭಜಿಸುತ್ತದೆ ಎಂದು ಹೇಳಿದರು.
"ಮಿಯಾಮಿ ಅಥವಾ ಫ್ರೆಂಚ್ ರಿವೇರಿಯಾದಲ್ಲಿ ವಿಲ್ಲಾಗಳನ್ನು ಹೊಂದಿರುವವರು ಎಂಬುದಾಗಿ ನಾನು ನಿರ್ಣಯಿಸುವುದಿಲ್ಲ. ಸಿಂಪಿ ಅಥವಾ ಫೊಯ್ ಗ್ರಾಸ್ ಅಥವಾ 'ಲಿಂಗ ಸ್ವಾತಂತ್ರ್ಯ' ಬಗ್ಗೆ ಮಾತನಾಡುವವರು ಇಲ್ಲದಿರಲು ಸಾಧ್ಯವಿಲ್ಲ. ಆದರೆ ಸಮಸ್ಯೆ ಎಂದರೆ ಅವರು ಮಾನಸಿಕವಾಗಿ ನಮ್ಮ ಜನರೊಂದಿಗೆ, ರಷ್ಯಾದೊಂದಿಗೆ ಇಲ್ಲ, ಬದಲಿಗೆ ಅವರೆಲ್ಲ ಅಲ್ಲಿದ್ದಾರೆ," ಎಂದು ದೂಷಿಸಿದರು.

28ನೇ ದಿನಕ್ಕೆ ಕಾಲಿಟ್ಟ ಉಕ್ರೇನ್-ರಷ್ಯಾ ಯುದ್ಧ
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವು 28ನೇ ದಿನಕ್ಕೆ ಕಾಲಿಟ್ಟಿದೆ. ಎರಡು ರಾಷ್ಟ್ರಗಳ ನಡುವೆ ನಡೆದ ಶಾಂತಿ ಮಾತುಕತೆಗಳು ವಿಫಲವಾಗುತ್ತಿವೆ. ರಷ್ಯಾ ವಿಧಿಸುತ್ತಿರುವ ಷರತ್ತು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ.
ರಷ್ಯಾದ ಪೈಲಟ್‌ಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, "ಅವರು ನಡೆಸುವ ಆದೇಶಗಳ ಬಗ್ಗೆ ಯೋಚಿಸದ ಎಲ್ಲಾ ರಷ್ಯಾದ ಪೈಲಟ್‌ಗಳಿಗೆ ನಾನು ಮತ್ತೊಮ್ಮೆ ಪುನರಾವರ್ತಿಸಿ ಹೇಳಲು ಬಯಸುತ್ತೇನೆ. ನಾಗರಿಕರನ್ನು ಕೊಲ್ಲುವುದು ಅಪರಾಧ, ಅದಕ್ಕೆ ನೀವು ಬೆಲೆ ತೆರಬೇಕಾಗುತ್ತದೆ" ಎಂದು ಝೆಲೆನ್ಸ್ಕಿ ಹೇಳಿದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications