California Wildfire: ಬೆಂಕಿ ಬಿದ್ದ ಮನೆಗಳಿಗೆ ನುಗ್ಗುತ್ತಿರುವ ಕಳ್ಳರು, ಶುರುವಾಯ್ತು ಹೊಸ ತಲೆನೋವು!
ಅಮೆರಿಕ ಕಾಡಿನ ಬೆಂಕಿ ಅಟ್ಟಹಾಸಕ್ಕೆ ಬೆಂದು ಹೋಗಿದ್ದು, ಜನರು ಜೀವ ಉಳಿಸಿಕೊಂಡು ಬದುಕುವುದೇ ಕಷ್ಟವಾಗಿದೆ. ಹಾಲಿವುಡ್ ತವರು & ಸಿಲಿಕಾನ್ ವ್ಯಾಲಿ ಎಂಬ ಖ್ಯಾತೆ ಪಡೆದ ಕ್ಯಾಲಿಫೋರ್ನಿಯ & ಲಾಸ್ ಏಂಜಲೀಸ್ ಪ್ರದೇಶದಲ್ಲಿ ಬೆಂಕಿ ಧಗಧಗ ಹೊತ್ತಿ ಉರಿಯುತ್ತಿದೆ. ಅತಿಹೆಚ್ಚು ಆದಾಯ ಬರುವ & ಅತಿಹೆಚ್ಚು ಶ್ರೀಮಂತರು ಇರುವ ಪ್ರದೇಶದಲ್ಲೇ ಕಾಡ್ಗಿಚ್ಚು ಈಗ ಧಗಧಗ ಹೊತ್ತಿ ಉರಿಯುತ್ತಿದೆ. ಇಂತಹ ಸಮಯದಲ್ಲೇ ಹೊಸ ಸಮಸ್ಯೆ ಶುರುವಾಗಿದೆ.
ಚಳಿಗಾಲದ ಸಮಯದಲ್ಲಿ ಕಾಡಿಗೆ ಬೆಂಕಿ ಬೀಳಲು ಹೇಗೆ ಸಾಧ್ಯ? ಅನ್ನೋ ಪ್ರಶ್ನೆ ಈಗ ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ಕ್ಯಾಲಿಫೋರ್ನಿಯ & ಲಾಸ್ ಏಂಜಲೀಸ್ ಪ್ರದೇಶಗಳು ಇದೀಗ ನಡುಗಿ ಹೋಗಿವೆ. ಲಕ್ಷಾಂತರ ಜನರು ಊರು ಬಿಟ್ಟು ಓಡಿ ಹೋಗಿದ್ದರೆ, ಹತ್ತಾರು ಸಾವಿರ ಕಟ್ಟಡಗಳು ಸುಟ್ಟು ಭಸ್ಮವಾಗಿವೆ. ಪರಿಸ್ಥಿತಿ ಕೈಮೀರಿದ ವೇಳೆ ಹೊಸ ಸಮಸ್ಯೆ ಇದೀಗ ಕಾಡುತ್ತಿದೆ. ಬೆಂಕಿ ಬಿದ್ದ ಮನೆಗಳಿಗೆ ನುಗ್ಗುತ್ತಿರುವ ಕಳ್ಳರು ಹೊಸ ಭಯ ಹುಟ್ಟಿಸಿದ್ದಾರೆ!

ಕಾಡಿನ ಬೆಂಕಿ ಜೊತೆ ಕಳ್ಳರ ಕಾಟ!
ಹೌದು, ಕ್ಯಾಲಿಫೋರ್ನಿಯ & ಲಾಸ್ ಏಂಜಲೀಸ್ ಪ್ರದೇಶಗಳು ಧಗಧಗ ಹೊತ್ತಿ ಉರಿಯುವಾಗ ಕಳ್ಳರು ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದಾರೆ. 20,000ಕ್ಕೂ ಹೆಚ್ಚು ಕಟ್ಟಡ & ಮನೆಗಳು ಇದೀಗ ಕಾಡಿನ ಬೆಂಕಿಗೆ ಬಲಿಯಾಗಿವೆ. ಹೀಗೆ ಸುಟ್ಟು ಭಸ್ಮವಾಗಿರುವ ಮನೆಗಳು & ಕಟ್ಟಡಗಳಿಗೆ ನುಗ್ಗುತ್ತಿರುವ ಕಳ್ಳರ ಪಡೆ ಲೂಟಿ ಮಾಡಲು ಶುರು ಮಾಡಿದೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ.
ಸಾವಿರಾರು ಕಟ್ಟಡಗಳು ಸುಟ್ಟು ಭಸ್ಮವಾಗಿದ್ದು, ಮನೆಗಳ ಮಾಲೀಕರು ಕಾಡ್ಚಿಚ್ಚಿನ ಭಯ & ಆತಂಕದ ನಡುವೆ ಊರು ಖಾಲಿ ಮಾಡಿ ಹೊರಗೆ ಹೋಗಿದ್ದಾರೆ. ಈ ಸಮಯದಲ್ಲೇ ಮನೆ, ಕಟ್ಟಡಗಳ ಒಳಗೆ ಇರುವ ಬೆಲೆಬಾಳುವ ವಸ್ತುಗಳು ಹಾಗೂ ಹಣ ಮತ್ತಿತರ ವಸ್ತುಗಳನ್ನ ಕದ್ದು ಪರಾರಿ ಆಗುತ್ತಿದ್ದಾರೆ ಕಳ್ಳರು ಎಂಬ ಆರೋಪ ಕೇಳಿ ಬಂದಿದೆ. ಈ ರೀತಿ ಕಳ್ಳತನ ಮಾಡ್ತಿದ್ದ ಹತ್ತಾರು ಕಳ್ಳರನ್ನು ಈಗಾಗಲೇ ಬಂಧಿಸಿ ಕಂಬಿ ಹಿಂದೆ ತಳ್ಳಲಾಗಿದೆ. ಮತ್ತಷ್ಟು ಕಳ್ಳರು ಇದೇ ರೀತಿ ಆ ಭಾಗದಲ್ಲಿ ಇರುವ ಅನುಮಾನ ಮೂಡಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ.
ಅಮೆರಿಕ ಕಾಡ್ಗಿಚ್ಚು ಮತ್ತಷ್ಟು ಭೀಕರ
ಹೀಗೆ ಹಬ್ಬಿರುವ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಕಾಡ್ಗಿಚ್ಚು ಇದೀಗ ಅಂತಿಮವಾಗಿ ಘನಘೋರ ಹಂತಕ್ಕೆ ಬಂದು ನಿಂತಿದೆ. ಜನ ಕೂಡ ಭಯಪಟ್ಟು ನರಳುತ್ತಿದ್ದು, ಮುಂದಿನ ಪರಿಸ್ಥಿತಿ ಹೇಗೆ? ಅನ್ನೋ ಚಿಂತೆಯಲ್ಲಿ ಇದ್ದಾರೆ. ಜೋ ಬೈಡನ್ ಆಡಳಿತ & ಸರ್ಕಾರ ಈಗಿನ ಪರಿಸ್ಥಿತಿ ನಿಭಾಯಿಸಲು ನರಳುತ್ತಿದೆ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ನಡುವೆ ಈಗ ಮತ್ತೊಂದು ಕೆಟ್ಟ ವಾತಾವರಣ ಇದೀಗ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ತಲೆದೂರಿದೆ.












Click it and Unblock the Notifications