ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್‌ನ್‌ಗೂ ಕೊರೊನಾ ಅಟ್ಯಾಕ್..!
ಲಂಡನ್, ಮಾರ್ಚ್ 27: ಬ್ರಿಟನ್ ಪ್ರಧಾನಿ (ಯುಕೆ) ಬೋರಿಸ್ ಜಾನ್ಸ್‌ನ್‌ಗೆ ಕೊರೊನಾ ವೈರಸ್ ಸೋಂಕು (ಕೊವಿಡ್ 19) ತಗುಲಿರುವುದು ದೃಢಪಟ್ಟಿದೆ.
ಈ ಕುರಿತು ಶುಕ್ರವಾರ ವಿಡಿಯೋ ಒಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು, ''ನನಗೆ ನೊವೆಲ್ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವೈದ್ಯರು ತಪಾಸಣೆ ನಡೆಸಿದ್ದರು. ಈಗ ಸೋಂಕು ಇರುವುದು ದೃಢಪಟ್ಟಿದೆ. ನಾನು ಸೆಲ್ಪ್ ಐಸೋಲೇಷನ್ ಮಾಡಿಕೊಳ್ಳಲಿದ್ದು, ಕೋವಿಡ್ 19 ನಿಯಂತ್ರಣಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸರ್ಕಾರವನ್ನು ನಿಭಾಯಿಸಲಿದ್ದೇನೆ'' ಎಂದು ಹೇಳಿದ್ದಾರೆ.
ಸೋಂಕು ತಗುಲಿದ್ದರೂ ಬ್ರಿಟನ್ ಪ್ರಧಾನಿ ಸೋಂಕು ಹರಡುವುದನ್ನು ತಡೆಯುವಲ್ಲಿ ನಾನೇ ಮುಂದೆ ನಿಂತು ಸರ್ಕಾರವನ್ನು ನಿಬಾಯಿಸಲಿದ್ದೇನೆ ಎಂದು ಹೇಳಿರುವುದು ಅಚ್ಚರಿ ಹುಟ್ಟಿಸಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶವಾಸಿಗಳು ಮನೆಯಲ್ಲಿ ಇರಿ ಆರೋಗ್ಯವಾಗಿ ಇರಿ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಬ್ರಿಟನ್‌ನಲ್ಲಿ ಇರುವರೆಗೆ 10 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. 528 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. 137 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.












Click it and Unblock the Notifications