ಸ್ತನ ಕ್ಯಾನ್ಸರ್ ಜಾಗೃತಿಗೆ ಸೆರೆನಾ ವಿಲಿಯಮ್ಸ್ ಬೆತ್ತಲೆದೆ ಸಂಗೀತ

ಸಿಡ್ನಿ, ಸೆಪ್ಟೆಂಬರ್ 30: ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಭಾನುವಾರ ಇಂಟರ್ ನೆಟ್ ನಲ್ಲಿ ಭಾನುವಾರ ಭಾರೀ ಸದ್ದು ಮಾಡಿದ್ದಾರೆ. ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆತ್ತಲೆ ಎದೆಯಲ್ಲಿ 'ಐ ಟಚ್ ಮೈ ಸೆಲ್ಫ್' ಎಂದು ಹಾಡಿ, ವಿಡಿಯೋಗೆ ಪೋಸು ನೀಡಿದ್ದಾರೆ. ತಮ್ಮ ಎರಡು ಕೈಗಳಿಂದ ವಿಲಿಯಮ್ಸ್ ತಮ್ಮ ಎದೆಯನ್ನು ಮುಚ್ಚಿಕೊಂಡಿದ್ದಾರೆ.

ಆ ಹಾಡನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಕೂಡ ಮಾಡಿದ್ದು, ಈಗಾಗಲೇ ಹದಿಮೂರು ಲಕ್ಷ ಮಂದಿ ಹಾಡಿನ ವೀಕ್ಷಣೆ ಮಾಡಿದ್ದಾರೆ. ಅಂದಹಾಗೆ, ಆಸ್ಟ್ರೇಲಿಯಾದ ಡಿವಿನಿಲ್ಸ್ ಬ್ಯಾಂಡ್ ನ 1991ರ ಜನಪ್ರಿಯ ಹಾಡೊಂದನ್ನು ಸೆರೆನಾ ವಿಲಿಯಮ್ಸ್ ಈಗ ಹಾಡಿದ್ದಾರೆ. ಮಹಿಳೆಯರು ನಿಯಮಿತವಾಗಿ ಸ್ತನ ಪರೀಕ್ಷೆ ಮಾಡಿಕೊಂಡು, ಸ್ತನ ಕ್ಯಾನ್ಸರ್ ನಿಂದ ರಕ್ಷಣೆ ಪಡೆಯುವತ್ತ ಹೆಜ್ಜೆ ಇರಿಸಬೇಕು ಎಂದು ಹೇಳಿದ್ದಾರೆ.

Serena Williams

ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನನ್ನ ಕಂಫರ್ಟ್ ಝೋನ್​ನಿಂದ ಹೊರ ಬಂದು ಈ ವಿಡಿಯೋ ಮಾಡಬೇಕಾಯಿತು. ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸುವ ಸಾರಿ ಎಂದು ಸೆರೆನಾ ವಿಲಿಯಮ್ಸ್ ಹೇಳಿಕೊಂಡಿದ್ದಾರೆ.

ಸೆರೆನಾ ಈ ವಿಡಿಯೋ ಪೋಸ್ಟ್ ಮಾಡಿದ 10 ಗಂಟೆಯೊಳಗಾಗಿ 13 ಲಕ್ಷ ಬಾರಿ ವೀಕ್ಷಿಸಲಾಗಿದೆ. ಜತೆಗೆ ನೆಟ್ಟಿಗರು ಕೂಡ ಸೆರೆನಾ ವಿಲಿಯಮ್ಸ್ ರ ಈ ಪ್ರಯತ್ನಕ್ಕೆ ಮತ್ತು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆರೆನಾ ಅವರು ನಾಲ್ಕು ದಿನಗಳ ಮುಂಚೆಯಷ್ಟೇ ತಮ್ಮ 37ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+