ಡೊನಾಲ್ಡ್ ಟ್ರಂಪ್ ವಿರುದ್ಧ ರೊಚ್ಚಿಗೆದ್ದ ಬ್ರೆಜಿಲ್ ಅಧ್ಯಕ್ಷ, ಮತ್ತೊಂದು ಕಿರಿಕ್ ಶುರು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾಗೂ ಹಲವು ದೇಶಗಳ ನಾಯಕರ ನಡುವೆ ಕಿರಿಕ್ ಮುಂದುವರಿದೆ. ಒಂದಲ್ಲ... ಎರಡಲ್ಲ... ಈಗಾಗಲೇ ಹಲವು ದೇಶಗಳ ನಾಯಕರ ಜೊತೆಗೆ ಇದೇ ಟ್ರಂಪ್ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಹಾಗೇ ಹೆಚ್ಚಿನ ತೆರಿಗೆಯ ಎಚ್ಚರಿಕೆ ನಡುವೆ ಕೂಡ ಈಗ ಭಾರಿ ದೊಡ್ಡ ಚರ್ಚೆ ಶುರುವಾಗಿದೆ. ಅದರಲ್ಲೂ ಗಾಜಾ ಶಾಂತಿ ಮಂಡಳಿ ವಿಚಾರಕ್ಕೆ ಪದೇ, ಪದೇ ಸಂಘರ್ಷ ಏರ್ಪಡುತ್ತಿದೆ. ಇದೆಲ್ಲಾ ದೊಡ್ಡ ಹಂತಕ್ಕೆ ತಲುಪುವ ಸಾಧ್ಯತೆಯು ಕೂಡ ದಟ್ಟವಾಗಿ ಇದೆ. ಹೀಗಿದ್ದಾಗ ಬ್ರೆಜಿಲ್ ಕೂಡ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದ ವಿರುದ್ಧ ಗುಡುಗಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಬಂದ ನಂತರ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಸಂಬಂಧ ಹಾಳಾಗಿ ಹೋಗುತ್ತಿದೆ ಎಂಬ ಆರೋಪ ಇದೆ. ಪಾಶ್ಚಿಮಾತ್ಯ ದೇಶಗಳು ಮಾತ್ರ ಅಲ್ಲ ಇನ್ನೊಂದು ಕಡೆ ಏಷ್ಯಾ ಹಾಗೂ ದಕ್ಷಿಣ ಅಮೆರಿಕ ಭಾಗದಲ್ಲಿ ಕೂಡ ಇದೇ ಕಿರಿಕಿರಿ ಶುರುವಾಗಿ ತುಂಬಾ ದಿನಗಳೇ ಕಳೆದಿವೆ. ಈ ಪೈಕಿ ಅಮೆರಿಕ ಮತ್ತು ಬ್ರೆಜಿಲ್ ನಡುವೆ ಪದೇ ಪದೇ ಸಂಘರ್ಷಗಳು ಏರ್ಪಡುತ್ತಿವೆ. ಇಂತಹ ಪರಿಸ್ಥಿತಿಯಲ್ಲೇ ಖುದ್ದು ಬ್ರೆಜಿಲ್ ಅಧ್ಯಕ್ಷ ಟ್ರಂಪ್ ಅವರ ಶಾಂತಿ ಮಂಡಳಿಯ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ.

ಬ್ರೆಜಿಲ್ ಜೊತೆಗೂ ಶುರುವಾಯ್ತು ತಿಕ್ಕಾಟ
ಲ್ಯಾಟಿನ್ ಅಮೆರಿಕದ ಪ್ರಮುಖ ದೇಶ ಬ್ರೆಜಿಲ್ ಮತ್ತು ಅಮೆರಿಕ ನಡುವೆ ಹಲವು ವ್ಯಾಪಾರ ಒಪ್ಪಂದ ಕೂಡ ಇದ್ದವು. ಯಾವಾಗ ಲುಲಾ ಡ ಸಿಲ್ವಾ ಅಧಿಕಾರಕ್ಕೆ ಬಂದರೋ, ಅಲ್ಲಿಂದ ಮುಂದೆ ಭಾರಿ ದೊಡ್ಡ ಬದಲಾವಣೆಗಳು ಸಂಭವಿಸುತ್ತಿವೆ. ಹೀಗಿದ್ದಾಗ ಮತ್ತೊಂದು ಕಡೆ ಒಂದು ವರ್ಷದ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬ್ರೆಜಿಲ್ & ಅಮೆರಿಕ ನಡುವೆ ಸಂಬಂಧ ಹಳಸಿದೆ. ಹೀಗಿದ್ದಾಗ ಟ್ರಂಪ್ ಅವರ ನೂತನ ಗಾಜಾ ಶಾಂತಿ ಮಂಡಳಿ ಬಗ್ಗೆ ಕೂಡ ಅಸಮಾಧಾನ ಹೊರ ಹಾಕಿದೆ ಬ್ರೆಜಿಲ್. ಜೊತೆಗೆ ವಿಶ್ವಸಂಸ್ಥೆಗೆ ಪರ್ಯಾಯವಾಗಿ ಈ ಮಂಡಳಿ ರಚನೆ ಆಗುತ್ತಿದೆಯಾ? ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ. ಇದು ಡೊನಾಲ್ಡ್ ಟ್ರಂಪ್ ಅವರನ್ನು ಮತ್ತಷ್ಟು ಕೆರಳುವಂತೆ ಮಾಡುವುದು ಖಚಿತ ಎನ್ನಬಹುದು.












Click it and Unblock the Notifications