• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡೋನೇಷ್ಯಾದಲ್ಲಿ ವಿಮಾನ ಪತನ; ಮೃತ ದೇಹದ ಭಾಗಗಳು ಪತ್ತೆ

|

ಜಕಾರ್ತಾ, ಜನವರಿ 10: ಇಂಡೋನೇಷ್ಯಾ ಮತ್ತೊಂದು ವಿಮಾನ ದುರಂತಕ್ಕೆ ಸಾಕ್ಷಿಯಾಗಿದೆ. ಬೋಯಿಂಗ್ 737-500 ವಿಮಾನದ ಬಿಡಿ ಭಾಗಗಳು ಸಮುದ್ರದಲ್ಲಿ ಪತ್ತೆಯಾಗಿವೆ. ವಿಮಾನದಲ್ಲಿ 62 ಪ್ರಯಾಣಿಕರಿದ್ದರು.

ಇಂಡೋನೇಷ್ಯಾದ ರಕ್ಷಣಾ ಪಡೆಗಳು ಸಮುದ್ರದಲ್ಲಿ ಮೃತದೇಹದ ಭಾಗಗಳು, ಬಟ್ಟೆ ಮತ್ತು ವಿಮಾನದ ಕೆಲವು ಭಾಗಗಳನ್ನು ಪತ್ತೆ ಹಚ್ಚಿದ್ದಾರೆ. ಶನಿವಾರ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನಗೊಂಡಿತ್ತು.

ಜಕಾರ್ತಾದಿಂದ ಟೇಕ್ ಆಫ್ ಆದ ವಿಮಾನ ನಾಪತ್ತೆ

ರಾಜಧಾನಿ ಜಕಾರ್ತಾದಿಂದ ಹೊರಟಿದ್ದ ಖಾಸಗಿ ವಿಮಾನದಲ್ಲಿ 62 ಜನರಿದ್ದರು. ಪಶ್ಚಿಮ ಕಾಲಿಮಂತ್‌ನ ಪಾಂಟಿಯಾನಾಕ್‌ಗೆ ವಿಮಾನ ತೆರಳಬೇಕಿತ್ತು. ಸುಮಾರು 10 ಸಾವಿರ ಅಡಿಯಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ರೆಡಾರ್ ಸಂಪರ್ಕ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿತ್ತು.

ಬ್ರಿಟನ್‌ನಿಂದ ಭಾರತಕ್ಕೆ ಬಂದಿಳಿದ ವಿಮಾನ: ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ

ವಿಮಾನ ಪತನಗೊಂಡ ಮಾಹಿತಿ ತಿಳಿದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ವಿಮಾನದಲ್ಲಿದ್ದವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅಂದಾಜಿಸಲಾಗಿತ್ತು. ಪಾಂಟಿಯಾನಾಕ್‌ನಲ್ಲಿ ಸಂಬಂಧಿಕರು, ಸ್ನೇಹಿತರು ವಿಮಾನ ಬರುವಿಕೆಗಾಗಿ ಕಾಯುತ್ತಿದ್ದರು.

ಉಕ್ರೇನ್ ಮಿಲಿಟರಿ ವಿಮಾನ ಪತನ: 22 ಮಂದಿ ಸಜೀವ ದಹನ

ಮಳೆ ಇದ್ದ ಕಾರಣ ನಿಗದಿತ ಸಮಯಕ್ಕಿಂತ 30 ನಿಮಿಷ ತಡವಾಗಿ ವಿಮಾನ ಟೇಕಾಫ್ ಆಗಿತ್ತು. 26 ವರ್ಷದ ಹಳೆಯ ವಿಮಾನದಲ್ಲಿ 62 ಪ್ರಯಾಣಿಕರು ಹೊರಟಿದ್ದರು. ಆದರೆ, ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನಗೊಂಡಿದೆ.

2018ರಲ್ಲಿಯೂ ಜಕಾರ್ತಾದಿಂದ ಹೊರಟಿದ್ದ ಲಯನ್ ಏರ್ ಕಂಪನಿಯ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನಗೊಂಡಿತ್ತು. 189 ಪ್ರಯಾಣಿಕರು ಈ ಘಟನೆಯಲ್ಲಿ ಮೃತಪಟ್ಟಿದ್ದರು.

English summary
Boeing 737-500 with 62 people on board crashed shortly after takeoff from Jakarta. Indonesian rescuers have pulled out body parts, pieces of clothing and scraps of metal from the Java sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X