ಲಾಹೋರ್ : ಭೀಕರ ಸ್ಫೋಟ, 56ಕ್ಕೂ ಅಧಿಕ ಮಂದಿ ಸಾವು

Posted By:
Subscribe to Oneindia Kannada

ಲಾಹೋರ್, ಮಾರ್ಚ್ 27 : ಇಲ್ಲಿನ ಪಾರ್ಕೊಂದರಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಐವತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳಾಗಿವೆ. ಮೃತಪಟ್ಟವರ ಪೈಕಿ ಮಹಿಳೆಯರು ಹಾಗೂ ಮಕ್ಕಳ ಸಂಖ್ಯೆ ಅಧಿಕವಾಗಿದೆ.

ಗುಲ್ಶನ್ ಇ ಇಕ್ಬಾಲ್ ಹೆಸರಿನ ಅತ್ಯಂತ ದೊಡ್ಡ ಉದ್ಯಾನವನದಲ್ಲಿ ಭಾನುವಾರ ಸಂಜೆ ವಿಹಾರಕ್ಕಾಗಿ ಬಂದಿದ್ದರು. ಬಾಂಬ್ ಸ್ಫೋಟ ಸಂಭವಿಸಿದ ವೇಳೆ ಬಹುತೇಕ ಮಂದಿ ಮನೆಗೆ ಹೊರಟ್ಟಿದ್ದರು. ಸ್ಥಳೀಯ ಪೊಲೀಸರ ಪ್ರಕಾರ ಇದು ಆತ್ಮಾಹುತಿ ದಾಳಿ ಎಂದು ತಿಳಿದು ಬಂದಿದೆ. ಇದುವರೆವಿಗೂ ಯಾವುದೇ ಉಗ್ರ ಸಂಘಟನೆ ಸ್ಫೋಟದ ಹೊಣೆ ಹೊತ್ತಿಲ್ಲ.

Lahore

ಪಾಕಿಸ್ತಾನದ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯ ಭಾನುವಾರ ಈಸ್ಟರ್ ಹಬ್ಬ ಆಚ್ರಣೆಯಲ್ಲಿ ತೊಡಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಪಾರ್ಕಿನಲ್ಲಿದ್ದರು. ಉದ್ಯಾನವನದ ಮುಖ್ಯದ್ವಾರ ವಾಹನ ನಿಲುಗಡೆ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯಾಗಿರುವ ಲಾಹೋರ್, ಪ್ರಧಾನಿ ನವಾಜ್ ಷರೀಪ್ ಅವರ ರಾಜಕೀಯ ಶಕ್ತಿಕೇಂದ್ರವಾಗಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Over 50 people, including women and children, were killed in a blast here on Sunday evening. Over 100 were injured in the explosion.
Please Wait while comments are loading...