ಕಪ್ಪು ಹಣ : 2 ಮಹಿಳೆ ಸೇರಿದಂತೆ ಐವರು ಭಾರತೀಯರ ಹೆಸರು ಔಟ್
ಬರ್ನ್, ಮೇ. 25 : ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣವನ್ನು ಪೇರಿಸಿಟ್ಟ ವಿದೇಶಿಯರ ಹೆಸರುಗಳನ್ನು ಸ್ವಿಟ್ಜರ್ಲೆಂಡ್ ತನ್ನ ಗೆಜೆಟ್‌ನಲ್ಲಿ ಪ್ರಥಮ ಬಾರಿಗೆ ಬಹಿರಂಗಪಡಿಸಿದ್ದು, ಅದರಲ್ಲಿ ಇಬ್ಬರು ಭಾರತೀಯ ಮಹಿಳೆಯರು ಸೇರಿದಂತೆ ಐವರು ಭಾರತೀಯರ ಹೆಸರುಗಳನ್ನು ಬಹಿರಂಗಪಡಿಸಿದೆ.
ಇನ್ನು 30 ದಿನಗಳೊಳಗಾಗಿ ಫೆಡರಲ್ ಅಡ್ಮಿನಿಸ್ಟ್ರೇಟಿವ್ ಕೋರ್ಟ್ ಮುಂದೆ ಮೇಲ್ಮನವಿಯನ್ನು ಸಲ್ಲಿಸದಿದ್ದರೆ ಬ್ಯಾಂಕ್ ಖಾತೆಯ ಎಲ್ಲ ವಿವರಗಳನ್ನು ಭಾರತೀಯ ಅಧಿಕಾರಿಗಳಿಗೆ ನೀಡುವುದಾಗಿ ಎಲ್ಲ ಐವರು ಭಾರತೀಯರಿಗೆ ಸ್ವಿಸ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ಎಚ್ಚರಿಕೆ ನೀಡಿದೆ.
ಆ ಇಬ್ಬರು ಮಹಿಳೆಯರ ಹೆಸರು ಮತ್ತು ಜನ್ಮ ದಿನಾಂಕದ ಹೊರತಾಗಿ ಮತ್ತಾವ ಮಾಹಿತಿಯನ್ನು ಇಲ್ಲಿಯವರೆಗೆ ಸ್ವಿಟ್ಜರ್ಲೆಂಡ್ ಸರಕಾರ ಬಹಿರಂಗಪಡಿಸಿಲ್ಲ. ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಹೊಂದಿರುವ ಆ ಇಬ್ಬರು ಮಹಿಳೆಯರೆಂದರೆ ಸ್ನೇಹ ಲತಾ ಸಾಹ್ನಿ ಮತ್ತು ಸಂಗೀತಾ ಸಾಹ್ನಿ. ಉಳಿದವರು ಗುರ್ಜಿತ್ ಸಿಂಗ್ ಕೊಚಾರ್, ಚೌಡ್ ಕೌಸರ್ ಮೊಹಮ್ಮದ್ ಮಸೂದ್, ಸೈಯದ್ ಮೊಹಮ್ಮದ್ ಮಸೂದ್. [ಸ್ವಿಸ್ ಲೀಕ್ ಪಟ್ಟಿಯಲ್ಲಿರುವ 100 ಜನ ವಂಚಕರು]

1) ಸ್ನೇಹ ಲತಾ ಸಾಹ್ನಿ (ಜನ್ಮದಿನ : ಅಕ್ಟೋಬರ್ 3, 1942)
2) ಸಂಗೀತಾ ಸಾಹ್ನಿ (ಜನ್ಮದಿನ : ಆಗಸ್ಟ್ 15, 1958) [ಕಪ್ಪು ಹಣ ಕೂಡಿಟ್ಟ ಈ ಇಬ್ಬರು ಅತ್ತೆಸೊಸೆಯರು ಯಾರು?]
3) ಗುರ್ಜಿತ್ ಸಿಂಗ್ ಕೊಚಾರ್ (ಜನ್ಮದಿನ : ಜೂನ್ 5, 1980)
4) ಚೌಡ್ ಕೌಸರ್ ಮೊಹಮ್ಮದ್ ಮಸೂದ್ (ಜನ್ಮದಿನ : ಮೇ 5, 1957)
5) ಸೈಯದ್ ಮೊಹಮ್ಮದ್ ಮಸೂದ್ (ಜನ್ಮದಿನ : ಅಕ್ಟೋಬರ್ 24, 1956)
ಭಾರತೀಯರು ಮಾತ್ರವಲ್ಲ ಬ್ರಿಟಿಷ್, ಸ್ಪಾನಿಷ್ ಮತ್ತು ರಷ್ಯಾ ದೇಶದ ನಾಗರಿಕರ ಹೆಸರು ಮತ್ತು ಅವರ ಜನ್ಮದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಆದರೆ, ಸ್ವಿಸ್ ಬ್ಯಾಂಕಲ್ಲಿ ಖಾತೆ ಹೊಂದಿರುವ ಅಮೆರಿಕ ಮತ್ತು ಇಸ್ರೇಲ್ ನಾಗರಿಕರ ಹೆಸರುಗಳನ್ನು ತಡೆಹಿಡಿಯಲಾಗಿದೆ. ಅವರ ಇನಿಷಿಯಲ್ಸ್ ಮತ್ತು ಜನ್ಮದಿನಾಂಕದಿಂದ ಮಾತ್ರ ಗುರುತಿಸಲಾಗಿದೆ.
ಸ್ವಿಸ್ ಬ್ಯಾಂಕಿಗೆ ಕೋಟಿಗಟ್ಟಲೆ ಹಣ ಸಾಗಿಸಿ, ಸರಕಾರಕ್ಕೆ ತೆರಿಗೆ ಕಟ್ಟದೆ ವಂಚಿಸಿ ದೇಶದ್ರೋಹ ಮಾಡುತ್ತಿರುವವರ ಹೆಸರುಗಳನ್ನು ಬಹಿರಂಗಪಡಿಸಬೇಕೆಂದು ಭಾರತ ಸರಕಾರ ಸ್ವಿಸ್ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಆದರೆ, ಸ್ವತಂತ್ರವಾಗಿ ಸಾಕ್ಷಿ ಒದಗಿಸಿದ್ದನ್ನು ಆಧರಿಸಿ ಕೆಲವರ ಹೆಸರುಗಳನ್ನು ಭಾರತಕ್ಕೆ ಸ್ವಿಸ್ ಸರಕಾರ ಈಗಾಗಲೆ ನೀಡಿದೆ.
ಸ್ವಿಸ್ ಬ್ಯಾಂಕ್ ಗಳಲ್ಲಿ ವಿದೇಶಿಯರಿಗಿಂತ ಭಾರತೀಯ ತೆರಿಗೆ ವಂಚಕರು ಶೇಖರಿಸಿಟ್ಟ ಹಣದ ಮೊತ್ತವೇ ಹೆಚ್ಚು ಎಂದು ಸಿಬಿಐ ಹೇಳಿದೆ. 500 ಬಿಲಿಟನ್ ಡಾಲರ್ ನಷ್ಟು ಅಕ್ರಮ ಹಣ ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯುತ್ತ ಬಿದ್ದಿದೆ 2011ರಲ್ಲೇ ಸಿಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.












Click it and Unblock the Notifications