ರೂಪಾಂತರ ವೈರಸ್‌ಗೂ ಆರೇ ವಾರದಲ್ಲಿ ಲಸಿಕೆ: ಬಯೋಎನ್‌ಟೆಕ್ ಹೇಳಿಕೆ
ವಾಷಿಂಗ್ಟನ್, ಡಿಸೆಂಬರ್ 22: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ತೀವ್ರ ಸಾಂಕ್ರಾಮಿಕ ಸ್ವರೂಪ ಹೊಂದಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರಕ್ಕೆ ಆರು ವಾರಗಳಲ್ಲಿ ಲಸಿಕೆ ಸಿದ್ಧಪಡಿಸಬಹುದು ಎಂದು ಬಯೋಎನ್‌ಟೆಕ್ ಸಂಸ್ಥೆ ಹೇಳಿದೆ. ಬ್ರಿಟನ್‌ನಲ್ಲಿನ ರೂಪಾಂತರ ತಳಿಯ ವಿರುದ್ಧ ತನ್ನ ಲಸಿಕೆ ಪರಿಣಾಮಕಾರಿಯಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕರು ಹೇಳಿದ್ದಾರೆ.
ಜರ್ಮನಿ ಮೂಲದ ಬಯೋಎನ್‌ಟೆಕ್ ಸಂಸ್ಥೆಯು ಅಮೆರಿಕದ ಫೈಜರ್ ಇಂಕ್ ಜತೆಗೂಡಿ ಜಗತ್ತಿನ ಮೊದಲ ಕೊರೊನಾ ವೈರಸ್ ಲಸಿಕೆಯಾದ ಫೈಜರ್ ಅನ್ನು ಪ್ರಯೋಗಿಸಿತ್ತು. ಈಗ ಬಯೋಎನ್‌ಟೆಕ್ ಸಂಸ್ಥೆ ಹೊರ ರೂಪಾಂತರಿ ವೈರಸ್‌ಅನ್ನೂ ಬಗ್ಗಿಸುವಂತಹ ಲಸಿಕೆ ಕಂಡುಹಿಡಿಯಲು ಹೆಚ್ಚು ಸಮಯ ಬೇಕಾಗಲಾರದು ಎಂದಿದೆ.
'ವೈಜ್ಞಾನಿಕವಾಗಿ ಈ ಲಸಿಕೆಯಲ್ಲಿನ ಅತೀವ ಪ್ರತಿರಕ್ಷಣಾ ಸಾಮರ್ಥ್ಯವು ಹೊಸ ಕೊರೊನಾ ವೈರಸ್ ಸ್ವರೂಪವನ್ನು ಸಮರ್ಥವಾಗಿ ಎದುರಿಸಬಲ್ಲುವ ಸಾಧ್ಯತೆ ಹೆಚ್ಚಿದೆ' ಎಂದು ಬಯೋಎನ್‌ಟೆಕ್‌ನ ಯುಗುರ್ ಸಾಹಿನ್ ತಿಳಿಸಿದ್ದಾರೆ. ಕಂಪೆನಿಯು ರೂಪಾಂತರ ವೈರಸ್‌ಅನ್ನು ಮಣಿಸುವಂತಹ ಲಸಿಕೆಯನ್ನು ಆರು ವಾರಗಳಲ್ಲಿ ನೀಡಬಲ್ಲದು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಅವರು ತನ್ನ ಕಂಪೆನಿಯು ಫೈಜರ್ ಜತೆಗೂಡಿ ತಯಾರಿಸಿದ ಲಸಿಕೆಯು ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ತಳಿಯ ವಿರುದ್ಧವೂ ಪರಿಣಾಮಕಾರಿಯಾಗುವ ವಿಶ್ವಾಸವಿದೆ ಎಂದು ಹೇಳಿದ್ದರು.












Click it and Unblock the Notifications