Get Updates
Get notified of breaking news, exclusive insights, and must-see stories!

ಅಮೆರಿಕಾ ದಾಳಿ ಮುಂಚೂಣಿಯಲ್ಲಿದ್ದ ಉಗ್ರನ ಮಗಳ ಜತೆ ಲಾಡೆನ್ ಮಗ ನಿಖಾಹ್

ಲಂಡನ್, ಆಗಸ್ಟ್ 6: ಉಗ್ರ ಒಸಾಮ ಬಿನ್ ಲಾಡೆನ್ ಮಗ ಹಮ್ಜಾ ಬಿನ್ ಲಾಡೆನ್ ಮೊಹ್ಮದ್ ಅಟ್ಟಾ ಎಂಬಾತನ ಮಗಳನ್ನು ಮದುವೆ ಆಗಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಅಂದಹಾಗೆ ಹಮ್ಜಾ ಲಾಡೆನ್ ಮದುವೆ ಆಗಿರುವುದು 2001ರಲ್ಲಿ ಅಮೆರಿಕಾದ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ್ದ ಗುಂಪಿನ ಮುಖ್ಯ ಪಾತ್ರಧಾರಿ ಮೊಹ್ಮದ್ ಅಟ್ಟಾನ ಮಗಳನ್ನು.

ಗಾರ್ಡಿಯನ್ ಗೆ ನೀಡಿದ ಸಂದರ್ಶನದಲ್ಲಿ ಈ ಮದುವೆ ಬಗ್ಗೆ ಒಸಾಮ ಬಿನ್ ಲಾಡೆನ್ ನ ಸಂಬಂಧಿಯೇ ಖಾತ್ರಿ ಪಡಿಸಿದ್ದು, ಹಮ್ಜಾ ಲಾಡೆನ್ ಎಲ್ಲಿದ್ದಾನೆ ಎಂಬುದು ನಮಗೆ ಗೊತ್ತಿಲ್ಲ. ಅಫ್ಘಾನಿಸ್ತಾನದಲ್ಲಿ ಆಗಿರಬಹುದು ಎಂದು ಮದುವೆ ವಿಚಾರವಾಗಿ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಹಮ್ಜಾ ಸದ್ಯಕ್ಕೆ ಅಲ್ ಕೈದಾದಲ್ಲಿ ಮೇಲ್ ಸ್ತರದ ಜವಾಬ್ದಾರಿ ವಹಿಸಿಕೊಂಡಿದ್ದು, ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಅಮೆರಿಕಾ ಸೇನಾ ಪಡೆಯು ಕೊಂದ ತನ್ನ ತಂದೆ ಒಸಾಮ ಬಿನ್ ಲಾಡೆನ್ ನ ಸಾವಿಗೆ ಪ್ರತೀಕಾರ ಹೇಳುವ ಹವಣಿಕೆಯಲ್ಲಿದ್ದಾನೆ. ಒಸಾಮ ಬಿನ್ ಲಾಡೆನ್ ನ ಮೂವರು ಹೆಂಡತಿಯರಲ್ಲಿ ಒಬ್ಬಾಕೆಯ ಮಗ ಈ ಹಮ್ಜಾ.

Bin Ladens son marries 9/11 hijackers daughter, says family: Report

ಹಿಂದೊಮ್ಮೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಹಮ್ಜಾ, ಅಮೆರಿಕ, ಯುಕೆ, ಫ್ರಾನ್ಸ್ ಮತ್ತು ಇಸ್ರೇಲ್ ವಿರುದ್ಧ ಯುದ್ಧ ಸಾರುವಂತೆ ಕರೆ ನೀಡಿದ್ದ. ಸದ್ಯಕ್ಕೆ ಅಲ್ ಜವಾಹಿರಿ ನಂತರದ ಸ್ಥಾನದಲ್ಲಿ ಹಮ್ಜಾ ಇದ್ದಾನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+