ಬಾಹ್ಯಾಕಾಶಕ್ಕೆ ಜಿಗಿದ ಕೋಟ್ಯಧೀಶ ರಿಚರ್ಡ್ ಬ್ರಾನ್ಸನ್ ಮೊದಲ ಅನುಭವ

ನವದೆಹಲಿ, ಜುಲೈ 11: "ನಾನು ಬಾಲ್ಯದಿಂದಲೂ ಈ ಕ್ಷಣದ ಬಗ್ಗೆ ಕನಸು ಕಂಡಿದ್ದೇನೆ, ಆದರೆ ಬಾಹ್ಯಾಕಾಶಕ್ಕೆ ಹೋಗುವುದು ನಾನು .ಹಿಸಿದ್ದಕ್ಕಿಂತ ಹೆಚ್ಚು ಮಾಂತ್ರಿಕವಾಗಿತ್ತು," ಎಂದು ಇಂಗ್ಲೆಂಡಿನ ಕೋಟ್ಯಾಧಿಪತಿ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಕನಸಿನ ಪಯಣದ ಬಗ್ಗೆ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಭಾನುವಾರ ಬಾಹ್ಯಾಕಾಶಕ್ಕೆ ಹಾರುವ ಉದ್ಯಮಿ ರಿಚರ್ಡ್​ ಬ್ರಾನ್ಸನ್ ಕನಸು ಈಡೇರಿದೆ. ತಮ್ಮದೇ ಸಂಸ್ಥೆ ಆಗಿರುವ ವರ್ಜಿನ್​ ಗ್ಯಾಲಕ್ಟಿಕ್( Virgin Galactic) ಸ್ಪೇಸ್​ಫ್ಲೈಟ್​ ಕಂಪನಿಯೇ ತಯಾರಿಸಿದ ವಿಎಸ್​ಎಸ್​ ಯುನಿಟಿ (VSS Unity) ಗಗನ ನೌಕೆಯಲ್ಲಿ ಆರು ಮಂದಿ ಬಾಹ್ಯಾಕಾಶಕ್ಕೆ ಹಾರಿದರು.

Recommended Video

      ಇಂಗ್ಲೆಂಡಿನ ಕೋಟ್ಯಧಿಪತಿ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದು ಹೀಗೆ! | Oneindia

      ಬಾಹ್ಯಾಕಾಶ ಯಾನ ಮಾಡಲಿರುವ ಎರಡನೇ ಭಾರತೀಯ ಸಂಜಾತೆ
      ವಿಎಸ್​ಎಸ್​ ಯುನಿಟಿ ಒಂದು ಪ್ರಯಾಣಿಕ್ಕೆ ಸೂಕ್ತವಾದ ರಾಕೆಟ್ ಆಗಿದೆ.​ ಬಾಹ್ಯಾಕಾಶ ಪ್ರವಾಸಕ್ಕಾಗಿಯೇ ವರ್ಜಿನ್​ ಗ್ಯಾಲಕ್ಟಿಕ್ ಕಂಪನಿ ಸಬೋರ್ಬಿಟಲ್​ ಬಾಹ್ಯಾಕಾಶ ರಾಕೆಟ್ ಅನ್ನು ವಿನ್ಯಾಸಗೊಳಿಸಿದೆ. ಅದೇ ವಿಶೇಷ ರಾಕೆಟ್ ಮೂಲಕ ರಿಚರ್ಡ್​ ಬ್ರಾನ್ಸನ್ ರನ್ನು ಒಳಗೊಂಡಂತೆ ಆರು ಮಂದಿ ಬಾನಂಗಳಕ್ಕೆ ಜಿಗಿದಿದ್ದರು. ಈ ಪೈಕಿ ಭಾರತ ಮೂಲದ ಗಗನಯಾತ್ರಿ ಸಿರೀಶಾ ಬಾಂದ್ಲಾ ಕೂಡ ಇರುವುದು ಹೆಮ್ಮೆಯ ವಿಷಯವಾಗಿದೆ.

      Billionaire Richard Branson Shares His First Experience After Travel To Space At Virgin Galactic vessel

      ಗಗನ ನೌಕೆಗೆ ರಿಚರ್ಡ್ ಬ್ರಾನ್ಸನ್ ತಾಯಿ ಹೆಸರು:
      ವಿಎಸ್​ಎಸ್​ ಯುನಿಟಿ ಒಂದು ಬಿಳಿಬಣ್ಣದ ಬಾಹ್ಯಾಕಾಶ ನೌಕೆಯಾಗಿದೆ. ಈ ಜೆಟ್​​ಗೆ ರಿಚರ್ಡ್ ಬ್ರಾನ್ಸನ್​ ತಾಯಿ ಹೆಸರು VMS Eve ಎಂದು ನಾಮಕರಣ ಮಾಡಲಾಗಿದೆ. ವಿಎಸ್​ಎಸ್​ ನೌಕೆ, ಭೂಮಿಯ ವಾತಾವರಣದ ಹೊರಗಿನ ಅಂಚಿನ ಹಿಂದೆ ನೇರವಾಗಿ ಸುಮಾರು 50,000 ಅಡಿ ಎತ್ತರದವರೆಗೂ ಈ VMS Eve ಫ್ಲ್ಯೂಸೇಜ್​ ಕ್ಯಾರಿಯರ್​ ಜೆಟ್​ ಹಾರಲಿದೆ. ನ್ಯೂ ಮೆಕ್ಸಿಕೊ ಮರುಭೂಮಿಗಿಂತ 89 ಕಿಮೀ ಎತ್ತರದಲ್ಲಿ ಕೆಲವು ನಿಮಿಷಗಳ ಕಾಲ ಗಗನಯಾತ್ರಿಗಳು ತೂಕವಿಲ್ಲದ ಸ್ಥಿತಿಯನ್ನು ಹಾರಾಟ ನಡೆಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ನ್ಯೂ ಮೆಕ್ಸಿಕೋ ಮರುಭೂಮಿಗಿಂತ 89 ಕಿಮೀ ಎತ್ತರದಲ್ಲಿ ಸುಮಾರು 90 ನಿಮಿಷಗಳ ಕಾಲ ರಾಕೆಟ್​​ ಹಾರಾಟ ನಡೆಸಲಿದೆ.

      ಬಾಹ್ಯಾಕಾಶಕ್ಕೆ ಭಾರತದ ಸಿರೀಶಾ:
      ಬಾಹ್ಯಾಕಾಶಕ್ಕೆ ಹಾರಿದ ಭಾರತ ಮೂಲದ ಮಹಿಳೆಯರ ಸಾಲಿಗೆ ಸಿರೀಶಾ ಕೂಡ ಸೇರ್ಪಡೆಯಾಗುತ್ತಿದ್ದಾರೆ. 34ವರ್ಷದ ಇವರು ಏರೋನಾಟಿಕಲ್ ಎಂಜಿನಿಯರ್ ಆಗಿದ್ದಾರೆ. ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಸಿರೀಶಾ ಟೆಕ್ಸಾಸ್​​ನ ಹೂಸ್ಟನ್​​ನಲ್ಲಿ ವಾಸವಿದ್ದಾರೆ. "ಈ ಗಗನಯಾತ್ರೆಯಲ್ಲಿ ನಾನೂ ಒಬ್ಬಳು ಪಾಲ್ಗೊಳ್ಳುತ್ತಿದ್ದೇನೆ ಎಂಬ ಬಗ್ಗೆ ತುಂಬ ಹೆಮ್ಮೆ ಇದೆ," ಎಂದು ಸಿರೀಶಾ ಸಂತಸ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶಕ್ಕೆ ಹಾರಿದ ಸಿರೀಶಾರಿಗೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶುಭ ಕೋರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+