Get Updates
Get notified of breaking news, exclusive insights, and must-see stories!

China & Pakistan: ಭಾರತದ ಶತ್ರು ಪಾಕಿಸ್ತಾನಕ್ಕೆ ಕೈಕೊಟ್ಟ ಚೀನಾ?

ಪಾಕಿಸ್ತಾನ ಹಾಗೂ ಚೀನಾ ಸಾಕಷ್ಟು ಆತ್ಮೀಯವಾಗಿದ್ದು, ಆರ್ಥಿಕವಾಗಿ ಬೀದಿಗೆ ಬಿದ್ದಿರುವ ಪಾಕ್‌ಗೆ ಚೀನಾ ರಕ್ಷಣೆ ಒದಗಿಸುತ್ತಿದೆ. ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಹಣದ ಸಹಾಯ ಮಾಡಿತ್ತು ಚೀನಾ. ಆದರೆ ಈಗ ಬೇರೆಯದ್ದೇ ಸುದ್ದಿ ಗೊತ್ತಾಗಿದೆ. ಪಾಕಿಸ್ತಾನಕ್ಕೆ ಇದರಿಂದ ಶಾಕ್ ಸಿಕ್ಕಿದ್ದು, ಎರಡೂ ದೇಶಗಳ ನಡುವೆ ಮುನಿಸು ಶುರುವಾಯ್ತಾ? ಎಂಬ ಅನುಮಾನ ಮೂಡಿದೆ.

ಭಾರತದ ಜತೆ ಮುನಿಸಿಕೊಂಡಿರುವ ಚೀನಾಗೆ ಪಾಕಿಸ್ತಾನ ಅಚ್ಚುಮೆಚ್ಚು ಎಂಬ ಮಾತು ಪದೇ ಪದೆ ಕೇಳಿಬರುತ್ತಿತ್ತು. ಅದರಲ್ಲೂ ಪಾಕ್ ಜೊತೆ ಸ್ನೇಹ ಸಂಬಂಧ ಕಾಪಾಡಿಕೊಳ್ಳಲು ಚೀನಾ ಏನು ಬೇಕಾದ್ರೂ ಮಾಡುತ್ತೆ ಅಂತಾ ಹೇಳಲಾಗುತ್ತಿತ್ತು. ಇದೇ ಕಾರಣಕ್ಕೆ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ಇತ್ತೀಚೆಗೆ ನೀಡಿತ್ತು ಚೀನಾ. ಹೀಗೆ ಇಬ್ಬರ ಸಂಬಂಧ ಅತ್ಯುತ್ತಮ ಎನ್ನುವ ಸಂದರ್ಭದಲ್ಲೇ ಶಾಕ್ ಸಿಕ್ಕಿದೆ, ಅದರಲ್ಲೂ ಆರ್ಥಿಕವಾಗಿ ನರಳುತ್ತಿರುವ ಪಾಕ್‌ಗೆ ಇದರಿಂದ ದೊಡ್ಡ ಆಘಾತ ಎದುರಾಗಿದೆ.

Big update about China–Pakistan Economic Corridor

ಪಾಕಿಸ್ತಾನಕ್ಕೆ ಚೀನಾ ಕೊಟ್ಟ ಶಾಕ್ ಹೇಗಿತ್ತು?

ಅಂದಹಾಗೆ ಬಹುಕೋಟಿ ಮೊತ್ತದ ಚೀನಾ ಮತ್ತು ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಯ ಅಡಿಯಲ್ಲಿ ಇಂಧನ, ನೀರು ನಿರ್ವಹಣೆ ಸೇರಿ ಹಲವು ಕ್ಷೇತ್ರದಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ನೀಡುತ್ತಿದ್ದ ಸಹಕಾರವನ್ನು ವಿಸ್ತರಿಸಲು ಚೀನಾ ನಿರಾಕರಿಸಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಪಾಕಿಸ್ತಾನ & ಚೀನಾ ಸ್ನೇಹ ಹಳಸಿದ ಸೂಚನೆ ಇರಬಹುದಾ? ಎಂಬ ಚರ್ಚೆ ಮಧ್ಯೆ ಮತ್ತೊಂದು ಶಾಕ್ ಸಿಕ್ಕಿದೆ. 'ಚೀನಾ-ಪಾಕ್ ಆರ್ಥಿಕ ಕಾರಿಡಾರ್‌' (ಸಿಪಿಇಸಿ) ಯೋಜನೆಯಿಂದಲೂ ಪಾಕ್‌ನ ಹೊರದಬ್ಬಲಾಗಿದೆ ಎಂದು ಪಾಕ್‌ ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.

'ಚೀನಾ-ಪಾಕ್ ಆರ್ಥಿಕ ಕಾರಿಡಾರ್‌' ಜಾರಿ ಉಸ್ತುವಾರಿ ಹೊತ್ತಿರುವ ಜಂಟಿ ಸಹಕಾರ ಸಮಿತಿ (ಜೆಸಿಸಿ) ನಡೆಸಿದ 11ನೇ ಸಭೆಯಲ್ಲಿ, ಪಾಕಿಸ್ತಾನ ಸರ್ಕಾರ ಚೀನಾ ಬಳಿ ಹಲವು ಯೋಜನೆಗಳ ಬಗ್ಗೆ ಪ್ರಸ್ತಾವನೆ ಇರಿಸಿತ್ತು ಎನ್ನಲಾಗಿದೆ. ಈ ಮೂಲಕ ಮತ್ತೆ ಸಾಲ ಪಡೆಯಲು ಪಾಕ್ ಸ್ಕೆಚ್ ಹಾಕಿತ್ತು. ಆದರೆ ಇದೇ ವೇಳೆ ಚೀನಾದ ಅಧಿಕಾರಿಗಳು ಪಾಕ್‌ನಲ್ಲಿನ ಎಲ್ಲ ಯೋಜನೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿ, ಹೊಸ ಯೋಜನೆ ಅಥವಾ ಹಾಲಿ ಯೋಜನೆಗಳ ವಿಸ್ತರಣೆಗೆ ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ. ಹೀಗಾಗಿ ಆರ್ಥಿಕವಾಗಿ ನರಳುತ್ತಿರುವ ಪಾಕ್‌ಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.

Big update about China–Pakistan Economic Corridor

ಉಗ್ರರ ಉಪಟಳ ಕೂಡ ಹೆಚ್ಚಾಗಿತ್ತು

ಕರಾಚಿ ನಗರ & ಸುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಸಿಪಿಇಸಿ ಕಾಮಗಾರಿಗೆ ಪಾಕಿಸ್ತಾನವೇ ಸರಿಯಾದ ಭದ್ರತೆ ನೀಡುತ್ತಿಲ್ಲ. ಹೀಗಾಗಿ ಕಾಮಗಾರಿಗೆ ಉಗ್ರರ ಕಾಟ ಕೂಡ ಹೆಚ್ಚಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಹಾಗೇ ಕಾಮಗಾರಿ ನಡೆಯುವಾಗ ಭಯೋತ್ಪಾದಕರ ಕಾಟ ಹೆಚ್ಚುತ್ತಿರುವ ಬಗ್ಗೆ ಚೀನಾ ಅಧಿಕಾರಿಗಳು ಜಂಟಿ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧವೇ ಆಕ್ರೋಶ ಹೊರಹಾಕಿದ್ದರು ಎನ್ನಲಾಗಿತ್ತು. ಇಷ್ಟೆಲ್ಲಾ ಆಗುಹೋಗುಗಳ ನಡುವೆ ಇದೀಗ ಪಾಕಿಸ್ತಾನಕ್ಕೆ ದೊಡ್ಡ ಶಾಕ್ ಸಿಕ್ಕಿದೆ. ಆದರೆ 'ಚೀನಾ-ಪಾಕ್ ಆರ್ಥಿಕ ಕಾರಿಡಾರ್‌'ನಿಂದ ಪಾಕ್‌ಗೆ ಗೇಟ್‌ಪಾಸ್ ನೀಡಿರುವ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಅಥವಾ ಮಾಹಿತಿ ಎರಡು ದೇಶಗಳಿಂದ ಹೊರಬಿದ್ದಿಲ್ಲ.

ಅತ್ಯಾಧುನಿಕ ಅಸ್ತ್ರಗಳು ಮಾತ್ರ ಬೇಕು!

ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಬೇಕು, ಅಷ್ಟಕ್ಕೂ ಈ ಮಾತು ಪಾಕ್‌ಗೆ ಮತ್ತು ಅಲ್ಲಿನ ಭ್ರಷ್ಟ ರಾಜಕಾರಣಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತೆ. ಏಕೆಂದರೆ ಪಾಕಿಸ್ತಾನದಲ್ಲಿ ತಿನ್ನಲು ಅನ್ನ ಇಲ್ಲ. ಗೋಧಿ ಹಿಟ್ಟಿಗೂ ಕೊಲೆ ನಡೆಯುವ ದೇಶ ಅದು. ಪರಿಸ್ಥಿತಿ ಹೀಗಿದ್ರೂ ಪಾಕ್ ಸೇನೆಗೆ ಮಾತ್ರ ಅತ್ಯಾಧುನಿಕ ಅಸ್ತ್ರ ಬೇಕು. ಅದ್ರಲ್ಲೂ ಸಾವಿರಾರು ಕೋಟಿ ರೂಪಾಯಿ ಬೆಲೆ ಭಾಳುವ ವೆಪನ್ಸ್ ಬೇಕು. ಇಂತಹ ದೇಶಕ್ಕೆ ಈಗ ಅತ್ಯಾಪ್ತ ದೇಶ ಚೀನಾ ಕೂಡ ಶಾಕ್ ಕೊಡುತ್ತಿದೆ ಎಂಬ ಮಾತು ಕೇಳಿಬಂದಿದೆ.

ದೇಶವನ್ನೇ ಮಾರುತ್ತಾರಾ ಪಾಕ್ ರಾಜಕಾರಣಿಗಳು?

ಕೈಗೆ ಸಿಗದ ಹಣದುಬ್ಬರ, ಜೊತೆಗೆ ಹಣಕಾಸಿನ ಅಸಮತೋಲನ. ಇಷ್ಟು ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನು ಪಾಕ್ ಮಾರಾಟ ಮಾಡಿದೆ. ಕೆಲ ತಿಂಗಳ ಹಿಂದೆ ಕರಾಚಿ ಪೋರ್ಟ್ ಟರ್ಮಿನಲ್ಸ್ ಅನ್ನ ಯುಎಇಗೆ ಹಸ್ತಾಂತರಿಸಲು ಮುಂದಾಗಿತ್ತು. ತುರ್ತು ನಿಧಿ ಸಂಗ್ರಹಿಸಲು ಕಳೆದ ವರ್ಷ ಹೊಸ ಕಾನೂನು ಜಾರಿಗೆ ತಂದ ಪಾಕ್ ರಾಜಕಾರಣಿಗಳು, ತಮ್ಮ ದೇಶವನ್ನೇ ಮಾರುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ನಡುವೆ ಈಗ ಚೀನಾ ಕೂಡ ಕೈಕೊಟ್ಟರೆ ಪಾಕಿಸ್ತಾನ ಸರ್ಕಾರ ದೇಶ ನಡೆಸಲು ಆಗದೆ ಓಡಿ ಹೋಗಬೇಕು ಅಷ್ಟೇ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+