• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್: ನೇತನ್ಯಾಹು ಅಧಿಕಾರ ಅಂತ್ಯ, ನಫ್ತಾಲಿ ನೂತನ ಪ್ರಧಾನಿ

|
Google Oneindia Kannada News

ಟೆಲ್ ಅವಿವ್, ಜೂನ್ 14: ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು 12 ವರ್ಷಗಳ ಆಡಳಿತ ಅಂತ್ಯಗೊಂಡಿದೆ. ರಾಷ್ಟ್ರೀಯವಾದಿ ನೆಫ್ತಾಲಿ ಬೆನೆಟ್ ಸಮ್ಮಿಶ್ರ ಸರ್ಕಾರದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಅತ್ಯಲ್ಪ ಬಹುಮತ 60-59 ರಿಂದ ಸರ್ಕಾರ ರಚನೆ ಮಾಡಲಾಗಿದ್ದು, ಅಧಿಕಾರ ಹಂಚಿಕೆಯ ಸೂತ್ರದ ಭಾಗವಾಗಿ 2023 ರ ಸೆಪ್ಟೆಂಬರ್ ತಿಂಗಳವರೆಗೂ ನಫ್ತಾಲಿ ಬೆನೆಟ್ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.

ಇಸ್ರೇಲ್‌ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಡಪಂಥೀಯ ಅರಬ್ ಯೇತರ ಪಕ್ಷಗಳು, ಸ್ವತಂತ್ರ ಅರಬ್ ಪಕ್ಷ ರಾಮ್ ರಾಷ್ಟ್ರೀಯವಾದಿ ನೆಫ್ತಾಲಿ ಬೆನ್ನೆಟ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದು, ಅನೂಹ್ಯವಾದ ರೀತಿಯಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಗಳನ್ನು ಹೊಂದಿರುವ ಪಕ್ಷಗಳೇ ಸರ್ಕಾರ ರಚಿಸಿರುವುದು ಅಚ್ಚರಿ ಮೂಡಿಸಿದೆ.

ನೇತನ್ಯಾಹು ದೀರ್ಘಾವಧಿ ಸೇವೆ ಸಲ್ಲಿಸಿದ ಇಸ್ರೆಲ್‌ನ ಪ್ರಧಾನಿಯಾಗಿದ್ದು, ಲಿಕುಡ್ ಪಕ್ಷದ ಮುಖ್ಯಸ್ಥರಾಗಿ, ವಿಪಕ್ಷ ನಾಯಕರಾಗಿ ಮುಂದುವರೆಯಲಿದ್ದಾರೆ. ಸಂಸತ್ ನಲ್ಲಿ ನಡೆದ ಚರ್ಚೆಯ ವೇಳೆ ನಾವು ವಾಪಸ್ಸಾಗಲಿದ್ದೇವೆ ಎಂದು ನೆತನ್ಯಾಹು ಹೇಳಿದ್ದಾರೆ.

ಹಾಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ತಮಗೆ ಅಧಿಕಾರದಲ್ಲಿ ಮುಂದುವರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನಂತರ ನಫ್ತಾಲಿ ಬೆನೆಟ್ ಅವರು ಇನ್ನೆರಡು ವರ್ಷಗಳ ಆಡಳಿತಾವಧಿಯನ್ನು ಯೆಶ್ ಅಟಿಡ್ ಅವರಿಗೆ ಅಧಿಕಾರ ಬಿಟ್ಟುಕೊಡಲಿದ್ದಾರೆ.

ಯಾವುದೇ ಇಸ್ರೇಲಿ ಪ್ರಜೆಯನ್ನೂ ಸಹ ಬಿಟ್ಟುಕೊಡಲು ತಮ್ಮ ಸಮಿಶ್ರ ಸರ್ಕಾರ ಒಪ್ಪುವುದಿಲ್ಲ ಎಂದಿದ್ದಾರೆ ಬಹು ಕೋಟ್ಯಧಿಪತಿಯೂ ಆಗಿರುವ ನಫ್ತಾಲಿ ಬೆನೆಟ್. ಇಸ್ರೇಲ್​ನ ಸಂಸತ್ ಹೊಸತಾಗಿ ರಚನೆಗೊಂಡಿರುವ ಸಮಿಶ್ರ ಸರ್ಕಾರಕ್ಕೆ ಅಂಗೀಕಾರ ನೀಡುವ ಸಾಧ್ಯತೆ ಬಹುತೇಕ ಹೆಚ್ಚಿದೆ ಎಂದು ಹೇಳಲಾಗಿತ್ತು. ಈಗ ಅದೇ ರೀತಿ ನಫ್ತಾಲಿ ಬೆನೆಟ್ ಇಸ್ರೇಲ್​ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

English summary
A motley alliance of Israeli parties on Sunday ousted Benjamin Netanyahu, the country's longest-serving prime minister, and formed a new government in a seismic shift in the country's turbulent politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X