ದಟ್ಟ ಹೊಗೆ: ಚೀನಾದ ಹೆದ್ದಾರಿ, ಆಟದ ಮೈದಾನಗಳು ಬಂದ್

ಬೀಜಿಂಗ್, ನವೆಂಬರ್ 05: ದಟ್ಟ ಹೊಗೆಯಿಂದಾಗಿ ಚೀಣಾದ ಆಟದ ಮೈದಾನಗಳು ಹಾಗೂ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.

ವಾಯುಮಾಲಿನ್ಯ ಹೆಚ್ಚಳದಿಂದಾಗಿ ಚೀನಾದ ಹೆದ್ದಾರಿಗಳು, ಆಟದ ಮೈದಾನಗಳು ಸ್ಥಗಿತಗೊಂಡಿವೆ. ಇತ್ತೀಚಿಗಷ್ಟೆ ಜಾಗತಿಕವಾಗಿ ವಾಯುಮಾಲಿನ್ಯ ಹೆಚ್ಚಳ ಕಂಡಿರುವ ವರದಿ ಪ್ರಕಟಗೊಂಡಿತ್ತು. ಅದರಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ಚೀನ ಅತ್ಯಧಿಕ ಕಾಣಿಕೆಯಿತ್ತಿರುವುದು ಕಂಡುಬಂದಿತ್ತು.

ಇದೀಗ ಚೀನಾದಲ್ಲಿ ಹೆಚ್ಚಿರುವ ವಾಯುಮಾಲಿನ್ಯಕ್ಕೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾರಣ ಎಂದು ಚೀನಾ ಅಧಿಕಾರಿಗಳು ತೇಪೆ ಹಚ್ಚಲು ಯತ್ನಿಸಿದ್ದಾರೆ. ಆದರೆ ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

Pollution

ಕೆಲ ದಿನಗಳ ಹಿಂದಷ್ಟೆ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ಸ್ಕಾಟ್ ಲೆಂಡಿನಲ್ಲಿ COP26 ಸಭೆ ಕರೆಯಲಾಗಿತ್ತು. ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ನಾಯಕರು ಅದರಲ್ಲಿ ಪಾಲ್ಗೊಂಡಿದ್ದರು. ಆದರೆ ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ26) ಅವರು ಈ ಹೇಳಿಕೆ ನೀಡಿದ್ದು, ಸಂಪನ್ಮೂಲಗಳ ಪ್ರಜ್ಞಾಪೂರ್ವಕ ಬಳಕೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಮತಿಹೀನ ಬಳಕೆಯನ್ನು ತೊಡೆದುಹಾಕುವ- 'ವಿಶ್ವ ಜೀವನ' ಎಂಬ ಜಾಗತಿಕ ಚಳವಳಿಯನ್ನು 'ಜೀವನ ವಿಧಾನ ಬದಲಾವಣೆ'ಯನ್ನಾಗಿ ಮಾಡಿಕೊಳ್ಳಬೇಕು ಎಂದು ಜಾಗತಿಕ ನಾಯಕರಿಗೆ ಅವರು ಮನವಿ ಮಾಡಿದ್ದಾರೆ.

2020ರ ವೇಳೆಗೆ ಪ್ರತಿ ವರ್ಷ 100 ಬಿಲಿಯನ್ ಅಮೆರಿಕನ್ ಡಾಲರ್ ಹವಾಮಾನ ಹಣಕಾಸು ಸಂಗ್ರಹಿಸುವ ಭರವಸೆಯನ್ನು ಈಡೇರಿಸದ ಅಭಿವೃದ್ಧಿ ಹೊಂದಿದ ದೇಶಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ, ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗಲು 1 ಟ್ರಿಲಿಯನ್ ಡಾಲರ್ ಸಂಗ್ರಹಿಸಬೇಕು ಎಂದು ಅವರ ಜವಾಬ್ದಾರಿಗಳನ್ನು ನೆನಪಿಸಿದರು. ಹವಾಮಾನ ನಿಧಿಯ ಹಳೆಯ ಉದ್ದೇಶಗಳನ್ನು ಇಟ್ಟುಕೊಂಡು ಹೊಸ ಗುರಿಗಳನ್ನು ಸಾಧಿಸಲು ಜಗತ್ತಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಆದರೆ ಭಾರತ ಈ ಗುರಿಯನ್ನು 2070ರಲ್ಲಿ ಸಾಧಿಸುವುದಾಗಿ ಹೇಳಿರುವುದು ಈ ದೇಶಗಳಿಗೆ ಅಚ್ಚರಿ ಮೂಡಿಸಿದೆ. ಜಗತ್ತಿನ ಅತಿ ಮಾಲಿನ್ಯಕಾರಕ ದೇಶ ಎಂದೆನಿಸಿರುವ ಚೀನಾ, 2060ರ ವೇಳೆಗೆ ಈ ಗುರಿ ಸಾಧನೆಯ ಭರವಸೆ ನೀಡಿದೆ.

ಅದಕ್ಕಿಂತಲೂ ಹತ್ತು ವರ್ಷ ತಡವಾಗಿ ಈ ಗುರಿ ಸಾಧಿಸುವುದಾಗಿ ಭಾರತ ಹೇಳಿಕೊಂಡಿದೆ. ತನ್ನ ಇಂಧನ ಅಗತ್ಯಗಳಲ್ಲಿ ಶೇ 50ರಷ್ಟನ್ನು 2030ರ ವೇಳೆಗೆ ನವೀಕರಿಸಬಹುದಾದ ಸಂಪನ್ಮೂಲಗಳಿಂದಲೇ ಪಡೆಯುವುದು, ಮುಂದಿನ ಒಂಬತ್ತು ವರ್ಷಗಳಲ್ಲಿ ಹಸಿರುಮನೆ ಅನಿಲಕ್ಕೆ (ಜಿಎಚ್‌ಜಿ) ಸಮಪ್ರಮಾಣದಲ್ಲಿ ಒಂದು ಬಿಲಿಯನ್ ಟನ್‌ನಷ್ಟು ಇಂಗಾಲವನ್ನು ತಗ್ಗಿಸಲಾಗುವುದು, 2030ರ ವೇಳೆಗೆ 2005ರಲ್ಲಿ ಇದ್ದ ಮಟ್ಟಕ್ಕೆ ಶೇ 45ರಷ್ಟು ಇಂಗಾದಲ ಸಾಂದ್ರತೆಯನ್ನು (ಜಿಡಿಪಿಯ ಪ್ರತಿ ಘಟಕಕ್ಕೆ ಇಂಗಾಲದ ವಿಸರ್ಜನೆ) ಕಡಿಮೆ ಮಾಡುವುದು ಮತ್ತು 2030ರ ವೇಳೆಗೆ ನವೀಕರಿಸಬಹುದಾದ ಇಂಧನಗಳ ಪ್ರಮಾಣವನ್ನು 450 ಗಿಗಾ ವ್ಯಾಟ್‌ನಿಂದ 500 ಗಿಗಾ ವ್ಯಾಟ್‌ಗೆ ಹೆಚ್ಚಿಸುವುದು ಭಾರತದ ಇತರೆ ಗುರಿಗಳಾಗಿವೆ.

ಇತರೆ ವಲಯವಾರು ಗುರಿಗಳಿಗೆ ಸ್ಪಷ್ಟ ಕಾಲಾನುಕ್ರಮ ನಿಗದಿಪಡಿಸುವ ಮೂಲಕ 'ಸಂಪೂರ್ಣ ಶೂನ್ಯ' ಸಾಧಿಸಲು ಹವಾಮಾನ ಕ್ರಿಯೆಗಳಿಗೆ ನಾಲ್ಕು ಇತರೆ ಹೆಜ್ಜೆಗಳನ್ನು ದೇಶ ಹೇಗೆ ಅನುಸರಿಸಲಿದೆ ಎಂದು ಮೋದಿ ವಿವರಿಸಿದ್ದಾರೆ. ಅಮೆರಿಕ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಭಾರತವನ್ನು 2050ರ ವೇಳೆಗೆ ಇಂಗಾಲದ ವಿಚಾರದಲ್ಲಿ 'ಸಂಪೂರ್ಣ ಶೂನ್ಯ' ಸಾಧನೆಗೆ ತರಬೇಕೆಂದು ಉದ್ದೇಶಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+