ಸರದಿಯಲ್ಲಿ ನಿಂತು ಬಾಲಕಿ ಮೇಲೆ ಅತ್ಯಾಚಾರ ನಡೆಸಿದ 30 ಮಂದಿ: ಎದೆನಡುಗಿಸುವ ಕೃತ್ಯ

ಜೆರುಸಲೆಂ, ಆಗಸ್ಟ್ 28: ಇಸ್ರೇಲ್‌ನ ಈಲಟ್ ಎಂಬಲ್ಲಿ ಎರಡು ವಾರಗಳ ಹಿಂದೆ ನಡೆದ ಅತ್ಯಂತ ಭೀಕರ ಸಾಮೂಹಿಕ ಅತ್ಯಾಚಾರ ಪ್ರಕರಣ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಸದ್ದು ಮಾಡಿದ್ದ 'ಮೀ ಟೂ' ಚಳವಳಿ ಈ ಘಟನೆಯಿಂದ ಮರುಜೀವ ಪಡೆದುಕೊಂಡಿದೆ.

Recommended Video

      ಅಧಿಕಾರಿಗಳ ಮನೆಯಲ್ಲಿ ಭ್ರಷ್ಟಾಚಾರದ 82 ಲಕ್ಷ ನಗದು ವಷ | Oneindia Kannada

      ರೆಡ್ ಸೀ ಎಂಬ ರೆಸಾರ್ಟ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಪುರುಷರು 16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಲು ಸರದಿಯಲ್ಲಿ ನಿಂತಿದ್ದರು. ಒಬ್ಬರ ನಂತರ ಒಬ್ಬರು ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದರು ಎಂಬ ಎದೆನಡುಗಿಸುವಂತಹ ಹೇಯ ಕೃತ್ಯ ವರದಿಯಾಗಿತ್ತು.

      ಘಟನೆಗೆ ಸಂಬಂಧಿಸಿದಂತೆ 13 ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರದ ಘಟನೆ ನಡೆದ ಹೋಟೆಲ್‌ನ ಮ್ಯಾನೇಜರ್‌ನನ್ನು ಕೂಡ ಬಂಧಿಸಲಾಗಿದೆ. ಬಂಧಿತ ಶಂಕಿತರೆಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಮುಂದೆ ಓದಿ.

      ಸರದಿಯಲ್ಲಿ 30 ಮಂದಿ

      ಸರದಿಯಲ್ಲಿ 30 ಮಂದಿ

      ಎರಡು ವಾರಗಳ ಹಿಂದೆ ಈ ಹೋಟೆಲ್‌ನಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆದಿತ್ತು. ಅತ್ಯಾಚಾರ ಎಸಗಲು 30ಕ್ಕೂ ಹೆಚ್ಚು ಮಂದಿ ಸರದಿಯಲ್ಲಿ ಕಾದು ನಿಂತಿದ್ದರು. ಇದರಲ್ಲಿ ಭಾಗಿಯಾದವರಲ್ಲಿ ಹೆಚ್ಚಿನವರು 20ರ ಆಸುಪಾಸಿನ ವಯಸ್ಸಿನವರು ಎಂದು ಹೇಳಲಾಗಿದೆ. ಈ ಬಗ್ಗೆ ಬಾಲಕಿ ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಲಾಗಿದೆ.

      ಮೀ ಟೂ ಚಳವಳಿಗೆ ಜೀವ

      ಮೀ ಟೂ ಚಳವಳಿಗೆ ಜೀವ

      ಈ ಘಟನೆ ಇಸ್ರೇಲ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬಾಲಕಿಯಾಗಿದ್ದಾಗ ತಾವೂ ಅತ್ಯಾಚಾರಕ್ಕೆ ಒಳಗಾಗಿದ್ದೆವು ಎನ್ನುವ ಮೂಲಕ ಅನೇಕ ಮಹಿಳೆಯರು 'ಮೀ ಟೂ' ಚಳವಳಿಗೆ ಮತ್ತೆ ಜೀವ ನೀಡಿದ್ದಾರೆ. ಬಾಲ್ಯದಲ್ಲಿ ತಮ್ಮ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಧೈರ್ಯದಿಂದ ಹೇಳಿಕೊಳ್ಳಲು ಆರಂಭಿಸಿದ್ದಾರೆ.

      'ಮೋರ್ ದ್ಯಾನ್ 30' ಆಂದೋಲನ

      'ಮೋರ್ ದ್ಯಾನ್ 30' ಆಂದೋಲನ

      17 ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಆದರೆ ಅಲ್ಲಿ ಇದ್ದದ್ದು 30ಕ್ಕೂ ಹೆಚ್ಚು ಅತ್ಯಾಚಾರಿಗಳು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದ್ದು, 'ಮೋರ್ ದ್ಯಾನ್ 30' ಎಂಬ ಪ್ರತಿಭಟನಾ ಚಳವಳಿ ಕೂಡ ನಡೆದಿದ್ದಾರೆ.

      ಅತ್ಯಾಚಾರದ ವಿಡಿಯೋ ಚಿತ್ರೀಕರಣ

      ಅತ್ಯಾಚಾರದ ವಿಡಿಯೋ ಚಿತ್ರೀಕರಣ

      ಹೋಟೆಲ್‌ನ ಭದ್ರತಾ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದು, ಆ ಬಾಲಕಿ ಇದ್ದ ಕೊಠಡಿಯ ಹೊರಗೆ ಕೆಲವುವ್ಯಕ್ತಿಗಳು ಸಾಲಾಗಿ ನಿಂತಿದ್ದು ಕಂಡರೆ, ಇನ್ನು ಕೆಲವರು ಒಳಗೆ ಇದ್ದದ್ದು ಕಾಣಿಸುತ್ತಿತ್ತು. ಕೆಲವರು ನಡೆಸಿದ ಅತ್ಯಾಚಾರಗಳನ್ನು ಸೆಲ್‌ಫೋನ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದ್ದು, ಪೊಲೀಸರು ಆ ವಿಡಿಯೋಗಳನ್ನು ಪತ್ತೆಹಚ್ಚಲು ಮತ್ತು ಅವು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗದಂತೆ ತಡೆಯಲು ಪ್ರಯತ್ನ ನಡೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+