2008ರ ಅಸ್ತ್ರ ಹೊರತೆಗೆದ ಬರಾಕ್ ಒಬಾಮಾ: ಡೊನಾಲ್ಡ್ ಟ್ರಂಪ್ ಐಡಿಯಾ ಢಮಾರ್?
ಬರಾಕ್ ಒಬಾಮಾ... ಈ ಹೆಸರು ಕೇಳಿದರೆ ಅಮೆರಿಕನ್ನರು ಒಂದು ಕ್ಷಣ ಯೋಚಿಸುತ್ತಾರೆ. ಯಾಕಂದ್ರೆ ಸಂಕಷ್ಟದ ಪರಿಸ್ಥಿತಿಯಲ್ಲಿ ಅಮೆರಿಕದ ಚುಕ್ಕಾಣಿ ಹಿಡಿದಿದ್ದ ಬರಾಕ್ ಒಬಾಮಾ ಅವರು, ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿದ್ದ ಅಮೆರಿಕದ ಮಾನ & ಮರ್ಯಾದಿ ಕಾಪಾಡಿದ್ದರು. ಹೀಗಿದ್ದಾಗ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡಕ್ಕೂ ಒಬಾಮಾ ಅವರು ಭರ್ಜರಿ ಎಂಟ್ರಿ ಪಡೆದಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಐಡಿಯಾ ಢಮಾರ್ ಆಗಿದೆ!
ಅಮೆರಿಕ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿದ್ದು, ಹೀಗಾಗಿಯೇ ಅಲ್ಲಿನ ಚುನಾವಣೆ ಜಾಗತಿಕವಾಗಿ ಕೂಡ ಗಮನ ಸೆಳೆಯುತ್ತದೆ. ಇದೀಗ ಅಮೆರಿಕದ ಚುನಾವಣೆ ಆರಂಭ ಆಗಿದೆ. ಕಮಲಾ ಹ್ಯಾರಿಸ್ ಈ ಬಾರಿ ಗೆದ್ದೇ ಗೆಲ್ಲಬೇಕು ಎಂಬುದು ಅಮೆರಿಕದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ ಅವರ ಗಟ್ಟಿ ನಿರ್ಧಾರ. ಅದರಲ್ಲೂ ಅಮೆರಿಕದ ಹಾಲಿ ಅಧ್ಯಕ್ಷರಾಗಿದ್ದ ಜೋ ಬೈಡನ್ ಅವರು, 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹೋರಾಟದಿಂದ ಹಿಂದೆ ಸರಿಯಲು ಇದೇ ಒಬಾಮಾ ಅವರೇ ಕಾರಣ ಎಂಬ ಮಾತು ಇದೆ. ಯಾಕಂದ್ರೆ ಜೋ ಬೈಡನ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಚುನಾವಣೆಗೆ ನಿಂತಿದ್ದರೆ ಪಕ್ಕಾ ಟ್ರಂಪ್ ಗೆಲ್ಲುತ್ತಿದ್ದರು.

ಒಬಾಮಾ & ಹೆಂಡತಿಯ ಪ್ರಚಾರ
ಈಗಾಗಲೇ ಒಂದು ಬಾರಿ ಜೋ ಬೈಡನ್ ಅಧಿಕಾರ ನಡೆಸಿದ್ದು, ಸಿಕ್ಕಾಪಟ್ಟೆ ಆಡಳಿತ ವಿರೋಧಿ ಅಲೆ ಇದೆ. ಹೀಗಿದ್ದಾಗಲೇ ಕಮಲಾ ಹ್ಯಾರಿಸ್ ಪರವಾಗಿ ಬರಾಕ್ ಒಬಾಮಾ ಹಾಗೂ ಅವರ ಹೆಂಡತಿ ಚುನಾವಣಾ ಪ್ರಚಾರ ಆರಂಭಿಸಿದ್ದು ಗಟ್ಟಿಯಾದ ಅಸ್ತ್ರ ಪ್ರಯೋಗಿಸಿದ್ದಾರೆ ಒಬಾಮಾ. ಹಾಗಾದ್ರೆ ಒಬಾಮಾ ಅವರು ಇದೀಗ ಪ್ರಯೋಗ ಮಾಡಿರುವ ಅಸ್ತ್ರ ಯಾವುದು? ಇದರಿಂದ ಏನು ಪ್ರಯೋಜನ? ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹೋರಾಟದ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಅಮೆರಿಕದಲ್ಲಿ ಒಬಾಮಾ ಸಂಚಲನ!
ಬರಾಕ್ ಒಬಾಮಾ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಎಂಟ್ರಿ ಕೊಡಲು ಒಂದೇ ಒಂದು ಭಾಷಣ ಕಾರಣ. ಅಮೆರಿಕದ ಜನರನ್ನು ಉದ್ದೇಶಿಸಿ ಬರಾಕ್ ಒಬಾಮಾ ಮೊದಲಿಗೆ ಮಾಡಿದ್ದ ಭಾಷಣವೇ ಕೋಟಿ ಕೋಟಿ ಜನರ ಗಮನ ಸೆಳೆದಿತ್ತು. ಆ ನಂತರ ಒಬಾಮಾ ಅವರು ಒಟ್ಟಾರೆ 2 ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅಲ್ಲದೆ ಬರಾಕ್ ಒಬಾಮಾ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಲವು ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದರು.
ಹೀಗೆ ತಮ್ಮ ಮೊದಲ ಚುನಾವಣೆ ಅಂದ್ರೆ 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಒಬಾಮಾ ಅವರು ಬಳಸಿದ್ದ ಅಸ್ತ್ರವನ್ನೇ ಈಗ ಮತ್ತೆ ಬಳಸಿದ್ದಾರೆ. 'Yes She Can' ಎಂಬ ಘೋಷ ವಾಖ್ಯದ ಮೂಲಕ ಇದೀಗ ಕಮಲಾ ಹ್ಯಾರಿಸ್ ಅವರ ಗೆಲುವಿಗಾಗಿ ರಣಕಹಳೆ ಮೊಳಗಿಸಿದ್ದಾರೆ ಬರಾಕ್ ಒಬಾಮಾ ಅವರು. ಈ ಮೂಲಕ 2008ರ ಅಸ್ತ್ರ ಹೊರತೆಗೆದ ಬರಾಕ್ ಒಬಾಮಾ ಅವರಿಂದ ಡೊನಾಲ್ಡ್ ಟ್ರಂಪ್ ಐಡಿಯಾ ಢಮಾರ್ ಆಗಿದೆ ಅಂತಿದ್ದಾರೆ ಬೆಂಬಲಿಗರು.












Click it and Unblock the Notifications