ಬರಾಕ್ ಒಮಾಬಾ-ಮಿಶೆಲ್ ದಾಂಪತ್ಯದಲ್ಲಿ ಬಿರುಕು!
ಚಿಕಾಗೊ, ಜ.16- ಅತ್ತ ಅಮೆರಿಕದ ಬಹುಭಾಗದ ಜನರು ಅತಿ ಶೀತದಿಂದ ಗಡಗಡ ಅನ್ನುತ್ತಿದ್ದರೆ ಅಲ್ಲಿನ ಶ್ವೇತಭವನ ಬೇರೆಯದೇ ಕಾರಣಕ್ಕಾಗಿ ಗಡಗಡ ಎನ್ನುತ್ತಿದೆ. ಏನಪ್ಪಾ ಅಂದರೆ ಶ್ವೇತಭವನದ ಮೊದಲ ದಂಪತಿ ಅರ್ಥಾತ್ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆಯಂತೆ. ಅಂದರೆ ಒಬಾಮಾ ತಮ್ಮ ಪತ್ನಿ ಮಿಶೆಲ್ ಗೆ ಸದ್ಯದಲ್ಲೇ ಸೋಡಾಚೀಟಿ ನೀಡಲಿದ್ದಾರಂತೆ!
ಹಾಗಂತ ಸುದ್ದಿಗಾಗಿ ತಹತಹಿಸುವ ಅಮೆರಿಕದ ಟ್ಯಾಬ್ಲಾಯ್ಡ್ ಪತ್ರಿಕೆಗಳು ಶ್ವೇತಭವನದ ಮೇಲೆ ಮುರುಕೊಂಡು ಬಿದ್ದಿವೆ. ಹಾಗಂತ ಇದೇನೂ ಗಾಳಿಸುದ್ದಿ ಎಂದು ತೆಗೆದುಹಾಕುವಂತಲೂ ಇಲ್ಲ. ಏಕೆಂದರೆ ಒಂದಷ್ಟು ಬಲವಾದ ಕಾರಣಗಳನ್ನಿಟ್ಟುಕೊಂಡೇ ಆ ಪತ್ರಿಕೆಗಳು ಒಮಾಬಾ-ಮಿಶೆಲ್ ದಾಂಪತ್ಯದಲ್ಲಿನ ಬಿರುಕನ್ನು ಟೇಪ್ ನಲ್ಲಿ ಅಳೆದು ಬರೆದಿವೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಕೆಲ ಸಾರ್ವಜನಿಕ ವೇದಿಕೆಗಳಲ್ಲಿ ಅಮೆರಿಕದ ಮೊದಲ ದಂಪತಿ ಅಕ್ಕಪಕ್ಕದಲ್ಲಿ ನಿಲ್ಲದೆ ದೂರವಾಗಿದ್ದು, ಮಿಶೆಲ್ ಅಂತೂ ಗಂಟುಮೋರೆ ಹಾಕಿಕೊಂಡಿರುವ ಚಿತ್ರಗಳು ಢಾಳಾಗಿ ಪತ್ರಿಕೆಗಳಿಗೆ ಸಿಕ್ಕಿವೆ. ಇವೂ ಸಹ ಬಿರುಕಿಗೆ ತುಪ್ಪ ಸುರಿದಿವೆ.

ಆದರೆ 50 ರ ಹೊಸ್ತಿಲಲ್ಲಿರುವ ಮಿಶೆಲ್ ಅಂಥಾದ್ದೇನೂ ಆಗಿಲ್ಲ ಮಾರಾಯ್ರೇ! ನಾವಿಬ್ಬರೂ ಅನ್ಯೋನ್ಯ ದಂಪತಿಗಳು ಎಂದು ನಗೆ ಚೆಲ್ಲಿದ್ದಾರೆ. ಆದರೂ ಪತ್ರಿಕೆಗಳ ಕಣ್ಣಂಚಿನಲ್ಲಿ ಮತ್ತೇನೋ ಕಂಡಿದೆ. ಹಾಗೆ ನೋಡಿದರೆ ಅಮೆರಿಕದ ಅಧ್ಯಕ್ಷರುಗಳ ವಿಷಯದಲ್ಲಿ ಲೈಂಗಿಕ ಹಗರಣಗಳಿಗೇನೂ ಕೊರತೆಯಿಲ್ಲ. ಹಿಂದಿನ ಅಧ್ಯಕ್ಷರುಗಳ ಬಗ್ಗೆ ಪುಂಖಾನುಪುಂಖ ಕಥೆಗಳು ಹರಿದುಬರುತ್ತಿರುತ್ತವೆ.
ಒಬಾಮಾ ಮತ್ತು ಮಿಶೆಲ್ ದಂಪತಿ ಇತ್ತೀಚಿನ ದಿನಗಳಲ್ಲಿ ವೈಟ್ ಹೌಸ್ ನಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಇತ್ತೀಚಿಗೆ ಒಬಾಮಾ ಕುಟುಂಬ ಸಮೇತ ಹವಾಯ್ ಗೆ ಪ್ರವಾಸ ಹೋಗಿದ್ದರು. ಆದರೆ ಅಲ್ಲಿಂದ ವಾಪಸಾಗುವಾಗ ಪತ್ನಿ, ಪುತ್ರಿಯರನ್ನು ಅಲ್ಲಿಯೇ ಬಿಟ್ಟು ಏಕಾಂಗಿಯಾಗಿ ಮರಳಿದ್ದರು. ಈ ವಿಷಯ ಕೂಡಾ ಇಬ್ಬರು ವಿಚ್ಛೇದನದತ್ತ ಮುಂದಾಗಿದ್ದಾರೆ ಎಂಬುದಕ್ಕೆ ಸ್ಪಷ್ಟ ಪುರಾವೆ ಒದಗಿಸುತ್ತಿದೆ ಪತ್ರಿಕೆಗಳು ವರದಿ ಮಾಡಿವೆ.
ಹೌಸ್ ವೈಫ್ ಮಿಶೆಲ್ ವೈಟ್ ಹೌಸ್ ನಲ್ಲಿ ಇಲ್ಲದ ಸಮಯದಲ್ಲಿ ಒಬಾಮಾ ಕದ್ದುಮುಚ್ಚಿ ಪರಸ್ತ್ರೀ ಜತೆಗಿದ್ದ ಪ್ರಕರಣವೇ ವಿಚ್ಛೇದನಕ್ಕೆ ಕಾರಣ. ಇಂಥ ಎರಡು ಘಟನೆಗಳು ನಡೆದಿದ್ದರೂ, ಅಮೆರಿಕದ ಗುಪ್ತಚರ ದಳ ಮಾಹಿತಿಯನ್ನು ಮುಚ್ಚಿಟ್ಟಿತ್ತು. ಆದರೆ ಇತ್ತೀಚೆಗೆ ಗುಪ್ತಚರ ದಳದ ಉನ್ನತಾಧಿಕಾರಿಯೊಬ್ಬರು 'ಒಬಾಮಾ ಒಬ್ಬ ಯುವತಿಯ ಜತೆ ಆಕ್ಷೇಪಾರ್ಹ ಭಂಗಿಯಲ್ಲಿ ಇದ್ದುದನ್ನು ನಾನು ಕಣ್ಣಾರೆ ಕಂಡಿದ್ದಾಗಿ' ಹೇಳುತ್ತಾ ವೈಟ್ ಹೌಸ್ ಮೇಲೆ ಬಾಂಬ್ ಎಸೆದಿದ್ದರು.
ಈ ವಿಷಯವನ್ನು ಮತ್ತಷ್ಟು ಖಚಿತಪಡಿಸಿಕೊಂಡ ಮಿಶೆಲ್ ಇದೀಗ ಪತಿಯಿಂದ ದೂರವಾಗಲು ನಿರ್ಧರಿಸಿದ್ದಾರೆ ಎಂದು ಪತ್ರಿಕಾ ವರದಿಗಳು ಬೊಬ್ಬಿಡುತ್ತಿವೆ.
ಅಂದಹಾಗೆ, 14 ವರ್ಷಳ ಹಿಂದೆಯೂ Edward Klein biography ಪ್ರಕಾರ ಪತಿರಾಯ ಒಬಾಮಾ ಬೇರೊಬ್ಬಳ ಜತೆ ಸಂಬಂಧ ಹೊಂದಿ ಮಿಶೆಲ್ ಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದರಂತೆ. ಆದರೆ ಪತಿಯೇ ಪರದೈವ ಎಂದು ಬಗೆದ ಮಿಶೆಲ್ ಬಿಲ್ಕುಲ್ ವಿಚ್ಛೇದನಕ್ಕೆ ಒಪ್ಪಿಗೆ ನೀಡಿರಲಿಲ್ಲವಂತೆ. ಇದೀಗ ಮತ್ತೊಮ್ಮೆ ಒಮಾಬಾ-ಮಿಶೆಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ.












Click it and Unblock the Notifications