ಭಾರತದ ಬಗ್ಗೆ ಬಾಂಗ್ಲಾ ಭಾವಿ ಪ್ರಧಾನಿ ಮಾತು, ಒಗ್ಗಟ್ಟಿನ ಮಂತ್ರ ಜಪಿಸಿದ ತಾರಿಕ್ ರೆಹಮಾನ್... Bangladesh Election

ಬಾಂಗ್ಲಾದೇಶ ಇದೀಗ ಹೊಸ ಹಾದಿಗೆ ಹೆಜ್ಜೆ ಇಟ್ಟಿದ್ದು, ಇಷ್ಟುದಿನ ಕೋಮು ಗಲಭೆಯ ಕೂಪಕ್ಕೆ ಬಿದ್ದು ಒದ್ದಾಡಿ ನರಳಿದ್ದ ದೇಶಕ್ಕೆ ಹೊಸ ನಾಯಕ ಸಿಕ್ಕಿರುವುದು ಖುಷಿ ನೀಡಿದೆ. ಭಾರತದ ಬೆಂಬಲದಿಂದ ಸ್ವಾತಂತ್ರ್ಯ ಪಡೆದಿದ್ದ ಬಾಂಗ್ಲಾದೇಶ ಕಳೆದ 2 ವರ್ಷಗಳಿಂದ ನಮ್ಮ ದೇಶದ ಜೊತೆಯಲ್ಲೇ ಕಿರಿಕ್ ಮಾಡಿ ಜಾಗತಿಕವಾಗಿ ವಿವಾದ ಸೃಷ್ಟಿಸಿತ್ತು. ಅಲ್ಲದೆ ಭಾರತ ಕೂಡ ಸರಿಯಾಗಿ ಬುದ್ಧಿ ಕಲಿಸಲು ಹಲವು ತಂತ್ರ ಪ್ರಯೋಗಿಸಿ ಬಾಂಗ್ಲಾದೇಶದ ನಾಯಕರನ್ನು ಸೈಲೆಂಟ್ ಮಾಡಿತ್ತು. ಇಷ್ಟೆಲ್ಲಾ ನಡೆದರೂ ಪದೇ ಪದೇ ದ್ವೇಷ ಸಾಧಿಸುತ್ತಿದ್ದ ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಇದೀಗ ತೊಲಗುವ ಸಮಯ ಬಂದಿದೆ. ಈ ಸಮಯದಲ್ಲೇ ಬಾಂಗ್ಲಾ ಭಾವಿ ಪ್ರಧಾನಿ ತಾರಿಕ್ ರೆಹಮಾನ್ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾ ನಡುವೆ ಕಿರಿಕ್ ಶುರುವಾದ ನಂತರ ಅದರ ಲಾಭ ಪಡೆಯಲು ಪಾಕಿಸ್ತಾನದ ಸರ್ಕಾರ ಮುಂದಾಗಿತ್ತು. ಅದರಲ್ಲೂ ಬಾಂಗ್ಲಾದೇಶ ಚುನಾವಣೆಯಲ್ಲಿ ತಮ್ಮ ಮಾತು ಕೇಳುವಂತಹ ಅಭ್ಯರ್ಥಿಗಳು ಗೆದ್ದರೆ ತಾವು ಹೇಳಿದಂತೆ ಕೇಳುತ್ತಾರೆ ಎಂಬ ಲೆಕ್ಕಾಚಾರ ಹಾಕಿಕೊಂಡಿತ್ತು. ಈ ಕಾರಣಕ್ಕೆ ಜಮಾತೆ-ಇ-ಇಸ್ಲಾಮಿ ಪಕ್ಷಕ್ಕೆ ಬೆಂಬಲ ನೀಡಿದ್ದ ಪಾಕಿಸ್ತಾನ, ಆ ಪಕ್ಷ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಾ ಕುಳಿತಿತ್ತು. ಆದರೆ ಅದು ನಡೆಯಲಿಲ್ಲ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಈಗ ಪೂರ್ಣ ಬಹುಮತ ಪಡೆದು 212 ಸ್ಥಾನಗಳ ಮೂಲಕ ಸರ್ಕಾರ ರಚಿಸಲು ಸಜ್ಜಾಗಿದೆ. ಇದೇ ಸಮಯದಲ್ಲಿ ಅತ್ತ ಬಾಂಗ್ಲಾ ಭಾವಿ ಪ್ರಧಾನಿ ತಾರಿಕ್ ರೆಹಮಾನ್ ಭಾರತದ ಜೊತೆಗೆ ಸಂಬಂಧ ಸುಧಾರಣೆಗೆ ಒಲವನ್ನು ತೋರಿಸಿದ್ದಾರೆ.

Bangladesh Election

ಭಾರತದ ಜೊತೆಗೆ ಸಂಬಂಧ ಸುಧಾರಣೆ?

ಬಾಂಗ್ಲಾದೇಶದ ಮುಂದಿನ ಪ್ರಧಾನಿ ಪಟ್ಟಕ್ಕೆ ಬಹುತೇಕ ತಾರಿಕ್ ರೆಹಮಾನ್ ಆಯ್ಕೆ ಖಚಿತವಾಗಿದ್ದು, ಇದೀಗ ಬಾಂಗ್ಲಾದ ಭವಿಷ್ಯದ ವಿದೇಶಾಂಗ ನೀತಿ ಕುರಿತು ತಾರಿಕ್ ರೆಹಮಾನ್ ನೀಡಿರುವ ಹೇಳಿಕೆಗಳು ಗಮನ ಸೆಳೆದಿದೆ. ನನಗೆ ರಾಷ್ಟ್ರೀಯ ಹಿತಾಸಕ್ತಿಯೇ ಅತಿಮುಖ್ಯ ಮತ್ತು ಅದರಲ್ಲಿ ರಾಜಿ ಆಗುವ ಮಾತಿಲ್ಲ ಎಂದು ಹೇಳಿರುವುದು ಮತ್ತೊಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲೂ, ಭಾರತದ ಜೊತೆ ಸಂಬಂಧ ಸುಧಾರಣೆ ವಿಚಾರದಲ್ಲಿ ನಮಗೆ ಬಾಂಗ್ಲಾದೇಶ & ಬಾಂಗ್ಲಾದೇಶದ ಜನರೇ ಮೊದಲು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದೆಲ್ಲವನ್ನೂ ಮೀರಿ ತಾರಿಕ್ ರೆಹಮಾನ್ ಈಗ ಭಾರತದ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+