Baba Vanga Predition: ಬಾಬಾ ವಂಗಾ ಆಘಾತಕಾರಿ ಭವಿಷ್ಯ
ಹಲವು ಸ್ವಾಮೀಜಿಗಳು ಭಯಾನಕ ಭವಿಷ್ಯಗಳನ್ನು ನುಡಿಯುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅದರಲ್ಲೂ ಬಾಬಾ ವಂಗಾ ಅವರು ರಾಜಕರಣ, ಪ್ರಕೃತಿಯಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂದು ಭವಿಷ್ಯ ನುಡಿಯುವುದರಲ್ಲಿ ಪ್ರಸಿದ್ಧಿ ಹೊಂದಿದವರಾಗಿದ್ದರು. ಇದೀಗ ಅವರು ನುಡಿದಿರುವ ಸ್ಫೋಟಕ ಭವಿಷ್ಯ ವಾಣಿಯೊಂದನ್ನು ಭಾರೀ ವೈರಲ್ ಆಗುತ್ತಿದೆ.
ಈಗಾಗಲೇ ಬಾಬಾ ವಂಗಾ ಅವರು ಅವರು ನುಡಿದಿರುವ ಹಲವು ನಿಜ ಕೂಡ ಆಗಿದ್ದು, ಇದರಿಂದ ಜನರು ಮುಂದೆ ಇನ್ನೇನೆಲ್ಲಾ ಸಂಭವಿಸುಯತ್ತವೆಯೋ ಎಂಬ ಆತಂಕದಲ್ಲಿದ್ದಾರೆ. ಈ ನಡುವೆಯೇ ಅವರ ಮತ್ತೊಂದು ಆಘಾತಕಾರಿ ಭವಿಷ್ಯವಾಣಿ ಭಾರೀ ಸದ್ದು ಮಾಡುತ್ತಿದೆ.

ಬಾಬಾ ವಂಗಾ ಅವರ ಪ್ರಕಾರ, 2170ರಲ್ಲಿ ಇಡೀ ವಿಶ್ವವು ಭೀಕರ ಬರಗಾಲವನ್ನು ಎದುರಿಸಬೇಕಾಗುತ್ತದೆ. ಭೂಮಿಯ ಮೇಲೆ ನೀರಿನ ತೀವ್ರ ಅಭಾವ ಉಂಟಾಗಿ, ನದಿ, ಕೆರೆ ಸೇರಿದಂತೆ ಎಲ್ಲಾ ಜಲಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತವೆ.
ಈ ದುರಂತ ಕೇವಲ ಕುಡಿಯುವ ನೀರಿನ ಸಮಸ್ಯೆಗೆ ಸೀಮಿತವಾಗದೆ, ಕೃಷಿ ಚಟುವಟಿಕೆಗಳಿಗೂ ಮಾರಕ ಆಗಲಿದೆ. ಕೃಷಿ ಇಲ್ಲದ ಕಾರಣ ಆಹಾರದ ತೀವ್ರ ಕೊರತೆ ಉಂಟಾಗಿ ಕೋಟ್ಯಂತರ ಜನರು ಹಸಿವು ಮತ್ತು ಬಾಯಾರಿಕೆಯಿಂದ ಸಾವನ್ನಪ್ಪಲಿದ್ದಾರೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಬಾಬಾ ವಂಗಾ ಅವರ ಈ ಭವಿಷ್ಯ ನೈಸರ್ಗಿಕ ಕಾರಣಗಳಿಂದ ಸಂಭವಿಸುವುದಿಲ್ಲ. ಮಾನವನಿಂದ ಆಗುವ ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಿತಿಮೀರಿದ ಬಳಕೆಯೇ ಇದಕ್ಕೆ ಮುಖ್ಯ ಕಾರಣ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಹವಾಮಾನ ತಜ್ಞರು ಸಹ ಈಗಾಗಲೇ ಭೂಮಿಯ ತಾಪಮಾನವನ್ನು ನಿಯಂತ್ರಿಸದಿದ್ದರೆ, ಮುಂದಿನ ನೂರು ವರ್ಷಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಬಾಬಾ ವಂಗಾ ಅವರ ಭವಿಷ್ಯವಾಣಿಯು ವಿಜ್ಞಾನಿಗಳ ಮಾತಿಗೆ ಪುಷ್ಟಿ ನೀಡುವಂತಿದೆ.
ಆದರೆ, ವಿಜ್ಞಾನವು ಬಾಬಾ ವಂಗಾ ಅವರ ಈ ಭವಿಷ್ಯವನ್ನು ಸಂಪೂರ್ಣವಾಗಿ ಒಪ್ಪುತ್ತದೆಯೇ? ಬಾಬಾ ವಂಗಾ ಅವರ ಭವಿಷ್ಯವಾಣಿಗಳು ನಿಗೂಢ ಆಗಿರುತ್ತವೆ. ಆದರೂ ವೈಜ್ಞಾನಿಕವಾಗಿ ಕಂಡುಬರುತ್ತಿರುವ ಹವಾಮಾನ ಬದಲಾವಣೆಯ ಗಂಭೀರ ಲಕ್ಷಣಗಳನ್ನು ಅಲ್ಲಗಳೆಯುವಂತಿಲ್ಲ. ಹವಾಮಾನ ಬದಲಾವಣೆಯ ಕುರಿತ ಅಂತರ ಸರ್ಕಾರಿ ಮಂಡಳಿಯ ವರದಿ ಪ್ರಕಾರ, ಜಾಗತಿಕ ತಾಪಮಾನವನ್ನು ನಿಯಂತ್ರಿಸದಿದ್ದರೆ 2100ರ ವೇಳೆಗೆ ವಿಶ್ವದ ಶೇಕಡಾ 40 ರಷ್ಟು ಜನಸಂಖ್ಯೆಯು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, 2050ರ ವೇಳೆಗೆ 1.8 ಶತಕೋಟಿ ಜನರು ತೀವ್ರವಾದ ನೀರಿನ ಸಮಸ್ಯೆಯಿಂದ ಬಳಲಿದ್ದಾರೆ ಮತ್ತು ಜಾಗತಿಕ ತಾಪಮಾನವು ಸರಾಸರಿ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಈ ವೈಜ್ಞಾನಿಕ ಮುನ್ಸೂಚನೆಗಳು ಬಾಬಾ ವಂಗಾ ಅವರ ಭವಿಷ್ಯದ ತೀವ್ರತೆಯನ್ನು ಸೂಚಿಸುತ್ತವೆ.
1911ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ಅವರ ನಿಜವಾದ ಹೆಸರು ವಂಗೆಲಿಯಾ ಪಾಂಡೇವಾ ಗುಷ್ಟೆರೋವಾ. ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡ ಅವರು 1996ರಲ್ಲಿ ನಿಧನರಾದರು. ತಮ್ಮ ಜೀವನದಲ್ಲಿ ಅವರು ಅನೇಕ ಆಘಾತಕಾರಿ ಭವಿಷ್ಯವಾಣಿಗಳನ್ನು ನುಡಿದಿದ್ದರು, ಅವುಗಳಲ್ಲಿ 9/11 ದಾಳಿ, ಸೋವಿಯತ್ ಒಕ್ಕೂಟದ ಪತನ, ಚೆರ್ನೋಬಿಲ್ ದುರಂತ ಮತ್ತು ಮೂರನೇ ಮಹಾಯುದ್ಧದ ಎಚ್ಚರಿಕೆ ಸೇರಿದಂತೆ ಕೆಲವು ನಿಜವಾಗಿವೆ ಎಂಬ ನಂಬಿಕೆ ಇದೆ. ಆದ್ದರಿಂದ ಅವರು ನುಡಿದಿರುವ ಭವಿಷ್ಯದಿಂದ ಮುಂದೆ ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ.












Click it and Unblock the Notifications