ಭಾರತದಿಂದ ಆಸ್ಟ್ರೇಲಿಯಾಗೆ ತೆರಳಿದರೆ 5 ವರ್ಷ ಜೈಲು ಶಿಕ್ಷೆ!
ನವದೆಹಲಿ, ಮೇ 1: ಭಾರತದಿಂದ ಆಸ್ಟ್ರೇಲಿಯಾಗೆ ಹೋದವರು ಕನಿಷ್ಠ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಭಾರತದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾವು ಭಾರತದಿಂದ ಬರುವವರಿಗೆ ನಿರ್ಬಂಧ ಹೇರಿದೆ.
ಒಂದೊಮ್ಮೆ ಆಸ್ಟ್ರೇಲಿಯಾಗೆ ಬಂದರೆ 5 ವರ್ಷ ಜೈಲು ಶಿಕ್ಷೆ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಿದೆ. ಸೂಚನೆ ಕೊಟ್ಟಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಸರ್ಕಾರ ಇನ್ನೂ ಕಠಿಣ ಕ್ರಮವನ್ನು ಕೈಗೊಂಡಿದೆ.

ವಿದೇಶಗಳಿಂದ ಆಸ್ಟೇಲಿಯಾಕ್ಕೆ ಮರಳುವ ಪ್ರಜೆಗಳು 14 ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದರೆ ಅವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಮುಂದಾಗಿದೆ. ಕೊರೊನಾ ಪೀಡಿತ ಭಾರತದಿಂದ ಆಸ್ಟ್ರೇಲಿಯಾಕ್ಕೆ ತೆರಳಿದರೆ 5 ವರ್ಷಗಳ ಜೈಲು ಶಿಕ್ಷೆ ಇಲ್ಲವೇ 66 ಸಾವಿರ ಡಾಲರ್ಗೂ ಹೆಚ್ಚಿನ ದಂಡವನ್ನು ವಿಧಿಸಲು ಚಿಂತನೆ ನಡೆದಿದೆಯಂತೆ.
3 ವಾರಗಳ ಹಿಂದೆಯೇ ಭಾರತದ ಜೊತೆ ವಿಮಾನ ಸಂಪರ್ಕವನ್ನು ಆಸ್ಟ್ರೇಲಿಯಾ ಕಡಿದುಕೊಂಡಿದೆ. ಆದರೆ ಭಾರತಕ್ಕೆ ಭೇಟಿ ನೀಡಿರುವ ಆಸ್ಟ್ರೇಲಿಯಾ ಪ್ರಜೆಗಳು ಇಲ್ಲಿಂದ ದುಬೈ, ಲಂಡನ್ನಂತ ದೇಶಗಳಿಗೆ ತೆರಳಿ ಅಲ್ಲಿಂದ ಆಸ್ಟ್ರೇಲಿಯಾಗೆ ಸಂಚರಿಸುತ್ತಿದ್ದಾರೆ.
ಆಸ್ಟ್ರೇಲಿಯಾ ಸರ್ಕಾರದ ಅನುಮತಿಯೂ ಇಲ್ಲ. ಆದರೆ ಬೇರೆ ದಾರಿ ಹಿಡಿದಿರುವ ಕೆಲವರು ಭಾರತದಿಂದ ಬೇರೆ ದೇಶಗಳಿಗೆ ತೆರಳಿ, ಅಲ್ಲಿಂದ ವಿಮಾನದ ಮೂಲಕ ಆಸ್ಟ್ರೇಲಿಯಾಗೆ ಹೋಗುತ್ತಿದ್ದಾರೆ.
ಇದರಿಂದ ಭಾರತದ ಸೋಂಕು ನಮ್ಮ ದೇಶಕ್ಕೆ ಬರುತ್ತಿದೆ ಎಂದು ಆಸ್ಟ್ರೇಲಿಯಾ ಸರ್ಕಾರ ಕುಪಿತಗೊಂಡಿದೆ. ಹೀಗಾಗಿ ಆಸ್ಟ್ರೇಲಿಯಾಗೆ ಮರಳುವ ಪ್ರಜೆಗಳು 14 ದಿನಗಳೊಳಗೆ ಭಾರತಕ್ಕೆ ಭೇಟಿ ನೀಡಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.












Click it and Unblock the Notifications