ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ 50ಕ್ಕೂ ಅಧಿಕ ಎಕ್ಸಿಟ್ ಪೋಲ್ ಸುಳ್ಳಾಗಿತ್ತು, ಭಾರತದಲ್ಲಿ ಏನಾಗಲಿದೆ?

|
Google Oneindia Kannada News

ಮೆಲ್ಬೋರ್ನ್, ಮೇ 20: ಭಾರತದಲ್ಲಿನ ಚುನಾವಣೋತ್ತರ ಸಮೀಕ್ಷೆಯನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ. ಆಸ್ಟ್ರೇಲಿಯಾದಲ್ಲಿ ಒಂದು ವಾರದ ಹಿಂದೆ ಹೇಗೆ 50ಕ್ಕೂ ಅಧಿಕ ಚುನಾವಣೋತ್ತರ ಸಮೀಕ್ಷೆ ಸುಳ್ಳಾಯಿತೋ ಅದೇ ರೀತಿ ಭಾರತದಲ್ಲಿ ಎಕ್ಸಿಟ್ ಪೋಲ್ ಸುಳ್ಳಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಒಂದು ವಾರದ ಹಿಂದಿನ ಆಸ್ಟ್ರೇಲಿಯಾ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಮೈತ್ರಿಕೂಟವು ಪ್ರತಿಪಕ್ಷ ಲೇಬರ್ ಪಕ್ಷದ ವಿರುದ್ಧ ಸೋಲಲಿದೆ. ಶೇ. 51ರಷ್ಟು ಮತಗಳನ್ನು ಪ್ರತಿಪಕ್ಷ ಮೈತ್ರಿಕೂಟವೇ ಪಡೆಯಲಿದೆ ಎಂದು 50ಕ್ಕೂ ಅಧಿಕ ಸಮೀಕ್ಷೆಗಳು ಹೇಳಿದ್ದವು.

2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ

152 ಕ್ಷೇತ್ರಗಳ ಪೈಕಿ ಲೇಬರ್ ಪಕ್ಷಕ್ಕೆ 77 ಕನ್ಸರ್ವೇಟಿವ್‌ಗೆ 68 ಹಾಗೂ ಇತರರು ಆರು ಸೀಟುಗಳನ್ನು ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕನ್ಸರ್ವೇಟಿವ್‌ಗೆ 74 ಹಾಗೂ ಲೇಬರ್‌ 66 ಸೀಟುಗಳನ್ನು ಪಡೆದು ಎಲ್ಲರೂ ಹುಬ್ಬೇರಿಸುವಂತಾಗಿತ್ತು.

Australia exit poll proved wrong

ಕನ್ಸರ್ವೇಟಿವ್ ಮತ್ತೆ ಸರ್ಕಾರ ರಚಿಸಲು ಸಿದ್ಧವಾಗಿತ್ತು. ಪಕ್ಷೇತರರ ಬೆಂಬಲದೊಂದಿಗೆ ಆಸ್ಟ್ರೇಲಿಯಾದಲ್ಲಿ ಮತ್ತೆ ಸರ್ಕಾರ ರಚಿಸಿದೆ. ಕ್ಲೈಮೇಟ್ ಚೇಂಜ್(ಹವಾಮಾನ ಬದಲಾವಣೆ) ವಿಷಯವೇ ಈ ಬಾರಿ ಆಸ್ಟ್ರೇಲಿಯಾ ಚುನಾವಣೆಯ ಕೇಂದ್ರಬಿಂದುವಾಗಿತ್ತು.

ಒಟ್ಟಿನಲ್ಲಿ ಭಾರತ ಚುನಾವಣೋತ್ತರ ಸಮೀಕ್ಷೆಯ ಹಣೆಬರಹ ಏನಾಗಲಿದೆ ಎಂದು ಮೇ 23ಕ್ಕೆ ತಿಳಿದುಬರಲಿದೆ. ಭಾರತದಲ್ಲಿ 2004 ಹಾಗೂ 2009ರಲ್ಲಿ ಚುನಾವಣೋತ್ತರ ಸಮೀಕ್ಷೆ ಸುಳ್ಳಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?

2004ರಲ್ಲಿ ಎನ್‌ಡಿಎ ಸರ್ಕಾರ ಪುನರ್ ಆಯ್ಕೆಯಾಗಲಿದೆ ಹಾಗೂ 2009ರಲ್ಲಿ ಯುಪಿಎಗೆ 30ಕ್ಕೂ ಅಧಿಕ ಸೀಟುಗಳ ಕೊರತೆಯಾಗಲಿವೆ ಎಂದು ಸಮೀಕ್ಷೆಗಳು ಹೇಳಿದ್ದವು.

English summary
One week back more than 50 Australian media gave exit poll result that opposition Labor Party will from the government but they proved wrong ruling Conservative party once again farming the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X