ಕ್ಯಾಲಿಫೋರ್ನಿಯಾ: ಕಾಳ್ಗಿಚ್ಚಿಗೆ 2 ಬಲಿ, 1.4 ಲಕ್ಷ ಎಕರೆ ಜಾಗ ಬೆಂಕಿಗಾಹುತಿ

ಕ್ಯಾಲಿಫೋರ್ನಿಯ, ಡಿಸೆಂಬರ್ 8: ಅಮೆರಿಕದ ಕ್ಯಾಲಿಫೊರ್ನಿಯದಲ್ಲಿ ಸಂಭವಿಸಿದ ಕಾಳ್ಗಿಚ್ಚಿಗೆ ಇಬ್ಬರು ಬಲಿಯಾಗಿದ್ದು, 1,41,000 ಎಕರೆ ಯಷ್ಟು ಜಾಗ ಸುಟ್ಟು ಕರಕಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಎಷ್ಟು ಜನ ಗಾಯಗೊಂಡಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ. 20 ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಹಲವು ಎಕರೆಯಷ್ಟು ಸುಂದರ ಕಾಡು ಸುಟ್ಟು, ಸ್ಮಶಾನದಂತೇ ಕಾಣಿಸುತ್ತಿದೆ!

Atleast 2 people died for the huge wildfire in California

ಸದ್ಯಕ್ಕೆ 1,90,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳದ 5,700 ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಒಣಹವೆ ಮತ್ತು ಅತಿಯಾದ ಗಾಳಿಯೇ ಈ ಕಾಳ್ಗಿಚ್ಚಿಗೆ ಕಾರಣ ಎಂದು ಹೇಳಲಾಗುತ್ತಿದೆ. ಬಿರುಗಾಳಿ ಬೀಸುತ್ತಿದ್ದರಿಂದ ಕಾಳ್ಗಿಚ್ಚು ಹಬ್ಬುವುದನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಕ್ಯಾಲಿಫೋರ್ನಿಯಾದಲ್ಲಿರುವ ಅರ್ಧಕ್ಕಿಂತಲೂ ಹೆಚ್ಚು ಅಗ್ನಿಶಾಮಕದಳದ ಸಿಬ್ಬಂದಿಗಳನ್ನು ಇಲ್ಲಿನ ಬೆಕಿ ಆರಿಸುವುದಕ್ಕೇ ಕಳಿಸಲಾಗಿದೆ! ಅಷ್ಟರ ಮಟ್ಟಿಗೆ ಕಾಳ್ಗಿಚ್ಚು ಎಲ್ಲೆಡೆ ವ್ಯಾಪಿಸಿದೆ.

ಜನರನ್ನು ತಕ್ಷಣವೇ ಸ್ಥಳಾಂತರಿಸಿದ್ದರಿಂದ ಹೆಚ್ಚು ಸಾವು ನೋವು ಸಂಭವಿಸಿಲ್ಲ. ಅ.10 ರಂದಷ್ಟೇ, ಇದೇ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ್ದ ದೈತ್ಯ ಕಾಳ್ಗಿಚ್ಚಿಗೆ 10 ಕ್ಕೂ ಹೆಚ್ಚು ಜನ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+