ರಷ್ಯಾದಲ್ಲಿ ಹಡಗಿಗೆ ಬೆಂಕಿ, 11 ಜನರ ದುರ್ಮರಣ
ಮಾಸ್ಕೋ, ಜನವರಿ 22: ರಷ್ಯಾದಲ್ಲಿ ಹಡಗೊಂದಕ್ಕೆ ಬೆಂಕಿ ತಾಕಿದ ಪರಿಣಾಮ ಹನ್ನೊಂದು ಜನರು ಮೃತರಾದ ದುರ್ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಎರಡು ಹಡಗುಗಳಲ್ಲಿ ಭಾರತ, ಟರ್ಕಿಶ್ ಮತ್ತು ಲಿಬಿಯನ್ ನ ಹಲವು ಪ್ರಯಾಣಿಕರಿದ್ದರು. ಸುಮಾರು 15 ಕ್ಕೂ ಹೆಚ್ಚು ಭಾರತೀಯರಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಎರಡು ಹಡಗಗಳಲ್ಲಿ ಒಂದು ನೈಸರ್ಗಿಕ ಅನಿಲವನ್ನು ಹೊತ್ತಿದ್ದರೆ, ಇನ್ನೊಂದು ಟ್ಯಾಂಕರ್ ಅನ್ನು ಹೊತ್ತಿತ್ತು. ನೈಸರ್ಗಿಕ ಅನಿಲ ಹೊಂದಿದ್ದ ಹಡಗಿನಿಂದ ಬೆಂಕಿ ಹೊತ್ತುಕೊಂಡಿದೆ ಎಂದು ಅಂದಾಜಿಸಲಾಗಿದೆ. ಎರಡೂ ಹಡಗಿನ ಮೇಲೂ ತಾಜಾನಿಯಾದ ಧ್ವಜಗಳಿದ್ದವು.

ಹಡಗಿನಲ್ಲಿ 17 ಸಿಬ್ಬಂದಿಗಳಿದ್ದರು, ಅವರಲ್ಲಿ ಎಂಟು ಸಿಬ್ಬಂದಿ ಭಾರತೀಯರು.
ಪ್ರಯಾಣಿಕರಲ್ಲಿ 15 ಭಾರತೀಯರಿದ್ದರು. ಒಟ್ಟು 11 ಪ್ರಯಾಣಿಕರು ಮೃತರಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications