ಹುಟ್ಟುಹಬ್ಬ ಆಚರಿಸಿದ ದೇಶದ ಅಧ್ಯಕ್ಷನಿಗೆ 16.80 ಲಕ್ಷ ದಂಡ ವಿಧಿಸಿದ ಅರ್ಜೆಂಟೀನಾ!
ಬ್ಯೂನಸ್ ಐರಿಸ್, ಮೇ 24: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಘೋಷಿಸಲಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಅರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಭಾರೀ ದಂಡ ತೆತ್ತಿದ್ದಾರೆ.
ಅರ್ಜೆಂಟೀನಾದ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡೀಸ್ ಮತ್ತು ಪ್ರಥಮ ಮಹಿಳೆ ಸೋಮವಾರ ಮೂರು ಮಿಲಿಯನ್ ಪೆಸೊ ಅಂದರೆ ಸುಮಾರು 24,000 ಡಾಲರ್(16.80 ಲಕ್ಷ ರೂಪಾಯಿ) ದಂಡವನ್ನು ದತ್ತಿ ದೇಣಿಗೆ ರೂಪದಲ್ಲಿ ಪಾವತಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಲಾಕ್‌ಡೌನ್ ಸಮಯದಲ್ಲಿ ಹುಟ್ಟುಹಬ್ಬದ ಭೋಜನವನ್ನು ಆಯೋಜಿಸುವ ಮೂಲಕ ಕಾನೂನು ಉಲ್ಲಂಘಿಸಿದ ಹಿನ್ನೆಲೆ ಅವರಿಗೆ ದಂಡ ವಿಧಿಸಲಾಗಿತ್ತು.
ಫೆಡರಲ್ ನ್ಯಾಯಾಧೀಶರು ಅಧ್ಯಕ್ಷರ "ಆರ್ಥಿಕ ಪರಿಹಾರ" ಪ್ರಸ್ತಾಪವನ್ನು ಅನುಮೋದಿಸಿದ್ದು, ಇದರಲ್ಲಿ 1.6 ಮಿಲಿಯನ್ ಪೆಸೊಗಳನ್ನು ಪ್ರತಿಷ್ಠಿತ ಲಸಿಕೆ ಸಂಶೋಧನಾ ಸಂಸ್ಥೆ ಮಾಲ್ಬ್ರಾನ್ ಸಂಸ್ಥೆಗೆ ಪಾವತಿಸಿದರು. ಅವರ ಪಾಲುದಾರ, ಫ್ಯಾಬಿಯೊಲಾ ಯಾನೆಜ್, 1.4 ಮಿಲಿಯನ್ ದೇಣಿಗೆಯನ್ನು ನೀಡಿದ್ದು, ಅದನ್ನು ಸಹ ಅನುಮೋದಿಸಲಾಯಿತು.

ಕಳೆದ 2020ರ ಜುಲೈನಲ್ಲಿ ಔತಣಕೂಟ: 2020ರ ಜುಲೈನಲ್ಲಿ ಬ್ಯೂನಸ್‌ನಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸ ಕ್ವಿಂಟಾ ಡಿ ಒಲಿವೋಸ್‌ನಲ್ಲಿ ಪ್ರಥಮ ಮಹಿಳೆಗೆ ಹುಟ್ಟುಹಬ್ಬದ ಔತಣಕೂಟ ಆಯೋಜಿಸಲಾಗಿತ್ತು. ಈ ಫೋಟೋಗಳು ಸೋರಿಕೆಯಾದ ನಂತರ, ಮಧ್ಯ-ಎಡ ನಾಯಕರಿಂದ ಆರೋಗ್ಯದ ಶಿಷ್ಟಾಚಾರಗಳನ್ನು ಉಲ್ಲಂಘಿಸಿರುವ ಕುರಿತು ಪ್ರಾಸಿಕ್ಯೂಟರ್‌ಗಳು ಕಳೆದ ವರ್ಷ ತನಿಖೆ ಪ್ರಾರಂಭಿಸಿತ್ತು.
ಕೊರೊನಾ ವೈರಸ್ ಕಾಲದಲ್ಲಿ ಕಟ್ಟುನಿಟ್ಟಿನ ನಿಯಮ: ಕಳೆದ ವರ್ಷ 2020ರ ಜುಲೈ ಅವಧಿಯಲ್ಲಿ ಅರ್ಜೆಂಟೀನಾದ ರಾಜಧಾನಿಯು ಕಟ್ಟುನಿಟ್ಟಾದ ಕೋವಿಡ್ -19 ಲಾಕ್‌ಡೌನ್ ಘೋಷಿಸಿತ್ತು. ಈ ಸಂದರ್ಭದಲ್ಲಿ ಎಲ್ಲಾ ಬಗೆಯ ಕೂಟಗಳಿಗೆ ನಿರ್ಬಂಧ ವಿಧಿಸಲಾಗಿತ್ತು.

ಸ್ವತಃ ಕ್ರಿಮಿನಲ್ ಕಾನೂನಿನ ಪ್ರೊಫೆಸರ್ ಆಗಿರುವ ಫೆರ್ನಾಂಡಿಸ್, ಇದು "ದುರುದ್ದೇಶಪೂರಿತ ಕೃತ್ಯವಲ್ಲ, ಆದರೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯ" ಎಂದು ಪಶ್ಚಾತ್ತಾಪದಿಂದ ಮನವಿ ಮಾಡಿದರು. "ಸಾಂಕ್ರಾಮಿಕ ನಿರ್ವಹಣೆಯ ಸುಳಿಯಲ್ಲಿ" ಈ ಕ್ರಮವನ್ನು "ದೋಷಪೂರಿತ ಮತ್ತು ಜಾರುವಿಕೆ ಉತ್ತರ ಎಂದು ಕರೆಯಲಾಗಿತ್ತು.












Click it and Unblock the Notifications