ಶ್ರೀಲಂಕಾ ಅಧ್ಯಕ್ಷರಾಗಿ ಅನುರ ಕುಮಾರ ದಿಸ್ಸನಾಯಕೆ ಆಯ್ಕೆ
ಅನುರ ಕುಮಾರ ದಿಸ್ಸನಾಯಕೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ದಿಸ್ಸನಾಯಕೆಯವರು 43.31 ಪ್ರತಿಶತ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಅನುರ ಕುಮಾರ ದಿಸ್ಸನಾಯಕೆ ನ್ಯಾಷನಲ್ ಪೀಪಲ್ಸ್ ಪವರ್ (ಎನ್ ಪಿಪಿ) ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರುಮೆನಾ (ಜೆವಿಪಿ) ಪಕ್ಷದಿಂದ ಸ್ಪರ್ಧೆ ಮಾಡಿದ್ದರು.
ಪ್ರತಿಪಕ್ಷದ ನಾಯಕ ಸಜಿತ ಪ್ರೇಮದಾಸ ಅಚ್ಚರಿ ಎನ್ನುವಂತೆ 22 ಪ್ರತಿಶತ ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಶನಿವಾರ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆದಿತ್ತು, 1.70 ಕೋಟಿ ಅರ್ಹ ಮತದಾರರ ಪೈಕಿ 75% ಜನ ಮತ ಚಲಾಯಿಸಿದ್ದರು.ಶನಿವಾರ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆದಿತ್ತು, 1.70 ಕೋಟಿ ಅರ್ಹ ಮತದಾರರ ಪೈಕಿ 75% ಜನ ಮತ ಚಲಾಯಿಸಿದ್ದರು. ಶ್ರೀಲಂಕಾದ ಅಧ್ಯಕ್ಷೀಯ ಚುನಾವಣಾ ಕಾಯ್ದೆ ಪ್ರಕಾರ, ಅಭ್ಯರ್ಥಿಯು ಅಧ್ಯಕ್ಷರಾಗಿ ಆಯ್ಕೆಯಾಗಲು ಮೊದಲ ಸುತ್ತಿನಲ್ಲಿ 50% ಕ್ಕಿಂತ ಹೆಚ್ಚು ಮತ ಪಡೆಯಬೇಕು ಒಂದು ವೇಳೆ ಅದು ಆಗದೇ ಇದ್ದಲ್ಲಿ, ಮೊದಲ ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳನ್ನು ತೆಗೆದುಹಾಕಲಾಗುತ್ತದೆ. ನಂತರ ಉಳಿದ ಅಭ್ಯರ್ಥಿಯ ಪರವಾಗಿ ಮತದಾರರಿಂದ ಮತ ಪತ್ರದಲ್ಲಿ ಗುರುತಿಸಿದ ಎರಡು ಅಥವಾ ಮೂರನೇ ಪ್ರಾಶಸ್ತ್ಯದ ಮತಗಳ ಎಣಿಸಿ ಫಲಿತಾಂಶಗಳನ್ನು ನಿರ್ಧರಿಸಲಾಗುತ್ತದೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಮತ ಎಣಿಕೆ ಬಳಿಕ ದಿಸ್ಸನಾಯಕೆ 42.31% ಮತಗಳನ್ನು ಗಳಿಸಿದರೆ, ಸಜಿತ್ ಪ್ರೇಮದಾಸ 32.76% ಮತಗಳನ್ನು ಪಡೆದರು. ಇಬ್ಬರೂ 50% ಗಳಿಸಲು ವಿಫಲವಾದ ಕಾರಣ, ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಗಿದೆ. ವ್ಯತ್ಯಾಸದ ಅಂತರವು ಸುಮಾರು 10 ಲಕ್ಷ ಮತಗಳಾಗಿರುವುದರಿಂದ, ಜೆವಿಪಿ ಗೆಲುವು ಸಾಧಿಸಿತು, ವಿರೋಧ ಪಕ್ಷದವರು ಕೂಡ ಸೋಲೊಪ್ಪಿಕೊಂಡರು.
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 39 ಅಭ್ಯರ್ಥಿಗಳು ಕಣದಲ್ಲಿದ್ದರು. ನಿರ್ಗಮಿತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಸಮಗಿ ಜನ ಬಲವೇಗಯ (ಎಸ್‌ಜೆಬಿ) ಪಕ್ಷದ ಮುಖ್ಯಸ್ಥರಾಗಿದ್ದ ಸಜಿತ್ ನಡುವೆ ನಿಕಟ ಪೈಪೋಟಿ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ರನಿಲ್ 17.27% ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ತಮಿಳು ಜನಸಂಖ್ಯೆಯನ್ನು ಪ್ರತಿನಿಧಿಸುವ ಅರಿಯನೇತಿರನ್ ಪಕ್ಕಿಯಾಸೆಲ್ವಂ 1.7% ಮತಗಳನ್ನು ಪಡೆದರು.
ರಾಜಪಕ್ಸೆ ವಿರುದ್ಧ 2022 ರ ಜನತಾ ಅರಗಲಯ (ಜನರ ಹೋರಾಟ) ಪ್ರತಿಭಟನೆ ರೂಪಿಸುವಲ್ಲಿ ದಿಸ್ಸನಾಯಕೆ ಕೂಡ ಒಬ್ಬರಾಗಿದ್ದರು. ದಿಸ್ಸನಾಯಕೆ ಅವರ ಸ್ವಚ್ಛ ಆಡಳಿತ ಅಭಿಯಾನ, ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ ಕ್ಷೇತ್ರಗಳ ಸ್ಥಿತಿಯ ಟೀಕೆಗಳು ಜನರಿಗೆ ಅವರನ್ನು ಹತ್ತಿರಮಾಡಿವೆ ಎಂದು ನಂಬಲಾಗಿದೆ.












Click it and Unblock the Notifications