ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಮತ್ತೊಂದು ಪ್ರಪಂಚ: ಸೂರ್ಯನ ಬೆಳಕಿಲ್ಲದ ಸ್ಥಳಕ್ಕೆ ಮಾನವ ಮೊದಲ ಭೇಟಿ

|
Google Oneindia Kannada News

ಬೀಜಿಂಗ್ ಜುಲೈ 9: ಭೂಮಿಯ ಮೇಲೆ ಶೇ.71ರಷ್ಟು ಭಾಗ ನೀರು, ಉಳಿದ ಭಾಗ ಭೂಮಿ ಇದೆ. ಆದರೆ ಅದೆಷ್ಟೇ ಮುಂದುವರೆದರೂ ಇದುವರೆಗೆ ಮಾನವರು ಭೂಮಿಯ ಹಲವು ಭಾಗಗಳನ್ನು ತಲುಪಲು ಸಾಧ್ಯವಾಗಿಲ್ಲ. ಈಗ ಮಾನವರು ತುಂಬಾ ಹೈಟೆಕ್ ಆಗಿದ್ದಾರೆ. ಹೀಗಾಗಿ ಇಲ್ಲಿಯವರೆಗೆ ಯಾರೂ ತಲುಪಲು ಸಾಧ್ಯವಾಗದ ಅನೇಕ ಸ್ಥಳಗಳನ್ನು ಕಂಡುಹಿಡಿಯುತ್ತಿದ್ದಾರೆ. ಇದರಿಂದಾಗಿ ಆ ಸ್ಥಳಗಳಲ್ಲಿ ಅಡಗಿರುವ ಅನೇಕ ರಹಸ್ಯಗಳೂ ಹೊರಬರುತ್ತಿವೆ. ಹೌದು ಭಾರತದ ನೆರೆಯ ದೇಶವಾದ ಚೀನಾದಲ್ಲಿ ಮತ್ತೊಂದು ಜಗತ್ತು ಪತ್ತೆಯಾಗಿದ್ದು ಮೊದಲ ಬಾರಿಗೆ ಮಾನವ ಇಲ್ಲಿಗೆ ಭೇಟಿ ನೀಡಿದ್ದಾನೆ.

ಇದೀಗ ಸಂಪೂರ್ಣ ಮರಗಳಿಂದ ಆವೃತವಾಗಿದ್ದ ಭಾರತದ ನೆರೆಯ ಚೀನಾದ ಅರಣ್ಯದಲ್ಲಿ ಬೃಹತ್ ಹೊಂಡ ಪತ್ತೆಯಾಗಿದೆ. ಅನೇಕ ಜನರು ಇದನ್ನು ಮತ್ತೊಂದು ಜಗತ್ತು ಎಂದು ಪರಿಗಣಿಸಿದ್ದಾರೆ. ವಿಶೇಷವೆಂದರೆ ಸೂರ್ಯನ ಬೆಳಕು ಕೂಡ ಇಲ್ಲಿಗೆ ಬೀಳುವುದಿಲ್ಲ. ಇತ್ತೀಚೆಗೆ ಒಂದು ತಂಡ ಇಲ್ಲಿಗೆ ಭೇಟಿ ನೀಡಿದೆ. ಇದರಿಂದಾಗಿ ಈ ಸ್ಥಳ ತನ್ನೊಳಗೆ ಹುದುಗಿರುವ ರಹಸ್ಯಗಳು ಬಹಿರಂಗಗೊಂಡಿವೆ.

ಅಂತ್ಯವಿಲ್ಲದ ಆಳ

ಅಂತ್ಯವಿಲ್ಲದ ಆಳ

ಚೀನಾದ ಮಾಧ್ಯಮಗಳ ಪ್ರಕಾರ, ಈ ದೈತ್ಯ ಕುಳಿಯು 630 ಅಡಿಗಳಷ್ಟಿದೆ. ಇದು ಲೇ ಕೌಂಟಿಯ ಕಾಡುಗಳಲ್ಲಿ ಅಡಗಿದೆ. ಸ್ಥಳೀಯರು ಇದನ್ನು 'ಶೆನ್ಯಿಂಗ್ ಟಿಯಾನ್ಚೆಂಗ್' ಎಂದು ಕರೆಯುತ್ತಾರೆ. ಇದು ಇತರ ಪ್ರಪಂಚದೊಂದಿಗೆ ಸಂಪರ್ಕಿಸುತ್ತದೆ. ಜೊತೆಗೆ ಇದು ಅಂತ್ಯವಿಲ್ಲದಷ್ಟು ಆಳವಾಗಿದೆ ಎಂದು ನಂಬಲಾಗಿದೆ. ಆದರೆ, ಈಗ ಒಬ್ಬ ವ್ಯಕ್ತಿ ಒಳಗೆ ಪ್ರವೇಶಿಸಿ ಹೊರಬಂದಾಗ, ಇದರಲ್ಲಿ ಅಡಗಿದ್ದ ರಹಸ್ಯಗಳು ಹೊರಬಂದಿವೆ.

ಮೇ 6ರಂದು ಹೊಂಡದ ಸಂಶೋಧನೆ

ಮೇ 6ರಂದು ಹೊಂಡದ ಸಂಶೋಧನೆ

ಮೇ 6 ರಂದು ಚೆನ್ ಲಿಕ್ಸಿನ್ ಈ ಹೊಂಡದೊಳಗೆ ಹೋಗಿದ್ದರು ಎಂದು ವರದಿ ತಿಳಿಸಿದೆ. ಅವರೊಂದಿಗೆ ಅವರ ತಂಡವೂ ಇತ್ತು. ಇದರ ಅಗಲವು 490 ಅಡಿಗಳು, ಆದರೆ ತಂಡವು ಅದರೊಳಗೆ ಹೋಗಲು ಮೂರು ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದೆ. ಸಂಶೋಧನೆಗಾಗಿ ಅವರು ಅದರೊಳಗೆ ಸಾಕಷ್ಟು ಫೋಟೋಗಳನ್ನು ತೆಗೆದಿದ್ದಾರೆ. ಆದರೆ, ಅದರಲ್ಲಿ ಯಾವುದೇ ಅನುಮಾನಾಸ್ಪದ ಅಂಶ ಪತ್ತೆಯಾಗಿಲ್ಲ.

ಸೂರ್ಯನ ಬೆಳಕು ಇಲ್ಲದ ಹೊಂಡ

ಸೂರ್ಯನ ಬೆಳಕು ಇಲ್ಲದ ಹೊಂಡ

ಹೊಂಡದೊಳಗೆ 130 ಅಡಿ ಎತ್ತರದ ಮರಗಳಿದ್ದು, ಅದರೊಳಗೆ ಹೋಗುವ ಮಾರ್ಗದ ಕಡೆಗೆ ವಾಲಿದ್ದು, ಇದರಿಂದ ಸೂರ್ಯನ ಬೆಳಕು ಒಳಗೆ ತಲುಪುವುದಿಲ್ಲ ಎಂದು ಈ ಹೊಂಡ ಪತ್ತೆ ಮಾಡಿದ ತಂಡ ತಿಳಿಸಿದೆ. ಈ ಪ್ರದೇಶವು ಅಂತಹ ಹೊಂಡಗಳಿಂದ ತುಂಬಿದೆ. ಇಲ್ಲಿಯವರೆಗೆ ಒಟ್ಟು 30 ಸಿಂಕ್‌ಹೋಲ್‌ಗಳು ಅಂದರೆ ದೈತ್ಯ ಹೊಂಡಗಳನ್ನು ಕಂಡುಹಿಡಿಯಲಾಗಿದೆ. ಮಾನವರಿಗೆ ತಿಳಿದಿಲ್ಲದ ಕೆಲವು ಹೊಸ ಜಾತಿಯ ಮರಗಳು ಅಲ್ಲಿವೆ ಎಂದು ತಂಡವು ಭಾವಿಸುತ್ತದೆ.

ತಜ್ಞರು ಹೇಳುವುದೇನು?

ತಜ್ಞರು ಹೇಳುವುದೇನು?

ಈ ದೈತ್ಯ ಹೊಂಡಗಳು ಹೇಗೆ ರೂಪುಗೊಂಡವು ಎಂಬುದು ಇನ್ನೂ ತಿಳಿದಿಲ್ಲವಾದರೂ, ತಜ್ಞರು ಒಂದು ಆಳವಾದ ಸಂಶೋದನೆ ಇಲ್ಲಿ ಮುಖ್ಯವಾಗಿದೆ ಎಂದು ಪರಿಗಣಿಸುತ್ತಿದ್ದಾರೆ. ಅವರ ಪ್ರಕಾರ, ನೀರಿನ ಹರಿವಿನಿಂದಾಗಿ, ಪರ್ವತಗಳು ಒಳಗೆ ಮುಳುಗಿರಬೇಕು, ನಂತರ ಈ ಸ್ಥಳವು ಹಳ್ಳವಾಗಿ ಮಾರ್ಪಟ್ಟಿದೆ. ಆದಾಗ್ಯೂ, ಈ ಬಗ್ಗೆ ಇನ್ನೂ ಸಂಶೋಧನೆ ಅಗತ್ಯವಿದೆ.

English summary
'Another world' has been discovered in India's neighboring country China and it has been visited by man for the first time. Learn about the secrets here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X