ಇಸ್ರೇಲ್‌ಗೆ ಎದುರಾಯ್ತು ಆಘಾತ, ಪ್ಯಾಲೆಸ್ತೀನ್ ಜನರಿಗೆ ಖುಷಿಯ ಸುದ್ದಿ!

ಇಸ್ರೇಲ್ & ಪ್ಯಾಲೆಸ್ತೀನ್ ನಡುವೆ ಕಾಳಗ ನಡೆಯುತ್ತಿರುವ ಸಮಯದಲ್ಲಿ, ಇಸ್ರೇಲ್‌ಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ವಿರುದ್ಧ ಒತ್ತಡ ಹೆಚ್ಚಾದ ಸಮಯದಲ್ಲೇ, ಮತ್ತೊಂದು ಆಘಾತ ಕೂಡ ಎದುರಾಗಿದೆ. ಅರೆ ಇಸ್ರೇಲ್‌ಗೆ ಎದುರಾದ ಆ ಆಘಾತ ಏನು? ಹಾಗಾದ್ರೆ ಯುದ್ಧ ನಿಲ್ಲುತ್ತಾ? ಮುಂದೆ ಓದಿ.

ಅಂದಹಾಗೆ ಪ್ಯಾಲೆಸ್ತೀನ್ ದೇಶಕ್ಕೆ ಮಾನ್ಯತೆ ನೀಡುವುದಾಗಿ ನಾರ್ವೆ, ಸ್ಪೇನ್ ಮತ್ತು ಐರ್ಲೆಂಡ್‌ ಹೇಳಿವೆ. ಈ ಐತಿಹಾಸಿಕ ಘೋಷಣೆ ಒಂದು ಕಡೆ ಪ್ಯಾಲೆಸ್ತೀನ್ ಜನರಿಗೆ ಖುಷಿ ಕೊಟ್ಟಿದ್ದರೆ, ಮತ್ತೊಂದು ಕಡೆ ಇಸ್ರೇಲ್‌ಗೆ ಭಾರಿ ದೊಡ್ಡ ಆಘಾತ ನೀಡಿದೆ. ಯಾಕಂದ್ರೆ ಹಮಾಸ್ ವಿರುದ್ಧ ಯುದ್ಧ ಮಾಡುವ ನೆಪದಲ್ಲಿ ಇಸ್ರೇಲ್ ಸೇನೆ ಪ್ಯಾಲೆಸ್ತೀನ್‌ನ ಅಮಾಯಕರ ವಿರುದ್ಧ ಕೂಡ ಹಿಂಸೆಗೆ ಇಳಿದಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯವಾಗಿ ಕೂಡ ಪ್ಯಾಲೆಸ್ತೀನ್‌ಗೆ ಈಗ ಮತ್ತಷ್ಟು ಬಲ ಸಿಕ್ಕಿದೆ. ಹಾಗಾದರೆ ಈ ನಿರ್ಣಯದ ಬಗ್ಗೆ ಇಸ್ರೇಲ್ ಕೋಪದಲ್ಲಿ ಕೈಗೊಂಡ ನಿರ್ಧಾರ ಎಂತಹದ್ದು? ಬನ್ನಿ ತಿಳಿಯೋಣ.

Another Shock To Israel After Norway Moves To Recognize Palestinian State With Spain And Ireland

ರೊಚ್ಚಿಗೆದ್ದ ಇಸ್ರೇಲ್ ಸರ್ಕಾರ?

ನಾರ್ವೆ, ಸ್ಪೇನ್ ಮತ್ತು ಐರ್ಲೆಂಡ್‌ ಇದೀಗ ಪ್ಯಾಲೆಸ್ತೀನ್ ದೇಶಕ್ಕೆ ಮಾನ್ಯತೆ ನೀಡುವ ಕುರಿತು ಕೈಗೊಂಡಿರುವ ನಿರ್ಣಯಕ್ಕೆ ಇಸ್ರೇಲ್ ಕೆಂಡ ಕಾರಿದೆ. ಈ ಘೋಷಣೆಯನ್ನು ಇದೀಗ ಇಸ್ರೇಲ್ ಖಂಡಿಸಿದೆ. ನಾರ್ವೆ ಮತ್ತು ಐರ್ಲೆಂಡ್‌ನಲ್ಲಿ ಇರುವ ತನ್ನ ರಾಯಭಾರಿಗಳು ವಾಪಸ್ ಬರಬೇಕು ಎಂದು ಕೂಡ ಇಸ್ರೇಲ್ ಸೂಚಿಸಿದೆ. ಇದು ಸಂಚಲನ ಕೂಡ ಸೃಷ್ಟಿ ಮಾಡಿದೆ. ಮೇ 28 ರಂದು ಪ್ಯಾಲೆಸ್ತೀನ್‌ಗೆ ಅಧಿಕೃತ ಮಾನ್ಯತೆ ಸಿಗಲಿದೆ. ಈ ನಡುವೆ ನಾರ್ವೆ, ಸ್ಪೇನ್ & ಐರ್ಲೆಂಡ್‌ ಇದೀಗ ಕೈಗೊಂಡಿರುವ ನಿರ್ಣಯ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಇಸ್ರೇಲ್ ಕೂಡ ಈ ಕುರಿತು ರೊಚ್ಚಿಗೆದ್ದಿದೆ.

ಪ್ಯಾಲೆಸ್ತೀನ್ ಪರ ಇರುವ ದೇಶಗಳು ಎಷ್ಟು?

ಅಷ್ಟಕ್ಕೂ ಈವರೆಗೂ ಸುಮಾರು 140 ದೇಶಗಳು ಈಗಾಗಲೇ ಪ್ಯಾಲೆಸ್ತೀನ್ ದೇಶಕ್ಕೆ ಮಾನ್ಯತೆ ನೀಡಿವೆ. ಇದರ ಜೊತೆಗೆ ನಾರ್ವೆ, ಸ್ಪೇನ್ ಮತ್ತು ಐರ್ಲೆಂಡ್ ಕೂಡ ಇದೇ ಹಾದಿಯಲ್ಲಿ ಹೆಜ್ಜೆ ಹಾಕಿವೆ. ಈ ನಿರ್ಧಾರದ ನಂತರ ಫ್ರಾನ್ಸ್ ಮತ್ತು ಜರ್ಮನಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ಪ್ಯಾಲೆಸ್ತೀನ್ ದೇಶಕ್ಕೆ ಅಧಿಕೃತವಾಗಿ ಮಾನ್ಯತೆ ಸಿಗಲಿದ್ದು, ಏನೆಲ್ಲಾ ಬದಲಾವಣೆ ಆಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+