ಮತ್ತೊಂದು ವಾಸಯೋಗ್ಯ ಭೂಮಿ ಪತ್ತೆ ಹಚ್ಚಿದ NASA!

ವಾಷಿಂಗ್ಟನ್, ಏ.18: ನಾಸಾದ ಖಗೋಳ ಶಾಸ್ತ್ರಜ್ಞರು ಈ ಶತಮಾನದ ಬಹುದೊಡ್ಡ ಸಂಶೋಧನೆಯೊಂದನ್ನು ಸಾಧಿಸಿದ್ದು ಕೊನೆಗೂ ಮತ್ತೊಂದು ಭೂಮಿ ಅಸ್ತಿತ್ವದಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ.

Kepler-186f ಗ್ರಹವು ನಮ್ಮ ಭೂಮಿಯಿಂದ ಕೇವಲ 500 light year ದೂರದಲ್ಲಿದ್ದು, ಭೂಮಿಯ ಗಾತ್ರಕ್ಕಿಂತ 1.1 ಪಟ್ಟು ಹೆಚ್ಚಿದೆ! ನಾಸಾದ ಕೆಪ್ಲರ್ ಯೋಜನಾ ತಂಡವು ಈ ಹೊಸ ಭೂಮಿಯ ಅಸ್ತಿತ್ವವನ್ನು ಪತ್ತೆಹಚ್ಚಿದೆ. ಅಲ್ಲಿ ನೀರಿನ ರಾಶಿಯೂ ಇರಬಹುದೆಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದು, ಅನ್ಯಲೋಕ ಜೀವಿಗಳು ಅಲ್ಲಿ ಅಸ್ತಿತ್ವದಲ್ಲಿರುವುದಕ್ಕೆ ಪೂರಕ ವಾತಾವರಣ ಅಲ್ಲಿರಬಹುದು ಎಂದು ವಿಶ್ಲೇಷಿಸಿದ್ದಾರೆ.

another-earth-kepler-186f-planet-discovered-by-nasa
ಈ ಬಗ್ಗೆ NASA tweet ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯಂತೆ ಸುದ್ದಿಯಾಗಿದೆ. ಈ ಹಿಂದೆಯೂ Kepler telescope ಇನ್ನೂ ಅನೇಕ ಗ್ರಹಗಳನ್ನು ಪತ್ತೆ ಹಚ್ಚಿದ್ದವಾದರೂ ಅವು ವಾಸಯೋಗ್ಯವಾಗಿಲ್ಲ ಎಂಬುದೂ ಸಹ ಅರಿವಿಗೆ ಬಂದಿತ್ತು. ಆದರೆ Kepler-186f ಗ್ರಹವು ವಾಸಯೋಗ್ಯ Goldilocks zone ವಲಯದಲ್ಲಿದೆ ಎಂಬುದು ಗಮನಾರ್ಹ ಎಂದು ನಾಸಾ ತಿಳಿಸಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+