Get Updates
Get notified of breaking news, exclusive insights, and must-see stories!

‘ಭಾರತದ ನೆಲವನ್ನು ಯಾರೂ ಮುಟ್ಟಲು ಆಗಲ್ಲ’: ಅಮಿತ್ ಶಾ!

ಇಟಾನಗರ: ಭಾರತದ ಗಡಿ ವಿಚಾರದಲ್ಲಿ ಪದೇಪದೆ ಕಿರಿಕ್ ಮಾಡುವ ಚೀನಾಗೆ (China) ಈಗ ಅಮಿತ್ ಶಾ ಅರುಣಾಚಲ ಭೇಟಿ ವಿಚಾರವೂ ಕ್ಯಾತೆ ತೆಗೆಯುವ ವಿಷಯವಾಗಿತ್ತು. ಅರುಣಾಚಲ ಪ್ರದೇಶಕ್ಕೆ (Arunachal Pradesh) ಅಮಿತ್ ಶಾ (Amit Shah) ಬರುವಂತಿಲ್ಲ ಎಂದು ಮಾತನಾಡಿದ್ದ ಡ್ರ್ಯಾಗನ್ ರಾಷ್ಟ್ರಕ್ಕೆ ಗೃಹ ಸಚಿವರು ಅರುಣಾಚಲದಲ್ಲೇ ನಿಂತು ಖಡಕ್ ತಿರುಗೇಟು ನೀಡಿದ್ದಾರೆ.

ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, 'ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚೀನಾಗೆ ತಿರುಗೇಟು ನೀಡಿದ್ದಾರೆ. ಅರುಣಾಚಲ ಪ್ರದೇಶದ ಗಡಿ ಗ್ರಾಮ ಕಿಬಿತೂದಿಂದ ವೈಬ್ರಂಟ್ ವಿಲೇಜಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಮಿತ್ ಶಾ, ಚೀನಾ ತಮ್ಮ ಭೇಟಿಗೆ ಮುನ್ನ ನೀಡಿದ್ದ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ್ದಾರೆ. ಈ ಮೂಲಕ ಪದೇಪದೆ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದ ನೆರೆ ರಾಷ್ಟ್ರಕ್ಕೆ ತಕ್ಕ ಉತ್ತರ ನೀಡಿದಂತಾಗಿದೆ.

Amit Shah reacts strongly over Chinas objection for his visit to Arunachal Pradesh

ಸೈನಿಕರು, ಪೊಲೀಸರ ಸೇವೆಗೆ ಶ್ಲಾಘನೆ

'ನಮ್ಮ ದೇಶದ ಒಂದು ಇಂಚು ಭೂಮಿಯನ್ನು ಯಾರೂ ಕಬಳಿಸಲು ಆಗಲ್ಲ. 2014ಕ್ಕೂ ಮೊದಲು ಈಶಾನ್ಯ ಪ್ರದೇಶ ಪ್ರಕ್ಷುಬ್ಧ ಪ್ರದೇಶವೆಂದು ಕರೆಯಲ್ಪಡುತ್ತಿತ್ತು. ಆದರೆ ಕಳೆದ 9 ವರ್ಷದಲ್ಲಿ ಪ್ರಧಾನಿ ಮೋದಿಯವರ ಯೋಜನೆಯಿಂದಾಗಿ, ಈಶಾನ್ಯ ಭಾಗ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರದೇಶವಾಗಿ ಪರಿಗಣಿಸಲಾಗುತ್ತಿದೆ ಎಂದರು.' ಅಲ್ಲದೆ 'ಐಟಿಬಿಪಿ ಯೋಧರು ಹಾಗೂ ಸೇನೆ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾರಣ ಪ್ರಜೆಗಳು ಅವರ ಮನೆಗಳಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗಿದೆ' ಎಂದು ಸೇನೆ ಮತ್ತು ಗಡಿ ಪೊಲೀಸರ ಕಾರ್ಯ ಶ್ಲಾಘಿಸಿದರು.

ಗಡಿ ವಿಚಾರದಲ್ಲಿ ಚೀನಾ ಕಿರಿಕ್!

ಈಗಾಗಲೇ ಚೀನಾ ಗೃಹ ಸಚಿವ ಅಮಿತ್ ಶಾ ಭೇಟಿ ಬಗ್ಗೆ ಆಕ್ಷೇಪ ತೆಗೆದಿತ್ತು. ಇದರ ನಡುವೆ ಚೀನಾಗೆ ತಿರುಗೇಟು ನೀಡಿರುವ ಗೃಹ ಸಚಿವರು, ಅರುಣಾಚಲದಲ್ಲಿ 2 ದಿನಗಳ ಕಾಲ ಉಳಿಯಲಿದ್ದಾರೆ. ಇದಕ್ಕೂ ಮೊದಲು ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿರುವ ವಿಚಾರ ತಿಳಿಯುತ್ತಿದ್ದಂತೆ ಚೀನಾ ಕಿರಿಕ್ ಮಾಡಿತ್ತು. ಅರುಣಾಚಲ ಪ್ರದೇಶಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿಯನ್ನು ಚೀನಾ ವಿರೋಧಿಸುತ್ತದೆ. ಈ ಪ್ರದೇಶದಲ್ಲಿ ಅವರ ಭೇಟಿ ಚೀನಾದ ಪ್ರಾದೇಶಿಕ ಸಾರ್ವಭೌಮತ್ವ ಉಲ್ಲಂಘಿಸುತ್ತಿದೆ ಎಂದಿತ್ತು ಚೀನಾ ವಿದೇಶಾಂಗ ಸಚಿವಾಲಯ.

ಹೆಸರು ಬದಲಿಸಿದ್ದ ಡ್ರ್ಯಾಗನ್ ಚೀನಾ

ಇಷ್ಟೆಲ್ಲದರ ನಡುವೆ ಕಳೆದ ವಾರವಷ್ಟೇ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಹೆಸರು ಬದಲಾಯಿಸುವ ಜೊತೆಗೆ, ಅವು ತನ್ನ ಭೂಭಾಗ ಎಂದು ಹೇಳಿಕೊಂಡಿತ್ತು ಚೀನಾ. ಇದಾದ ನಂತರ ಗೃಹ ಸಚಿವ ಅಮಿತ್ ಶಾ ಅವರ 2 ದಿನಗಳ ಅರುಣಾಚಲ ಪ್ರದೇಶ ಭೇಟಿ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಚೀನಾ ವಕ್ತಾರ ವಾಂಗ್ ವೆನ್‌ಬಿನ್ 'ಝಂಗ್ನಾನ್ ಚೀನಾದ ಪ್ರದೇಶವಾಗಿದೆ' ಎಂದು ಹೇಳಿದ್ದರು. ಅಲ್ಲದೆ ಗಡಿಯಲ್ಲಿ ಈ ಬೆಳವಣಿಗೆ ಶಾಂತಿ, ನೆಮ್ಮದಿಗೆ ಪೂರಕವಾಗಿ ಇರುವುದಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಕೆ ಕೂಡ ನೀಡಲಾಗಿತ್ತು. ಇದೀಗ ಚೀನಾದ ಹೇಳಿಕೆ ಮಾತಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ.

Amit Shah reacts strongly over Chinas objection for his visit to Arunachal Pradesh

ಭಾರತಕ್ಕೆ ಜಾಗತಿಕ ರಾಷ್ಟ್ರಗಳ ಬೆಂಬಲ

ಚೀನಾದ ಇಂತಹ ನಡೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಾಗಲೇ ತೈವಾನ್ ವಿಚಾರದಲ್ಲಿ ಚೀನಾ ನಡೆದುಕೊಳ್ಳುತ್ತಿರುವ ರೀತಿಗೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಬೇಸರ ಹೊರಹಾಕುತ್ತಿವೆ.. ಇದರ ಜೊತೆಗೆ ಅರುಣಾಚಲ ಪ್ರದೇಶ ಭಾರತದ ಭಾಗ ಎಂಬುದನ್ನ ಇಡೀ ಜಗತ್ತೇ ಒಪ್ಪಿಕೊಳ್ಳುತ್ತಿದೆ. ಆದರೆ ಚೀನಾ ಮಾತ್ರ ಪದೇಪದೆ ಕಿರಿಕ್ ಮಾಡುತ್ತಾ, ಶಾಂತಿ ಕದಡುವ ಪ್ರಯತ್ನ ಮಾಡುತ್ತಿರುವುದು ಗಡಿಯಲ್ಲಿ ಶಾಂತಿ ಕದಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+