ಢಂ.. ಢಮಾರ್.. ಢಮಾರ್.. ರಷ್ಯಾಗೆ ಶಾಕ್ ನೀಡಿದ ಉಕ್ರೇನ್?
ರಷ್ಯಾ VS ಉಕ್ರೇನ್ ವಾರ್ ಬಲು ಜೋರಾಗುತ್ತಿರುವ ಸಮಯದಲ್ಲೇ, ಕ್ರಿಸ್‌ಮಸ್ ಬಂದಿದೆ. ಹೀಗಾಗಿ ಯುದ್ಧ ಸ್ವಲ್ಪ ತಣ್ಣಗಾಗಬಹುದು ಎನ್ನುವ ನಿರೀಕ್ಷೆಗಳೂ ಹುಸಿಯಾಗಿವೆ. ರಷ್ಯಾಗೆ ತನ್ನ ಶತ್ರು ಉಕ್ರೇನ್‌ನ ನಾಶ ಮಾಡುವ ಏಕೈಕ ಗುರಿ ಇದ್ದರೆ, ಉಕ್ರೇನ್‌ಗೆ ರಷ್ಯಾ ವಿರುದ್ಧ ಗೆದ್ದು ಬೀಗವ ಆಸೆ ಡಬಲ್ ಆಗಿದೆ. ಇವರಿಬ್ಬರ ಈ ಜಂಗಿ ಕುಸ್ತಿಯಲ್ಲಿ ಸಾಮಾನ್ಯರ ಜೀವನ ಮೂರಾಬಟ್ಟೆಯಾಗಿ ಬೀದಿಗೆ ಬಿದ್ದಂತಾಗಿದೆ.
ಉಕ್ರೇನ್ ಮತ್ತು ರಷ್ಯಾ ಎರಡು ದೇಶಗಳು ಕ್ರಿಶ್ಚಿಯನ್ ಧರ್ಮವನ್ನು ಹೆಚ್ಚಾಗಿ ಅನುಸರಿಸುವ ರಾಷ್ಟ್ರಗಳು. ಹೀಗಾಗಿಯೇ ಕ್ರಿಸ್‌ಮಸ್ ಹಬ್ಬಕ್ಕೆ ಇಬ್ಬರ ನಡುವೆ ಕದನ ವಿರಾಮ ಘೋಷಣೆ ಆಗಿ, ಯುದ್ಧ ಸ್ವಲ್ಪ ತಣ್ಣಗಾಗುತ್ತೆ ಎನ್ನಲಾಗಿತ್ತು. ಆದರೆ ಆಗಿದ್ದೇ ಬೇರೆ, ಒಂದೆಡೆ ರಷ್ಯಾ ತನ್ನ ಡ್ರೋನ್ & ಯುದ್ಧ ವಿಮಾನಗಳನ್ನ ಬಳಸಿ ವಿಪರೀತವಾಗಿ ದಾಳಿ ಮಾಡುತ್ತಿದೆ. ಹೀಗೆ ತನ್ನ ಶತ್ರು ಮಾಡುತ್ತಿರುವ ದಾಳಿಗೆ ಉಕ್ರೇನ್ ಕೂಡ ಉತ್ತರ ಕೊಡುತ್ತಿದೆ. ಕ್ರಿಸ್‌ಮಸ್ ಸ್ಪೆಷಲ್ ಅಂತಾ ರಷ್ಯಾ ಹಾರಿಸಿರುವ 31 ಡ್ರೋನ್‌ಗಳ ಪೈಕಿ 28 ಡ್ರೋನ್‌ಗಳ ಉಡಾಯಿಸಿದೆ ಅಂತೆ ಉಕ್ರೇನ್. ಹಾಗಾದರೆ ಕ್ರಿಸ್‌ಮಸ್ ಹಬ್ಬದ ದಿನ ನಿಜಕ್ಕೂ ಆಗಿದ್ದೇನು?

ಶತ್ರು ನೆಲದ ಮೇಲೆ ರಷ್ಯಾ ಮಿಂಚಿನ ದಾಳಿ!
ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಣೆ ಮಾಡಿರುವಂತೆ, ಉಕ್ರೇನ್ ವಿರುದ್ಧ ಈಗ ನಡೆಯುತ್ತಿರುವ ಘೋರ ಯುದ್ಧ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅದರಲ್ಲೂ ಅಮೆರಿಕ & ನ್ಯಾಟೋ ಜೊತೆ ಸೇರಲು ಹೊರಟಿದ್ದ ಉಕ್ರೇನ್‌ಗೆ ಯಾವುದೇ ರೀತಿ ವಿನಾಯಿತಿ ಇರುವುದಿಲ್ಲ ಎಂದು ಪುಟಿನ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಕ್ರಿಸ್‌ಮಸ್ ಹಬ್ಬದ ದಿನವೂ ಮುಖ & ಮೂತಿ ನೋಡದೆ ಉಕ್ರೇನ್ ವಿರುದ್ಧ ದಾಳಿ ಮಾಡುತ್ತಿದೆ ರಷ್ಯಾ. ಆದ್ರೆ ರಷ್ಯಾದ ಸೇನೆ ತನ್ನ ನೆಲದ ಮೇಲೆ ಹಾರಿಸಿದ ಡ್ರೋನ್‌ಗಳನ್ನು ಈಗ ಉಕ್ರೇನ್ ಹೊಡೆದು ಉರುಳಿಸಿ ಗೆಲುವಿನ ನಗೆ ಬೀರಿದೆ. ಜೊತೆಗೆ ರಷ್ಯಾದ ಮಿಸೈಲ್ ಅಂದ್ರೆ ಕ್ಷಿಪಣಿ & ಯದ್ಧ ವಿಮಾನದ ಮೇಲೂ ದಾಳಿ ಮಾಡಲಾಗಿದೆಯಂತೆ.
ಅಮೆರಿಕ ಸಹಾಯ ಮಾಡುತ್ತಾ? ಇಲ್ವಾ?
ಉಕ್ರೇನ್‌ಗೆ ಈಗ ಎರಡೆರಡು ಸಮಸ್ಯೆ ಶುರುವಾಗಿದೆ. ಒಂದು ಕಡೆ ರಷ್ಯಾ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದ್ದರೆ. ಇನ್ನೊಂದು ಕಡೆ ಅಮೆರಿಕದಿಂದ ಸಿಗುತ್ತಿರುವ ನೆರವು ನಿಂತು ಹೋಗುತ್ತಾ? ಅನ್ನೋ ಭಯ ಶುರುವಾಗಿದೆ. ಹೀಗಾಗಿ, ಏನು ಮಾಡೋದು? ಅನ್ನೋ ಚಿಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಶುರುವಾಗಿದೆ. ಇದೇ ವೇಳೆ, ಅಮೆರಿಕದ ಕಡೆಯಿಂದ ಈವರೆಗೂ ಯಾವುದೇ ರೀತಿಯ ಸಿಹಿಸುದ್ದಿ ಸಿಕ್ಕಿಲ್ಲ, ಅಮೆರಿಕ ನೀಡುವ ನೆರವನ್ನ ಆಧರಿಸಿ ಉಕ್ರೇನ್ ಇದುವರೆಗೂ ರಷ್ಯಾ ವಿರುದ್ಧ ದಾಳಿ ನಡೆಸುತ್ತಿತ್ತು. ಆದರೆ ಈಗ ಅಮೆರಿಕ ನೆರವು ನಿಲ್ಲಿಸಿರುವುದು ಉಕ್ರೇನ್‌ಗೆ ಭಯ ಹುಟ್ಟಿಸಿದೆ.

ಯುರೋಪ್‌ಗೂ ನೆಮ್ಮದಿಯೇ ಇಲ್ಲ
ರಷ್ಯಾ & ಉಕ್ರೇನ್ ನಡುವೆ ಯಾವಾಗ ಯುದ್ಧ ಶುರುವಾಗಿತ್ತೋ ಆಗಲೇ ಯುರೋಪ್‌ನಲ್ಲಿ ನೆಮ್ಮದಿ ಹಾರಿ ಹೋಗಿದೆ. ಇಬ್ಬರ ನಡುವಿನ ಯುದ್ಧ ಎಲ್ಲಿ ನಮ್ಮನ್ನೂ ಸುಟ್ಟುಬಿಡುತ್ತೋ ಎಂಬ ಚಿಂತೆಯಲ್ಲಿ ಬೇರೆ ಬೇರೆ ದೇಶಗಳು ಪರದಾಡುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಯುದ್ಧ ನಿಲ್ಲಿಸುವ ಪ್ರಯತ್ನಗಳು ಮಾತ್ರ ಶಿಸ್ತಿನಿಂದ ಸಾಗಿಲ್ಲ. ಹೀಗಾಗಿ ಮತ್ತೆ ಮತ್ತೆ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಭೀಕರ ದಾಳಿಗೆ ಮುಂದಾಗುತ್ತಿವೆ. ಈ ಮೂಲಕ 3ನೇ ಮಹಾಯುದ್ಧದ ಭೀತಿ ಕೂಡ ಆವರಿಸಿದೆ.
ನ್ಯೂಕ್ಲಿಯರ್ ಅಸ್ತ್ರ ಬಳಸುತ್ತಾ ರಷ್ಯಾ?
ಇದಿಷ್ಟೂ ಒಂದು ಕಡೆಯಾದರೆ ಇನ್ನೊಂದು ಕಡೆ ಪರಮಾಣು ಅಸ್ತ್ರಗಳ ಬಳಕೆ ಬಗ್ಗೆಯೂ ಭಯ ಶುರುವಾಗಿದೆ. ಯಾಕಂದ್ರೆ ಒಂದು ಕಡೆ ಉಕ್ರೇನ್ ಕೂಡ ಪರಮಾಣು ಅಸ್ತ್ರಗಳನ್ನು ಹೊಂದಿರುವ ದೇಶ. ಹಾಗೇ ಇನ್ನೊಂದು ಕಡೆ ರಷ್ಯಾ ಕೂಡ ನ್ಯೂಕ್ಲಿಯರ್ ವೆಪನ್ಸ್ ಇರುವ ರಾಷ್ಟ್ರ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪರಮಾಣು ಅಸ್ತ್ರಗಳ ಬಳಕೆಯ ಕುರಿತು ಆತಂಕ ಸೃಷ್ಟಿಯಾಗಿದೆ.












Click it and Unblock the Notifications