ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನರ ಪ್ರಕಾರ ದೇಶದ ಅತ್ಯಂತ ಕೆಟ್ಟ ಅಧ್ಯಕ್ಷರಾರು?

|
Google Oneindia Kannada News

ವಾಷಿಂಗ್ಟನ್, ಜು 3: ಎರಡನೇ ಮಹಾಯುದ್ದದ ನಂತರ ಅಮೆರಿಕಾ ಕಂಡ ಅತ್ಯಂತ 'ಕೆಟ್ಟ ಅಧ್ಯಕ್ಷ' ಎನ್ನುವ ಕುಖ್ಯಾತಿಗೆ ಹಾಲಿ ಅಧ್ಯಕ್ಷ ಬರಾಕ್ ಒಬಾಮಾ ಪಾತ್ರರಾಗಿದ್ದಾರೆ. ಅಮೆರಿಕಾದ ಕ್ವಿನ್ನಿಪಿಯಾಕ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ಶೇ. 33ರಷ್ಟು ಅಮೆರಿಕನ್ನರು ಎರಡನೇ ಮಹಾಯುದ್ದದ ನಂತರ ಒಬಾಮಾ ದೇಶ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ಅಭಿಪ್ರಾಯಪಟ್ಟರೆ, ಶೇ. 45ರಷ್ಟು ಅಮೆರಿಕನ್ನರು ರಿಪಬ್ಲಿಕನ್ ಪಕ್ಷದ ಮಿಟ್ ರೊಮ್ನಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದರೆ ಅಮೆರಿಕ ಉತ್ತಮ ಸ್ಥಿತಿಯಲ್ಲಿರುತ್ತಿತ್ತು ಎಂದಿದ್ದಾರೆ. (ಮೋದಿ ಮೋಡಿಗೆ ಸಿಲುಕಿದ ಒಬಾಮಾ)

ಜುಲೈ 2006ರಲ್ಲಿ ಕೂಡಾ ಈ ವಿಶ್ವವಿದ್ಯಾಲಯ ಸಮೀಕ್ಷೆ ನಡೆಸಿತ್ತು. ಪ್ರಮುಖವಾಗಿ ಐವತ್ತು ವರ್ಷಕ್ಕಿಂತ ಕೆಳಗಿನವರು ಒಬಾಮಾ ಆಡಳಿತವನ್ನು ಮೆಚ್ಚಿದ್ದಾರೆ. ಎರಡನೇ ಮಹಾಯುದ್ದದ ನಂತರ ಅಮೆರಿಕಾ ಕಂಡ ಉತ್ತಮ ಅಧ್ಯಕ್ಷರು ಎಂದರೆ ರೊನಾಲ್ಡ್ ರೇಗನ್ ಎಂದು ಅಮೆರಿಕನ್ನರು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

Americans say, Barack Obama is the worst President since World War II

ದೇಶದ ಆರ್ಥಿಕತೆ, ಭಯೋತ್ಪಾದನೆ, ಪರಿಸರ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಒಬಾಮಾ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಮೀಕ್ಷೆಯನ್ನು ಆಧರಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಸಮೀಕ್ಷೆಯ ಪ್ರಕಾರ ರೇಗನ್, ಬಿಲ್ ಕ್ಲಿಂಟನ್, ಜಾನ್ ಎಫ್ ಕೆನಡಿ ನಂತರದ ಸ್ಥಾನವನ್ನು ಒಬಾಮಾ ಪಡೆದಿದ್ದಾರೆ. ಅಮೆರಿಕನ್ನರು ದೇಶದ ಪ್ರಮುಖ ಮೂರು ಆಡಳಿತ ವ್ಯವಸ್ಥೆಯ ಬಗ್ಗೆಯೂ ಕೂಡಾ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಆದರೆ ತಮ್ಮ ದೇಶದ ರಕ್ಷಣಾ ಮತ್ತು ಪೊಲೀಸ್ ವ್ಯವಸ್ಥೆಯ ಬಗ್ಗೆ ಸಂಪೂರ್ಣ ತೃಪ್ತಿಯನ್ನು ಹೊಂದಿದ್ದಾರೆ. ಅಮೆರಿಕನ್ನರ ಪ್ರಕಾರ ಎರಡನೇ ಮಹಾಯುದ್ದದ ನಂತರ ಅಮೆರಿಕಾ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷರ ಪಟ್ಟಿ ಕೆಳಗಿನಂತಿದೆ:

2006ರಲ್ಲಿ
ಜಾರ್ಜ್ ಬುಷ್ (ಶೇ. 34)
ರಿಚರ್ಡ್ ನಿಕ್ಸನ್ (ಶೇ.17)
ಬಿಲ್ ಕ್ಲಿಂಟನ್ (ಶೇ.16)
ಜಿಮ್ಮಿ ಕಾರ್ಟರ್ (ಶೇ. 13)

2014ರಲ್ಲಿ
ಬರಾಕ್ ಒಬಾಮಾ (ಶೇ. 33)
ಜಾರ್ಜ್ ಬುಷ್ (ಶೇ. 28)
ರಿಚರ್ಡ್ ನಿಕ್ಸನ್ (ಶೇ. 13)
ಜಿಮ್ಮಿ ಕಾರ್ಟರ್ (ಶೇ. 8)

(ಫೋಟೋ : ಪಿಟಿಐ)

English summary
Americans say, Barack Obama is the worst President since World War II, a new poll from Quinnipiac University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X