ಜಾತಿ ತಾರತಮ್ಯ ಕೊನೆಗೊಳಿಸಿತು ಈ ರಾಜ್ಯ: ಕಾರಣ ತಿಳಿಯಿರಿ!
ಕ್ಯಾಲಿಫೋರ್ನಿಯಾ: ಜಾತಿ ತಾರತಮ್ಯ ಪಿಡುಗಾಗಿದ್ದು, ಸಮಾಜ ನೆಮ್ಮದಿಯಿಂದ ಬದುಕಲು ಜಾತಿ ಪದ್ಧತಿ ದೊಡ್ಡ ಸಮಸ್ಯೆ ಉಂಟು ಮಾಡ್ತಿದೆ. ಹೀಗಾಗಿ ಜಾತಿ ತಾರತಮ್ಯದ ವಿರುದ್ಧ ಸಮರ ಸಾರಿರುವ ಅದೊಂದು ರಾಜ್ಯ ಮಹತ್ವದ ಮಸೂದೆ ಅಂಗೀಕರಿಸಿದೆ. ಹಾಗಾದರೆ ಯಾವುದು ಆ ರಾಜ್ಯ? ಜಾತಿ ತಾರತಮ್ಯ ವಿರುದ್ಧ ಕೈಗೊಂಡಿರುವ ಕ್ರಮವಾದ್ರು ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯೋಣ ಬನ್ನಿ.
ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಜಾತಿ ತಾರತಮ್ಯ ನಿಷೇಧ ಮಸೂದೆ ಅಂಗೀಕರಿಸುವ ಮೂಲಕ ಕ್ಯಾಲಿಫೋರ್ನಿಯಾದ ಶಾಸಕಾಂಗ ಸಭೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಅಮೆರಿಕಾದಲ್ಲಿ ಹೀಗೆ ಕಾಯ್ದೆ ಜಾರಿಗೊಳಿಸಿದ ಮೊಟ್ಟ ಮೊದಲ ರಾಜ್ಯವಾಗುವತ್ತ ಹೆಜ್ಜೆ ಹಾಕಿದೆ ಕ್ಯಾಲಿಫೋರ್ನಿಯಾ ರಾಜ್ಯ. ಭಾರಿ ಅಂತರದಿಂದ ಈ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ. ಹಾಗಾದರೆ ಈ ಮಸೂದೆ ಕಾಯ್ದೆಯಾಗಿ ಬದಲಾಗೋದು ಯಾವಾಗ? ಮುಂದೆ ಓದಿ.

ಯಾವಾಗ ಜಾರಿಯಾಗುತ್ತೆ ಕಾಯ್ದೆ?
ಇದೀಗ ಶಾಸಕಾಂಗ ಸಭೆ ಜಾತಿ ತಾರತಮ್ಯ ವಿರುದ್ಧದ ಮಸೂದೆ ಅಂಗೀಕರಿಸಿದ್ದು, ಇದನ್ನು ಮತ್ತೆ ರಾಜ್ಯ ಸೆನೆಟ್‌ಗೆ ವರ್ಗಾಯಿಸಲಾಗುತ್ತೆ. ಬಳಿಕ ಸೆನೆಟ್ ಈ ಮಸೂದೆಗೆ ಅನುಮೋದನೆ ನೀಡಿದ ತಕ್ಷಣ ರಾಜ್ಯಪಾಲ ಗೇವಿನ್ ನ್ಯೂಸಮ್ ಅವರಿಗೆ ಕಳಿಸಲಾಗುತ್ತೆ. ಇನ್ನು ಮಸೂದೆಗೆ ಕ್ಯಾಲಿಫೋರ್ನಿಯಾ ರಾಜ್ಯಪಾಲರು ಸಹಿ ಮಾಡಿದ ನಂತರ ಈ ಮಸೂದೆ ಕಾಯ್ದೆಯಾಗುತ್ತದೆ. ಈ ಮೂಲಕ ಅಮೆರಿಕದ ಇತಿಹಾಸದಲ್ಲಿ ಜಾತಿ ತಾರತಮ್ಯದ ವಿರುದ್ಧ ಕೈಗೊಂಡ ಕಠಿಣ ಕ್ರಮವಾಗಿ ಈ ಕಾಯ್ದೆ ಉಳಿಯಲಿದೆ. ಆದರೆ ಮಸೂದೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಕೂಡ ಶುರುವಾಗಿದೆ.
Today, we are celebrating the passage of SB403 by the California Assembly! This historic bill would broaden legal protections for caste-oppressed communities throughout the state. https://t.co/jymRje9ltd pic.twitter.com/fMc0UdSvPx
— Equality Labs (@EqualityLabs) August 28, 2023
ಅಷ್ಟಕ್ಕೂ ಮಾರ್ಚ್ 23ರಂದು ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಐಶಾ ವಹಾಬ್ ಮಸೂದೆಯನ್ನ ಕ್ಯಾಲಿಫೋರ್ನಿಯಾ ವಿಧಾನಸಭೆಯಲ್ಲಿ ಮಂಡಿಸಿದ್ರು. ಜಾತಿ ತಾರತಮ್ಯ ಸಾಮಾಜಿಕ ನ್ಯಾಯ ಹಾಗೂ ನಾಗರಿಕ ಹಕ್ಕನ್ನ ನಿರಾಕರಿಸುವ ಸಂಗತಿ ಎಂದು ಈ ಮಸೂದೆಯನ್ನು ಮಂಡಿಸುವಾಗ ವಹಾಬ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಭಾರಿ ಅಂತರದಿಂದ ಜಾತಿ ತಾರತಮ್ಯದ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಈ ಮೂಲಕ ಕ್ಯಾಲಿಫೋರ್ನಿಯಾ ಶಾಸಕಾಂಗ ಸಭೆಯು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ.
“When a state legislator pushes a law with the intent of targeting an ethnic community, it’s not only racist, it’s unconstitutional. We will explore every option to protect the rights of Hindu Californians.”#VetoSB403 @GavinNewsom https://t.co/knROd38Yst
— Hindu American Foundation (@HinduAmerican) August 29, 2023
ಜನಾಂಗೀಯ ತಿಕ್ಕಾಟದಲ್ಲಿ ಅಮೆರಿಕ
ಅಮೆರಿಕ ಜನಾಂಗೀಯ ದ್ವೇಷ & ತಿಕ್ಕಾಟದಲ್ಲಿ ಶತಮಾನಗಳ ಕಾಲ ನರಳುತ್ತಿದೆ. ಅಲ್ಲಿ ಈಗಲೂ ಕರಿಯರ ವಿರುದ್ಧ ಬಿಳಿಯರು ಜನಾಂಗೀಯ ದ್ವೇಷ ಸಾಧಿಸುತ್ತಾರೆ. ಈ ಬೆಳವಣಿಗೆ ಅಮೆರಿಕದ ನೆಮ್ಮದಿ ಹಾರಿ ಹೋಗುವಂತೆ ಮಾಡಿದೆ. ಈ ಸಂದರ್ಭದಲ್ಲೇ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯ ಎಲ್ಲರೂ ಬೆನ್ನುತಟ್ಟುವ ಕೆಲಸ ಮಾಡಿದೆ. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಜಾತಿ ಪದ್ಧತಿ ತೊಡೆದು ಹಾಕುವ ಮಸೂದೆ ಜಾರಿಯಾಗುತ್ತಿದ್ದು, ಜಾತಿ ಪದ್ದತಿ ನಿಷೇಧಿಸಿರುವ ಅಮೆರಿಕದ ಮೊದಲ ರಾಜ್ಯ ಎಂಬ ಕೀರ್ತಿಗೂ ಕ್ಯಾಲಿಫೋರ್ನಿಯಾ ಪಾತ್ರವಾಗುತ್ತಿದೆ.
Landmark. Historic. Unprecedented. We are proud to share that California state assembly passed anti caste discrimination bill #SB403 with overwhelming majority. This is what Educate, Agitate and Organize looks like. Thanks to @EqualityLabs and Ravidassia community for this win. pic.twitter.com/YHw5Rrbw5y
— AANA - Ambedkar Association of North America (@aanausa) August 28, 2023
ಒಟ್ನಲ್ಲಿ ಮನುಷ್ಯನೇ ಮನುಷ್ಯನ ವಿರುದ್ಧ ದ್ವೇಷ ಕಾರಲು, ಅಸೂಯೆ ಪಡಲು ಕಾರಣವಾದ ಜಾತಿ ಪದ್ಧತಿಗೆ ಹಾಗೂ ಜಾತಿ ತಾರತಮ್ಯಕ್ಕೆ ಒಂದು ಅಂತ್ಯ ಕಾಣಿಸಲು ಅಮೆರಿಕದ ರಾಜ್ಯ ಮುಂದಾಗಿದೆ. ಇಂಥ ಪದ್ಧತಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ವಿವಿಧ ರೀತಿಯಲ್ಲಿ ನೆಲೆಯೂರಿದೆ. ಆದರೆ ಅದರ ವಿರುದ್ಧ ಸಮರ ಸಾರಬೇಕು ಎಂಬ ಮಾತು ಈ ಮೊದಲಿನಿಂದ ಕೇಳಿಬರುತ್ತಿದೆ. ಈಗ ಅಮೆರಿಕದ ಈ ರಾಜ್ಯ ಜಾತಿ ಪದ್ಧತಿ ವಿರುದ್ಧ ಸಮರ ಸಾರಿ ತೊಡೆ ತಟ್ಟಿದೆ. ಆದ್ರೆ ಮಸೂದೆಗೆ ಬೆಂಬಲ ನೀಡಿದಷ್ಟೇ ವಿರೋಧ ಕೂಡ ಈ ಹಿಂದೆ ವ್ಯಕ್ತವಾಗಿತ್ತು. ಎಲ್ಲ ಸವಾಲು ಮೀರಿ ಮಹತ್ವದ ಕ್ರಮ ಕೈಗೊಂಡಿದೆ ಕ್ಯಾಲಿಫೋರ್ನಿಯಾ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications