ಅಮೆರಿಕ ಚುನಾವಣೆ: ನ್ಯೂಸ್ ಪೇಪರ್ ಬೇಡ ಅಂತಿದ್ದಾರೆ ಅಮೆರಿಕ ಜನ, ಯಾಕೆ!
ಅಮೆರಿಕ ಚುನಾವಣೆಗೆ ಇನ್ನು ಕೇವಲ 5 ದಿನ ಮಾತ್ರ ಬಾಕಿ ಉಳಿದಿದೆ. ಅಮೆರಿಕ ಚುನಾವಣೆಗೆ ಐದು ದಿನಗಳು ಬಾಕಿ ಉಳಿದಿರುವಂತೆ ಅಲ್ಲಿನ ಪತ್ರಿಕೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿರುವ ಸುದ್ದಿ ಬರುತ್ತಿದೆ. ಸಾಮಾನ್ಯವಾಗಿ ಅಮೆರಿಕ ಚುನಾವಣೆಗಳಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಬಾರಿಯೂ ಅದೇ ಮುಂದುವರಿದಿದೆ. ಆದರೆ, ಆ ಒಂದು ಪತ್ರಿಕೆಗೆ ಮಾತ್ರ ಭಾರೀ ಹೊಡೆತವೇ ಬಿದ್ದಿದೆ. ಚುನಾವಣೆಯಲ್ಲಿ ಜಿದ್ದಾಜಿದ್ದಿನ ವಾತಾವರಣವಿದೆ.
ವಿಶ್ವದ ದೊಡ್ಡಣ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಅಮೆರಿಕದಲ್ಲಿ ಇದೇ ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೊನೆ ಕ್ಷಣದ ಪ್ರಚಾರ ಕಸರತ್ತು ನಡೆದಿದೆ. ಚುನಾವಣಾ ಕಣದಲ್ಲಿ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಇದ್ದಾರೆ. ಈ ಇಬ್ಬರ ನಡುವೆ ಭಾರೀ ವಾಕ್ಸಮರ ಹಾಗೂ ಹೈಡ್ರಾಮಾಗಳು ನಡೆಯುತ್ತಿವೆ. ಈ ಹಿಂದೆಂದಿಗಿಂತಲೂ ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಇದಕ್ಕೆ ಟ್ರಂಪ್ ಅವರ ಮಾತುಗಳು, ತಿರುಗೇಟುಗಳು ಸಹ ಕಾರಣವಾಗಿದೆ.

ಇದರ ನಡುವೆ ಅಮೆರಿಕ ಚುನಾವಣೆಯಲ್ಲಿ ಮಾಡಿದ ಆ ಒಂದು ನಿರ್ಧಾರದಿಂದ ಅಮೆರಿಕದ ಪ್ರತಿಷ್ಠಿತ ಪತ್ರಿಕೆಯೊಂದು ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕದಲ್ಲಿ ವಾಷಿಂಗ್ಟನ್ ಪೋಸ್ಟ್ (The Washington Post) ಪತ್ರಿಕೆಯು ತನ್ನದೇ ವರ್ಚಸ್ಸು ಹೊಂದಿದೆ. ಈ ಪಕ್ಷ ಸುದೀರ್ಘ ಅವಧಿಯಿಂದ ಅಮೆರಿಕದ ಜನರ ಮನಸ್ಸಿಗೆ ಹತ್ತಿರವಾಗಿದೆ. ಅಲ್ಲದೇ ತನಿಖಾ ವರದಿಗಳು ಹಾಗೂ ವಿಶೇಷ ವರದಿಗಳಿಂದ ಅಮೆರಿಕನ್ನರ ಮನಸ್ಸು ಗೆದಿದ್ದ ಪತ್ರಿಕೆ ಇದು. ಆದರೆ, ಅಮೆರಿಕ ಚುನಾವಣೆಯ ವಿಷಯದಲ್ಲಿ ಈ ಪತ್ರಿಕೆ ತೆಗೆದುಕೊಂಡಿರುವ ನಿರ್ಧಾರ ಪಕ್ಷಕ್ಕೆ ಮುಳುವಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಪಕ್ಷದ ಯಾವುದೇ ಅಭ್ಯರ್ಥಿಗೂ ಬೆಂಬಲ ನೀಡುವುದಿಲ್ಲ ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ನಿರ್ಧರಿಸಿತ್ತು. ಈ ನಿರ್ಧಾರವೇ ಆ ಪತ್ರಿಕೆಗೆ ಈಗ ಮುಳುವಾಗಿದೆ. ಯಾಕೆಂದರೆ, ಪತ್ರಿಕೆ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಹಲವು ಓದುಗರು ಪತ್ರಿಕೆಯನ್ನು ಕೈಬಿಟ್ಟಿದ್ದಾರೆ. ಪೋಸ್ಟ್ ಪತ್ರಿಕೆಯ ಈ ನಿರ್ಧಾರದಿಂದಾಗಿ ಬರೋಬ್ಬರಿ 2 ಲಕ್ಷ ಜನ ಈ ಪತ್ರಿಕೆಯ ಚಂದಾದಾರಿಕೆ (Subscription)ಗೆ ಗುಡ್‌ಬಾಯ್ ಹೇಳಿದ್ದಾರೆ ಎಂದು ವರದಿಯಾಗಿದೆ.
ನಾಲ್ಕು ವರ್ಷಗಳಿಗೆ ಒಮ್ಮೆ ಚುನಾವಣೆ: ಅಮೆರಿಕದಲ್ಲಿ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಇನ್ನು ಅಮೆರಿಕದಲ್ಲಿ ದ್ವಿಪಕ್ಷೀಯ ಪದ್ಧತಿ ಜಾರಿಯಲ್ಲಿ ಇದೆ. ಇಬ್ಬರು ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದು, ಈ ಬಾರಿ ಭಾರೀ ವಾಕ್ಸಮರ ನಡೆದಿದೆ. ಪ್ರತಿ ಬಾರಿಯೂ ಅಮೆರಿಕ ಚುನಾವಣೆ ಸಮಯದಲ್ಲಿ ಪ್ರಗತಿಪರವಾದ ವಿಷಯಗಳು ಚರ್ಚೆಯಾಗುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಆ ಬೆಳವಣಿಗೆ ಬದಲಾಗಿದೆ ಎಂದೇ ಹೇಳಬಹುದು.
ಇಲ್ಲಿ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕ್ ಪಕ್ಷದ ನಡುವೆ ಭಾರೀ ಮುಸುಕಿನ ಗುದ್ದಾಟ ನಡೆದಿದೆ. ಅಮೆರಿಕದ ಚುನಾವಣೆಯಲ್ಲಿ ಸಾಮಾನ್ಯವಾಗಿ ಅಭಿವೃದ್ಧಿ ಹಾಗೂ ಪ್ರಗತಿ ವಿಷಯದ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ.
ಮುಂದೆ ಅಧಿಕಾರಕ್ಕೆ ಬಂದರೆ ಯಾವ ಕೆಲಸ ಅಥವಾ ಬದಲಾವಣೆ ತರ್ತೀವಿ ಎಂದು ಎರಡೂ ಪಕ್ಷಗಳು ಜನರ ಮುಂದೆ ಹೇಳ್ತಾರೆ. ಆದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಡೆಮಾಕ್ರಟಿಕ್ ಪಕ್ಷವು ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ನಾಜಿಗಳಿಗೆ ಹೋಲಿಕೆ ಮಾಡಿತ್ತು ಎನ್ನಲಾಗಿದೆ. ಇದಕ್ಕೆ ಟ್ರಂಪ್ ಅವರು ತೀವ್ರವಾಗಿಯೇ ತಿರುಗೇಟು ಕೊಟ್ಟಿದ್ದಾರೆ.












Click it and Unblock the Notifications