ಬಿಳಿಯರನ್ನು ಬಿಳಿಯರು ಕೊಲ್ಲೋಲ್ಲ ಎಂದು ಗುಂಡು ಹಾರಿಸಿದ ಗನ್ ಮ್ಯಾನ್!
ಕೆಂಟುಕಿ, ಅಕ್ಟೋಬರ್ 25: ಸೂಪರ್ ಮಾರ್ಕೆಟ್ ನ ಪಾರ್ಕಿಂಗ್ ಲಾಟ್ ನಲ್ಲಿ ಓರ್ವ ಮಹಿಳೆ ಮತ್ತು ಪುರುಷನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಕೊಂದ ಘಟನೆ ಅಮೆರಿಕದ ಕೆಂಟುಕಿಯಲ್ಲಿ ನಡೆದಿದೆ.
ಅಮೆರಿಕದ ಕೆಂಟುಕಿಯ ಸೂಪರ್ ಮಾರ್ಕೆಟ್ ವೊಂದರಲ್ಲಿ ಸ್ಥಳೀಯ ಕಾಲಮಾನ ಸುಮಾರು ಮಧ್ಯಾಹ್ನ 2:30 ರ ಸಮಯದಲ್ಲಿ ಈ ಶೂಟೌಟ್ ಘಟನೆ ನಡೆದಿದೆ. ಆದರೆ ಶೂಟೌಟ್ ಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಆದರೆ ಗುಂಡಿಕ್ಕುವ ಮುನ್ನ ಗನ್ ಮ್ಯಾನ್, 'ಬಿಳಿಯರನ್ನೇ ಬಿಳಿಯರು ಕೊಲ್ಲುವುದಿಲ್ಲ. ಆದ್ದರಿಂದ ನಾನು ನಿಮ್ಮನ್ನು ಕೊಲ್ಲುವುದಿಲ್ಲ' ಎಂದು ವ್ಯಕ್ತಿಯೊಬ್ಬರಿಗೆ ಹೇಳಿದ್ದ ಎಂದು ಗನ್ ಮ್ಯಾನ್ ನಿಂದ ತಪ್ಪಿಸಿಕೊಂಡ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಓರ್ವ ಮಹಿಳೆ ಮತ್ತು ಪುರುಷ ಗುಂಡೇಟಿಕೆ ಬಲಿಯಾಗಿದ್ದು, ಇವರ ಮೇಲೆ ಯಾವ ದ್ವೇಷವಿಲ್ಲದಿದ್ದರೂ, ಮಾನಸಿಕ ಒತ್ತಡದಿಂದಾಗಿ ಗನ್ ಮ್ಯಾನ್ ಈ ಕೆಲಸ ಮಾಡಿದ್ದಾನೆ ಎನ್ನಲಾಗುತ್ತಿದೆ. ಶೂಟೌಟ್ ನಂತರ ಆ ಜಾಗದಿಂದ ಪರಾರಿಯಾಗಿದ್ದ ಶಂಕಿತ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಅರಣೆ ನಡೆಯುತ್ತಿದೆ.












Click it and Unblock the Notifications