ಅಮೆರಿಕದ ಬುಡಕ್ಕೆ ಇಸ್ರೇಲ್ ಬಿಸಿನೀರು ಕಾಯಿಸುತ್ತಿದೆಯಾ?

ಇಸ್ರೇಲ್ ಈಗ ಅಮೆರಿಕದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕಂದ್ರೆ ಅತ್ತ ಇಸ್ರೇಲ್ ವಿರುದ್ಧ ಗುಡುಗಲು ಆಗದೆ, ಇನ್ನೊಂದು ಕಡೆ ಇಸ್ರೇಲ್ ಸ್ನೇಹ ಉಳಿಸಿಕೊಳ್ಳೋಕು ಆಗದೆ ಅಮೆರಿಕ ಒದ್ದಾಡುತ್ತಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ. ಇಸ್ರೇಲ್ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಈಗ ಅಮೆರಿಕದ ಕುತ್ತಿಗೆ ಹಿಸುಕಿದಂತೆ ಆಗುತ್ತಿದೆ!

ಹೌದು ಇಸ್ರೇಲ್ ಇದೀಗ ತನ್ನ ಶತ್ರು ಹಮಾಸ್ ಮತ್ತು ಪ್ಯಾಲೆಸ್ತೀನ್ ನಾಶಕ್ಕೆ ತೊಡೆತಟ್ಟಿದೆ. ಹೀಗಾಗಿಯೇ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ಆದರೆ ಹೀಗೆ ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಅಮಾಯಕರ ಜೀವ ಹೋಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗೆ ಎಲ್ಲಾ ರೀತಿಯಲ್ಲೂ ಯುದ್ಧ ಆರ್ಭಟಿಸಿದೆ. ಆದರೆ ಈ ಯುದ್ಧ ಅಮೆರಿಕದ ಬುಡಕ್ಕೆ ಬಿಸಿನೀರು ಕಾಯಿಸಿದಂತೆ ಆಗುತ್ತಿದೆ, ಅದು ಹೇಗೆ ಗೊತ್ತಾ?

America Is Suffering To Handle Israel Issue On War Against Hamas

ಸಂಕಷ್ಟದಲ್ಲಿ ದೊಡ್ಡಣ್ಣ ಅಮೆರಿಕ?

ಇಸ್ರೇಲ್ ವಿಚಾರದಲ್ಲಿ ಅಮೆರಿಕ ನಲುಗಿ ಹೋಗಿದ್ದು, ಒಂದು ಕಡೆ ಪೂರ್ತಿಯಾಗಿ ಇಸ್ರೇಲ್‌ನ ಎದುರು ಹಾಕಿಕೊಳ್ಳಲು ಆಗುತ್ತಿಲ್ಲ. ಮತ್ತೊಂದು ಕಡೆ ಇಸ್ರೇಲ್ ನಾಯಕರು ಅಮೆರಿಕ ಈಗ ಹೇಳುವ ಬುದ್ಧಿ ಮಾತು ಕೂಡ ಕೇಳುತ್ತಿಲ್ಲ. ಹೀಗಾಗಿ ಅಮೆರಿಕ ಅಧ್ಯಕ್ಷ ಬೈಡನ್ ಇಸ್ರೇಲ್‌ಗೆ ಬುದ್ಧಿ ಹೇಳಲು ಪರದಾಡುತ್ತಿದ್ದಾರೆ. ಹೀಗಿದ್ದಾಗ ರಷ್ಯಾ ವಿಚಾರದಲ್ಲಿ ಉಕ್ರೇನ್ ಪರವಾಗಿದ್ದ ಅಮೆರಿಕ, ಯುದ್ಧದ ಬಗ್ಗೆ ಪುಂಗಿದೆ. ಆದರೆ ಅದೇ ಹಮಾಸ್ & ಇಸ್ರೇಲ್ ಯುದ್ಧದಲ್ಲಿ ಈಗ ಅಮೆರಿಕ ಹಿಂಸೆ ಪ್ರಚೋದನೆ ಮಾಡುತ್ತಿದೆ ಎಂಬ ಆರೋಪವು ಕೇಳಿಬಂದಿತ್ತು. ಹೀಗಾಗಿ ತನ್ನ ಮಾನ & ಮರ್ಯಾದಿ ಉಳಿಸಿಕೊಳ್ಳಲು ಅಮೆರಿಕ ಏನು ಮಾಡುತ್ತಿದೆ ಗೊತ್ತಾ? ಮುಂದೆ ಓದಿ.

ನಾನವನಲ್ಲ.. ನಾನವನಲ್ಲ..

ಅಮೆರಿಕ ಈ ಬಗ್ಗೆ ಇದೀಗ ವಿವರಣೆ ನೀಡಿದ್ದು, ಇಸ್ರೇಲ್ ಮಾಡುತ್ತಿರುವ ಯಡವಟ್ಟಿಗೆ ಮತ್ತು ಅಮೆರಿಕಗೆ ಯಾವುದೇ ಸಂಬಂಧ ಇಲ್ಲ ಎಂದಿದೆ. ಯಾಕಂದ್ರೆ ಅಮೆರಿಕ ಸಪ್ಲೈ ಮಾಡುತ್ತಿರುವ ಅಸ್ತ್ರ ಬಳಸಿಕೊಂಡು, ಇಸ್ರೇಲ್ ಸೇನೆಯು ಹಿಂಸಾಚಾರ ನಡೆಸಿದೆ. ಈ ಮೂಲಕ ಗಾಜಾಪಟ್ಟಿ ಭಾಗದಲ್ಲಿ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಆಗುತ್ತಿದ್ದು ದೊಡ್ಡ ಸಮಸ್ಯೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಈಗ ಅಮೆರಿಕ ಕೂಡ ಅಲರ್ಟ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇಸ್ರೇಲ್ ಸೇನೆ ಅಮೆರಿಕ ಕಳುಹಿಸಿದ್ದ ಅಸ್ತ್ರಗಳನ್ನು ಅಂದ್ರೆ ವೆಪನ್ಸ್ ಬಳಕೆ ಮಾಡಿಕೊಂಡು, ಕಾನೂನು ಉಲ್ಲಂಘನೆ ಮಾಡಿರಬಹುದು ಎಂದಿದೆ. ಈ ಮೂಲಕ ಅಮೆರಿಕ ಈಗ ತನ್ನ ಸೇಫ್ಟಿ ನೋಡಿಕೊಳ್ಳುತ್ತಿದೆ ಎಂಬ ಮಾತು ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+