ರಷ್ಯಾಗೆ ಶಾಕ್ ಕೊಟ್ಟ ಉಕ್ರೇನ್: ಒಂದೇ ದಿನ 400 ಡ್ರೋನ್‌ಗಳು ಧೂಳ್ ಧೂಳ್?
ಉಕ್ರೇನ್ ವಿರುದ್ಧ ರಷ್ಯಾ ಇದೀಗ ಮನಸ್ಸಿಗೆ ಬಂದ ರೀತಿ ದಾಳಿ ನಡೆಸುತ್ತಿದ್ದು, ಈ ದಾಳಿಗೆ ಇದೀಗ ಉಕ್ರೇನ್ ಪ್ರಜೆಗಳು ಕಕ್ಕಾಬಿಕ್ಕಿ ಆಗಿ ಓಡಿ ಹೋಗುತ್ತಿದ್ದಾರೆ. ಒಂದು ಕಡೆ ಪರಿಸ್ಥಿತಿಯು ಕೈಮೀರುತ್ತಿದ್ದು, ಇನ್ನೊಂದು ಕಡೆ ರಷ್ಯಾ ಸೇನೆ ಬಳಿ ಇರುವ ಹತ್ಯಾರಗಳು ಅಂದ್ರೆ ಅಸ್ತ್ರ ಖಾಲಿ ಆಗುತ್ತಿವೆ. ಉಕ್ರೇನ್ ಪರವಾಗಿ ನ್ಯಾಟೋ ಒಕ್ಕೂಟ ಅದರಲ್ಲೂ ಅಮೆರಿಕ ನಿಂತಿದ್ದು ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಹೀಗೆ ರಷ್ಯಾ & ಉಕ್ರೇನ್ ನಡುವೆ ಘೋರ ಕಾಳಗ ಶುರು ಆಗಿ ಇನ್ನೇನು 3 ವರ್ಷ ಮುಗಿಯುವ ಸಮಯದಲ್ಲೇ ರಷ್ಯಾ ಸೇನೆಗೆ ದೊಡ್ಡ ಶಾಕ್ ಸಿಕ್ಕಿದೆ!
ರಷ್ಯಾ ಮಿಲಿಟರಿ ತನ್ನ ಬಳಿ ಇರುವ ಅಸ್ತ್ರಗಳನ್ನು ಈಗಾಗಲೇ ಉಕ್ರೇನ್ ವಿರುದ್ಧ ಪ್ರಯೋಗ ಮಾಡಿ ಆಗಿದೆ. ಅದರಲ್ಲೂ ಪ್ರಮುಖವಾಗಿ ಡ್ರೋನ್‌ಗಳ ಮೂಲಕ ಭೀಕರ ದಾಳಿ ನಡೆಸುತ್ತಾ ಉಕ್ರೇನ್ ಎದೆಯಲ್ಲಿ ಭಯದ ಬಿರುಗಾಳಿ ಸೃಷ್ಟಿ ಮಾಡುತ್ತಿದೆ ರಷ್ಯಾ ಮಿಲಿಟರಿ. ಹೀಗಿದ್ದಾಗ ಮತ್ತೊಂದು ಆಘಾತಕಾರಿ ಸುದ್ದಿ ಕೂಡ ರಷ್ಯಾಗೆ ಸಿಕ್ಕಿದೆ. ಡ್ರೋನ್‌ಗಳ ಮೂಲಕ ಸುಲಭ & ಸರಳವಾಗಿ ಉಕ್ರೇನ್ ದೇಶದ ಒಳಗೆ ನುಗ್ಗಿ ದಾಳಿ ನಡೆಸುತ್ತಿದ್ದ ರಷ್ಯಾ ಸೇನೆಗೆ ಉಕ್ರೇನ್ ಈಗ ಆಘಾತ ನೀಡಿದೆಯಂತೆ. ಹಾಗಾದ್ರೆ ಪುಟಾಣಿ ಉಕ್ರೇನ್ ಈಗ ದೈತ್ಯ ರಷ್ಯಾಗೆ ಯಾವ ರೀತಿಯ ಶಾಕ್ ಕೊಟ್ಟಿದೆ? ಮುಂದೆ ಓದಿ.

ರಷ್ಯಾದ 400 ಡ್ರೋನ್‌ಗಳು ಉಡೀಸ್?
ಉಕ್ರೇನ್ ಮಿಲಿಟರಿ ಇದೀಗ ರಷ್ಯಾ ಸೇನೆಗೆ ಸೇರಿದ ಅತ್ಯಾಧುನಿಕ 400 ಡ್ರೋನ್‌ಗಳನ್ನ ನೆಲಕ್ಕೆ ಬೀಳಿಸಿದೆ ಎಂಬ ಆರೋಪ ಕೇಳಿಬಂದಿದೆ. ರಷ್ಯಾ ಸೇನೆ ಈ ಡ್ರೋನ್‌ಗಳನ್ನ ಬಳಸಿ ಉಕ್ರೇನ್ ನೆಲದ ಮೇಲೆ ದಾಳಿಗೆ ಮುಂದಾಗಿತ್ತು. ಆದರೆ ಅವುಗಳನ್ನ ಉಕ್ರೇನ್ ಮಿಲಿಟರಿ ಸೂಕ್ತವಾಗಿ ಹೊಡೆದು ಉರುಳಿಸಿದೆ ಎನ್ನಲಾಗಿದೆ. ಇದು ಉಕ್ರೇನ್ & ರಷ್ಯಾ ನಡುವಿನ ಯುದ್ಧದ ಕಿಚ್ಚು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
ರಷ್ಯಾ & ಉಕ್ರೇನ್ ಬಡಿದಾಟಕ್ಕೆ 32 ತಿಂಗಳು
2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಇಲ್ಲಿಗೆ ಬಹುತೇಕ 32 ತಿಂಗಳು ಮುಗಿಸಿದೆ. ಈ 32 ತಿಂಗಳ ಬಡಿದಾಟದಲ್ಲಿ ಅತಿಹೆಚ್ಚು ನಷ್ಟ ಆಗಿರುವುದು ಉಕ್ರೇನ್ ದೇಶಕ್ಕೆ ಎಂಬ ಆರೋಪ ಇದೆ. ಮತ್ತೊಂದು ಕಡೆ ಶಾಂತಿ ಮಾತುಕತೆಗೆ ಯಾವುದೇ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ, ಹೀಗಾಗಿಯೇ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ ಎಂಬ ಆರೋಪ ಇದೀಗ ಕೇಳಿಬರುತ್ತಿದೆ. ಹೀಗಾಗಿ ಇದೆಲ್ಲಾ ಮತ್ತಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಕೂಡ ದಟ್ಟವಾಗಿದೆ.












Click it and Unblock the Notifications