Russia & Ukraine: ಉಕ್ರೇನ್ ಕರಾವಳಿ ನಗರದ ಮೇಲೆ ಭೀಕರ ಅಟ್ಯಾಕ್ ನಡೆಸಿದ ರಷ್ಯಾ ಸೇನೆ!
ಉಕ್ರೇನ್ ವಿರುದ್ಧ ರೊಚ್ಚಿಗೆದ್ದಿರುವ ರಷ್ಯಾ ಸೇನೆಯನ್ನ ಸಮಾಧಾನ ಮಾಡಲು ಈಗ ಯಾರ ಕೈಯಿಂದಲೂ ಸಾಧ್ಯವೇ ಇಲ್ಲ ಎನ್ನುವಂತಹ ವಾತಾವರಣ ನಿರ್ಮಾಣ ಆಗಿದೆ. ಯಾಕಂದ್ರೆ ದಿನದಿಂದ ದಿನಕ್ಕೆ ತನ್ನ ದಾಳಿಯ ತೀವ್ರತೆ ಹೆಚ್ಚು ಮಾಡುತ್ತಿರುವ ರಷ್ಯಾ ಸೇನೆ, ಉಕ್ರೇನ್‌ನ ಪ್ರಮುಖ ಜಾಗಗಳನ್ನೇ ಟಾರ್ಗೆಟ್ ಮಾಡಿ ಹೊಡೆದು ಉರುಳಿಸುತ್ತಿದೆ. ಅದರಲ್ಲೂ ಚಳಿಗಾಲ ಹತ್ತಿರ ಬಂದಿರುವ ಸಮಯದಲ್ಲೇ ಏನಾಗುತ್ತಿದೆ ಗೊತ್ತಾ?
ಉಕ್ರೇನ್ ದೇಶ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ದೇಶವಾಗಿದೆ. ಇದೇ ಕಾರಣಕ್ಕೆ ಅಲ್ಲಿ ಇದೀಗ ಚಳಿ ಹೆಚ್ಚಾಗುತ್ತಿದ್ದು, ಚಳಿಗಾಲದ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಕಷ್ಟ. ಉಕ್ರೇನ್ ದೇಶದ ಜನರಿಗೆ ಮನೆಯ ಒಳಗೆ ಹೀಟರ್ ಇಲ್ಲದೆ ಬದುಕುವುದು ಕೂಡ ಭಾರಿ ಕಷ್ಟವಾಗಲಿದೆ.

ಇಂತಹ ಸಮಯದಲ್ಲೇ ರಷ್ಯಾ ಸೇನೆ ಇದೀಗ ಸಖತ್ ಪ್ಲಾನ್ ಮಾಡಿ ಫೈಟಿಂಗ್ ಶುರು ಮಾಡಿದೆ, ಇದರಿಂದಾಗಿ ಉಕ್ರೇನ್ ದೇಶದ ಜನರಿಗೆ ಚಳಿಗಾಲದಲ್ಲಿ ದೊಡ್ಡ ಸಮಸ್ಯೆಯೂ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾದ್ರೆ ಉಕ್ರೇನ್ ದೇಶದ ಕರಾವಳಿ ನಗರಗಳಲ್ಲಿ ಇದೀಗ ನಡೆಯುತ್ತಿರುವುದು ಏನು? ಮುಂದೆ ಓದಿ.
ಚಳಿಯಲ್ಲಿ ದಾಳಿ, ನಡುಗುತ್ತಿರುವ ಜನ!
ಅಷ್ಟಕ್ಕೂ ರಷ್ಯಾ ಸೇನೆ ಇದೀಗ ಉಕ್ರೇನ್‌ನ ಕರಾವಳಿ ನಗರಗಳ ಮೇಲೆ ಭಾರಿ ಘೋರ ದಾಳಿ ನಡೆಸುತ್ತಿದ್ದು, ಇದರ ಪರಿಣಾಮ ಉಕ್ರೇನ್ ಕರಾವಳಿ ನಗರದ ಜನರು ನರಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾಕಂದ್ರೆ ಒಡೆಸ್ಸಾ ಸೇರಿದಂತೆ ಉಕ್ರೇನ್‌ನ ಕರಾವಳಿ ನಗರಗಳಲ್ಲಿ ಇದೀಗ ಚಳಿ ಹೆಚ್ಚಾಗಿದೆ.
ಹೀಗೆ ಚಳಿ ಹೆಚ್ಚಾಗಿರುವ ಕಾರಣಕ್ಕೆ, ಉಕ್ರೇನ್ ಜನರಿಗೆ ಈಗ ಹೀಟರ್ ಬೇಕೆ ಬೇಕು. ಆದರೆ ರಷ್ಯಾ ಮಿಲಿಟರಿಯು ತನ್ನ ಡ್ರೋನ್‌ಗಳ ಮೂಲಕ ನಡೆಸಿದ ದಾಳಿಯ ಪರಿಣಾಮ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಈ ಮೂಲಕ ಅಪಾರ್ಟ್‌ಮೆಂಟ್ ಒಳಗಡೆ ಹೀಟರ್ಸ್ ಇಲ್ಲದೆ ಜನರು ನಲುಗಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.
ಡ್ರೋನ್ & ಮಿಸೈಲ್ ಮೂಲಕ ಅಟ್ಯಾಕ್!
ಉಕ್ರೇನ್‌ಗೆ ಈಗಾಗಲೇ ಅಗತ್ಯ ವಸ್ತುಗಳ ಸರಬರಾಜು ಬಹುತೇಕ ನಿಂತು ಹೋಗಿದ್ದು, ಅಲ್ಲಿ ಜನರು ಪ್ರತಿದಿನ ಪರದಾಡುತ್ತಿದ್ದಾರೆ. ತುತ್ತು ಅನ್ನಕ್ಕೂ ಲಕ್ಷಾಂತರ ಜನರು ಪ್ರತಿದಿನ ತೀವ್ರ ಪರದಾಡುವ ವಾತಾವರಣ ಇದೀಗ ಉಕ್ರೇನ್ ದೇಶದಲ್ಲಿ ಇದೆ. ಹೀಗಿದ್ದಾಗ ರಷ್ಯಾ ಸೇನೆಯು ಡ್ರೋನ್ & ಮಿಸೈಲ್ ಮೂಲಕ ಡೆಡ್ಲಿ ಅಟ್ಯಾಕ್ ನಡೆಸುತ್ತಿದೆ. ಇದರ ಪರಿಣಾಮ ಎಂಬಂತೆ ಉಕ್ರೇನ್ ಕರಾವಳಿ ಭಾಗದ ನಗರಗಳು ಸಂಪೂರ್ಣ ನಲುಗಿ ಹೋಗುತ್ತಿವೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಆದಷ್ಟು ಬೇಗ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಬೇಕಾಗಿದೆ, ಈ ಮೂಲಕ ಶಾಂತಿ ಸ್ಥಾಪನೆ ಆಗಬೇಕಿದೆ ಎಂಬ ಆಗ್ರಹ ಕೇಳಿ ಬರುತ್ತಿದೆ. ಆದರೆ ಯಾವುದೇ ರೀತಿಯ ಪ್ರಗತಿ ಕಂಡು ಬಂದಿಲ್ಲ, ಹೀಗಾಗಿ ಮುಂದಿನ ದಿನಗಳಲ್ಲಿ ಉಕ್ರೇನ್ & ರಷ್ಯಾ ಯುದ್ಧ ತೀವ್ರತೆ ಇನ್ನಷ್ಟು ಹೆಚ್ಚಾಗುವ ಭಯವೂ ಸ್ಥಳೀಯರನ್ನ ಕಾಡುತ್ತಿದೆ.












Click it and Unblock the Notifications