ರಷ್ಯಾ ಹಾರಿಸಿದ್ದ 71 ಡ್ರೋನ್‌ಗಳನ್ನ ಹೊಡೆದು ಉರುಳಿಸಿದ ಉಕ್ರೇನ್?

ರಷ್ಯಾ ಕೊಡುತ್ತಿರುವ ಏಟಿಗೆ ತಿರುಗೇಟು ನೀಡಲು ಸಜ್ಜಾಗಿರುವ ಉಕ್ರೇನ್ ಮರುದಾಳಿ ಕೂಡ ಆರಂಭ ಮಾಡಿದೆ. ಹೀಗೆ ಇಬ್ಬರ ನಡುವೆ ನಡೆಯುತ್ತಿರುವ ತಿಕ್ಕಾಟದಲ್ಲಿ ಘನಘೋರ ದಾಳಿ ಆರಂಭವಾಗಿದೆ. ಅದರಲ್ಲೂ ರಷ್ಯಾ ತನ್ನ ಬಳಿ ಇರುವ ಅತ್ಯಾಧುನಿಕ ಅಸ್ತ್ರಗಳನ್ನು ಬಳಸಿ ಹೀಗೆ ದಾಳಿ ಮಾಡುತ್ತಿದ್ದರೆ, ಮತ್ತೊಂದು ಕಡೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯರು ನೀಡಿದ್ದ ಅಸ್ತ್ರಗಳನ್ನ ಬಳಸಿ ಮರುದಾಳಿ ನಡೆಸುತ್ತಿದೆ ಉಕ್ರೇನ್. ಅದೇ ರೀತಿ ಇದೀಗ ರಷ್ಯಾ ಹಾರಿಸಿದ್ದ 71 ಡ್ರೋನ್‌ಗಳನ್ನ ಹೊಡೆದು ಉರುಳಿಸಿರುವ ಉಕ್ರೇನ್ ತಿರುಗೇಟು ನೀಡಿ ನಗೆ ಬೀರಿದೆ!

ಯುದ್ಧ.. ಯುದ್ಧ.. ಯುದ್ದ.. ಹೀಗೆ ಜಗತ್ತಿನಾದ್ಯಂತ ಬರೀ ಯುದ್ಧದ ಭಯ ಆವರಿಸಿದೆ. ಅಂದಹಾಗೆ ಒಂದು ಕಡೆ ರಷ್ಯಾ ಮೇಲೆ ಉಕ್ರೇನ್ ದಾಳಿ ಮಾಡಲು ಯತ್ನಿಸಿದರೆ, ರಷ್ಯಾದ ಸೇನೆ ಕೂಡ ಉಕ್ರೇನ್ ವಿರುದ್ಧ ಘೋರ ದಾಳಿ ನಡೆಸ್ತಿದೆ. ಪರಿಣಾಮ ಇಬ್ಬರ ಜಗಳದಿಂದಾಗಿ ಲಕ್ಷ ಲಕ್ಷ ಅಮಾಯಕರ ಜೀವ ಹೋಗಿದೆ. ಲೆಕ್ಕವಿಲ್ಲದಷ್ಟು ಜನರು ಬೀದಿಗೆ ಬಿದ್ದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2022ರ ಫೆಬ್ರವರಿಯಲ್ಲಿ ಆರಂಭವಾದ ಯುದ್ಧ ಇನ್ನೇನು ಕೆಲವೇ ದಿನದಲ್ಲಿ 3 ವರ್ಷ ಪೂರೈಸಲಿದೆ. ಹೀಗಿದ್ದಾಗ ಇಬ್ಬರ ಮಧ್ಯೆ ಸಂಧಾನ ನಡೆಸುವ ಪ್ರಯತ್ನ ಕೂಡ ಸಕ್ಸಸ್ ಆಗುತ್ತಿಲ್ಲ. ಹೀಗಿದ್ದಾಗಲೇ ದಿಢೀರ್ ರಷ್ಯಾ ಸೇನೆ ಉಕ್ರೇನ್ ವಿರುದ್ಧ 80 ಡೋನ್‌ಗಳನ್ನ ಹಾರಿಸಿ, ಭೀಕರವಾದ ದಾಳಿಗೆ ಪ್ರಯತ್ನ ಮಾಡಿದೆ ಎಂದು ಆರೋಪಿಸಲಾಗಿದೆ.

Allegedly Russian Drones Destroyed By Ukraine Military

80 ಡ್ರೋನ್‌ಗಳಲ್ಲಿ 71 ಉಡೀಸ್!

ರಷ್ಯಾ & ಉಕ್ರೇನ್ ಯುದ್ಧ ಮನುಷ್ಯರಿಗೆ ಮತ್ತೊಂದು ಹಿಂಸಾಚಾರದ ಪಾಠ ಹೇಳಿ ಕೊಡುತ್ತಿದೆ. ಒಂದು ಯುದ್ಧ ಹೇಗೆಲ್ಲಾ ಮನುಷ್ಯನ ಭವಿಷ್ಯ ಹಾಳು ಮಾಡಬಹುದು ಅನ್ನೋದಕ್ಕೆ ಆಧುನಿಕ ಜಗತ್ತು ಮತ್ತೆ ಮತ್ತೆ ಸಾಕ್ಷಿಯಾಗುತ್ತಿದೆ. ಅದ್ರಲ್ಲೂ ಎರಡು ಮಹಾಯುದ್ಧ ಕಂಡರೂ ಮನುಷ್ಯ ಶಾಂತಿಯಿಂದ ಬದುಕದೆ ಹೀಗೆ ಮತ್ತೆ ಮತ್ತೆ ಯುದ್ಧಗಳನ್ನು ಮಾಡುತ್ತಿರುವುದು, ಇಡೀ ಭೂಮಿ ಭವಿಷ್ಯದ ಮೇಲೆ ಪ್ರಭಾವ ಬೀರುತ್ತಿರುವುದು ಸುಳ್ಳಲ್ಲ. ವಿಶ್ವಸಂಸ್ಥೆ ಕೂಡ ಉಕ್ರೇನ್ VS ರಷ್ಯಾ ಯುದ್ಧ ನಿಲ್ಲಿಸುವಲ್ಲಿ ಮತ್ತೆ ಮತ್ತೆ ವಿಫಲವಾಗ್ತಿದೆ ಎಂಬ ಆರೋಪ ಕೇಳಿಬರ್ತಿದೆ. ಹೀಗಿದ್ದಾಗಲೆ ರಷ್ಯಾ ಹಾರಿಸಿದ್ದ 80 ಡ್ರೋನ್‌ಗಳ ಪೈಕಿ, 71 ಡ್ರೋನ್ ಹೊಡೆದು ಬೀಳಿಸಿದ್ದೀವಿ ಎನ್ನುತ್ತಿದೆ ಉಕ್ರೇನ್ ಮಿಲಿಟರಿ.

ಉಕ್ರೇನ್ ಸೇನೆಗೆ ಕಾಡುತ್ತಿದೆ ಭಯ!

ಅಷ್ಟಕ್ಕೂ ಈಗ ಡ್ರೋನ್ ದಾಳಿ ನಡೆದಿರುವುದು ರಷ್ಯಾ ಆಕ್ರಮಿತ ಉಕ್ರೇನ್‌ ಪ್ರದೇಶದಿಂದ. ರಷ್ಯಾ ಸೇನೆ ಆಕ್ರಮಿಸಿಕೊಂಡು ಕೂತಿರುವ ಉಕ್ರೇನ್‌ ಪ್ರದೇಶ ಲುಹಾನ್‌ಸ್ಕ್‌ ಪ್ರಾಂತ್ಯದಿಂದ ಹೀಗೆ ದಾಳಿಗೆ ಪ್ರಯತ್ನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಉಕ್ರೇನ್ ಸೇನೆ ಮತ್ತಷ್ಟು ಅಲರ್ಟ್ ಆಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಯಾವ ಕ್ಷಣದಲ್ಲಿ ಬೇಕಾದರೂ ರಷ್ಯಾ ಸೇನೆ ಮತ್ತೊಮ್ಮೆ ದಾಳಿ ನಡೆಸುವ ಆತಂಕ ಉಕ್ರೇನ್ ಸೇನೆಗೆ ಕಾಡ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+