ಉಕ್ರೇನ್ ವಿರುದ್ಧ ರಷ್ಯಾ ಕೊತ, ಕೊತ... ಭೀಕರ ಕ್ಷಿಪಣಿ ದಾಳಿ ಆರಂಭ!
ಯುದ್ಧ.. ಯುದ್ಧ.. ಯುದ್ಧ.. ಹೀಗೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಭೀಕರತೆಗೆ ಬ್ರೇಕ್ ಬೀಳುವ ಯಾವುದೇ ರೀತಿಯ ಲಕ್ಷಣ ಕೂಡ ಈಗ ಕಾಣುತ್ತಿಲ್ಲ. ಯುದ್ಧ ನಿಲ್ಲಿಸುವ ಬದಲಾಗಿ ಎರಡೂ ದೇಶಗಳ ಸೇನೆ ನಡುವೆ ಡೆಡ್ಲಿ ಫೈಟಿಂಗ್ ಶುರುವಾಗಿದೆ. ಇದರ ಪರಿಣಾಮ ಅವರ ವಿರುದ್ಧ ಇವರು & ಇವರ ವಿರುದ್ಧ ಅವರು ಅಂತಾ ದಾಳಿ ಆರಂಭ ಮಾಡಿದ್ದಾರೆ. ಅದರಲ್ಲೂ ರಷ್ಯಾ ತನ್ನ ಉಗ್ರಾಣದಲ್ಲಿ ಅಡಗಿಸಿ ಇಟ್ಟಿದ್ದ ಅಷ್ಟೂ ಅಸ್ತ್ರಗಳನ್ನು ದಿಢೀರ್ ಹೊರಗೆ ತೆಗೆದು ಉಕ್ರೇನ್ ನಾಶ ಮಾಡಲು ಮುಂದಾಗುತ್ತಿದೆ.
ಹೇಗಾದರೂ ಮಾಡಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪ್ತಯತ್ನ ಮಾಡುತ್ತಲೇ ಬಂದಿದ್ದಾರೆ. ಅಮೆರಿಕ ಒತ್ತಡ ಹೇರುತ್ತಿರುವ ಸಮಯದಲ್ಲಿ ಉಕ್ರೇನ್ ಚಿಂತನೆ ನಡೆಸುತ್ತಿದ್ದು ಯುದ್ಧ ನಿಲ್ಲಿಸಿ ಸೈಲೆಂಟ್ ಆಗಬೇಕಾ? ಅಥವಾ ರಷ್ಯಾ ವಿರುದ್ಧ ಇನ್ನೂ ಯುದ್ಧ ಮಾಡಬೇಕಾ? ಎಂಬ ಗೊಂದಲದಲ್ಲಿ ಈಗಲೂ ಒದ್ದಾಡುತ್ತಿದೆ ಉಕ್ರೇನ್. ಈಗಿನ ಪರಿಸ್ಥಿತಿಯಲ್ಲಿ ಉಕ್ರೇನ್ ಕೂಡ ಕದನ ವಿರಾಮ ಘೋಷಣೆಗೆ ಒಪ್ಪಿಗೆ ಸೂಚಿಸುವುದು ಬಹುತೇಕ ಖಚಿತವಾಗಿದೆ. ಆದರೆ ಯುದ್ಧದ ಕಾರ್ಮೋಡ ಮಾತ್ರ ಕಣ್ಮರೆ ಆಗುತ್ತಿಲ್ಲ. ಇಷ್ಟೆಲ್ಲದರ ನಡುವೆ ಇಂದು ರಷ್ಯಾ ಸೇನೆ ಕ್ಷಿಪಣಿ & ಡ್ರೋನ್ ದಾಳಿ ನಡೆಸಿರುವ ಆರೋಪ ಕೇಳಿ ಬಂದಿದೆ.

ರಷ್ಯಾ ಸೇನೆ ಕೊತ... ಕೊತ...
ಹೌದು, ಉಕ್ರೇನ್ ಒಪ್ಪಿಕೊಳ್ಳದ ಪರಿಣಾಮ ಈಗಲೂ ರಷ್ಯಾ & ಉಕ್ರೇನ್ ನಡುವಿನ ಶಾಂತಿ ಒಪ್ಪಂದ ಮರೀಚಿಕೆಯಾಗಿದೆ. ಇಂತಹ ಸಮಯದಲ್ಲೇ ರಷ್ಯಾ ಸೇನೆಯಿಂದ ಡೆಡ್ಲಿ ಅಟ್ಯಾಕ್ ಕೂಡ ನಡೆದಿದ್ದು, ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಹಾಗೂ ಇತರ ಮೂಲಗಳಿಂದ ಉಕ್ರೇನ್‌ಗೆ ಆಘಾತ ನೀಡುತ್ತಿರುವ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಇದೀಗ ಉಕ್ರೆನ್ ಕೈಯಲ್ಲಿ ಉಳಿದಿರುವ ಪ್ರದೇಶಗಳ ಮೇಲೆ ಮತ್ತೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ಮಾಡಲಾಗಿದೆ ಎಂಬ ಆರೋಪ ಇದಾಗಿದೆ. ಈ ಮೂಲಕ ಮತ್ತೆ ಉಕ್ರೆನ್ ದೇಶದ ವಸತಿ ಪ್ರದೇಶಗಳು ಯುದ್ಧದ ಕಾರಣಕ್ಕೆ ನಲುಗಿ ಹೋಗುವಂತೆ ಆಗಿದೆ.
ಮತ್ತೊಂದು ಮಹಾಯುದ್ಧದ ಆತಂಕ ಶುರು...
ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಯಾರ ಮಾತನ್ನೂ ಕೇಳದ ಪರಿಸ್ಥಿತಿಗೆ ತಲುಪಿಬಿಟ್ಟಿವೆ. ಅಮೆರಿಕ ಕೂಡ ಎಲ್ಲಾ ರೀತಿಯ ಪ್ರಯತ್ನ ಮಾಡಿ ಈ ಯುದ್ಧವನ್ನ ನಿಲ್ಲಿಸಲು ಒದ್ದಾಡಿ ಹೋಗಿತ್ತು. ಇಷ್ಟಾದರೂ ಉಕ್ರೇನ್, ರಷ್ಯಾ ಯುದ್ಧ ನಿಲ್ಲಿಸಲು ಅಮೆರಿಕ ಕೈಯಲ್ಲಿ ಕೂಡ ಈಗ ಆಗಿಲ್ಲ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದ್ದು ವಾತಾವರಣ ತಿಳಿಗೊಳಿಸಿ ಯುದ್ಧ ಕಂಟ್ರೋಲ್ ಮಾಡಲು ನಡೆಸುತ್ತಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ. ಇದು ಈಗ ಇನ್ನೊಂದು ಮಹಾಯುದ್ಧದ ಆತಂಕ ಮೂಡಿಸಿದೆ. ಇದರ ಜೊತೆಗೆ ಉಕ್ರೇನ್ ಪ್ರಜೆಗಳಿಗೆ ನಾನಾ ರೀತಿಯ ಸಮಸ್ಯೆಗಳನ್ನು ಕೂಡ ಸೃಷ್ಟಿಸುತ್ತಿದೆ ಈ ಭಯಾನಕ ಯುದ್ಧ.












Click it and Unblock the Notifications