‘ಬ್ರಿಕ್ಸ್’ ಸಮ್ಮೇಳನ ನಡೆಯುವಾಗಲೇ ರಷ್ಯಾಗೆ ಸೈಬರ್ ಕಳ್ಳರ ಕಾಟ!

ರಷ್ಯಾ ಈಗ ಭಾರತದ ಜೊತೆಗೆ ಸೇರಿ, ಜಾಗತಿಕ ಮಟ್ಟದಲ್ಲಿ ಅಮೆರಿಕ ಬುಡ ಅಲುಗಾಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಅಮೆರಿಕ ಹಿಡಿತ ತಪ್ಪಿಸಿ, ಡಾಲರ್ ವಿರುದ್ಧ ಪರ್ಯಾಯ ಹಣವನ್ನು ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ರಷ್ಯಾ ಇದೀಗ 'ಬ್ರಿಕ್ಸ್' ಸಮ್ಮೇಳನದ ವೇದಿಕೆಯನ್ನ ಬಳಸಿಕೊಂಡು ಬೇರೆಯದ್ದೇ ಗೇಮ್ ಶುರು ಮಾಡಿದೆ. ಆದರೆ ಇದೇ ವೇಳೆ ರಷ್ಯಾಗೆ ದೊಡ್ಡ ಆಘಾತ ಎದುರಾಗಿದ್ದು, ಸೈಬರ್ ಕಳ್ಳರ ಕಾಟಕ್ಕೆ ರಷ್ಯಾ ಬೆಚ್ಚಿಬಿದ್ದಿದೆ.

ಅಮೆರಿಕ & ರಷ್ಯಾ ನಡುವೆ ದೊಡ್ಡ ತಿಕ್ಕಾಟ ಇದ್ದು, ಸುಮಾರು ಮುಕ್ಕಾಲು ಶತಮಾನ ಇಬ್ಬರ ಮಧ್ಯೆ ಬರೀ ಜಗಳಗಳೇ ನಡೆದಿವೆ. ಜಗತ್ತು ಎರಡು ಓಳಾಗಿ ಹೋಗಿದ್ದು, ಒಂದು ಕಡೆ ಅಮೆರಿಕ ನಿಂತಿದ್ದರೆ ಇನ್ನೊಂದು ಕಡೆ ರಷ್ಯಾ ಇದೆ. ಇದೀಗ 'ಬ್ರಿಕ್ಸ್' ಶೃಂಗಸಭೆ ಮೂಲಕ ರಷ್ಯಾ ತನ್ನ ಬಲ ಪ್ರದರ್ಶನ ಕೂಡ ಮಾಡುತ್ತಿದೆ. ಇದು ಅಮೆರಿಕ ಸೇರಿದಂತೆ ರಷ್ಯಾ ದೇಶದ ಶತ್ರುಗಳಿಗೆ ಭಯ ತರಿಸಿದೆ. ಹೀಗಾಗಿ ಅಮೆರಿಕದ ನಂಬರ್ 1 ಪಟ್ಟ ಕೂಡ ಅಲ್ಲಾಡಿ ಹೋಗಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ ಹೀಗೆ ಇನ್ನಷ್ಟು ಕಂಟಕಕ್ಕೆ ಸಿಲುಕುವ ಮುನ್ಸೂಚನೆ ಸಿಗುತ್ತಿದೆ. ಇಂತಹ ಸಮಯದಲ್ಲೇ, ರಷ್ಯಾಗೆ ಸೈಬರ್ ಕಳ್ಳರು ಏನು ಮಾಡಿದ್ದಾರೆ ನೋಡಿ.

Allegedly Russia Faced Cyber Attack By Foreign Hackers While BRICS Summit Is Going On

ಸೈಬರ್ ದಾಳಿ ನಡೆದಿದ್ದು ಹೇಗೆ?

ರಷ್ಯಾದ ಮಧ್ಯಭಾಗದ ಪ್ರಮುಖ ನಗರ ಕಜಾನ್ 'ಬ್ರಿಕ್ಸ್' ಶೃಂಗಸಭೆಗೆ ಸಾಕ್ಷಿಯಾಗಿದ್ದು, ಈ ಜಾಗದ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಹೀಗಿದ್ದಾಗಲೇ ರಷ್ಯಾದ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನ ಮೇಲೆ, ಸೈಬರ್ ಕಳ್ಳರಿಂದ ದೊಡ್ಡ ದಾಳಿ ನಡೆದಿದೆ. ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾರಿಯಾ ಝಕರೋವಾ ಅವರು ಈ ವಿಷಯವನ್ನು ಇದೀಗ ಖಚಿತಪಡಿಸಿದ್ದಾರೆ. ಅಂದಹಾಗೆ ನಿನ್ನೆ ಅಂದ್ರೆ ಬುಧವಾರ ರಷ್ಯಾದ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನ ಮೇಲೆ ಈ ರೀತಿಯ ಭಯಾನಕ ದಾಳಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ವಿದೇಶಗಳಿಂದ ರಷ್ಯಾದಲ್ಲಿ ತಲ್ಲಣ?

ರಷ್ಯಾ ವಿರುದ್ಧ ಈ ರೀತಿಯಾಗಿ ಪದೇ, ಪದೇ ಸೈಬರ್ ದಾಳಿಗಳು ನಡೆಯುತ್ತಿವೆ. ಆದರೆ ಈಗ ನಡೆದ ದಾಳಿ ಅತ್ಯಂತ ದೊಡ್ಡದು ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೂಡ ಇದೀಗ ರಷ್ಯಾ ಮಾಹಿತಿ ನೀಡಿದ್ದು, ನಮ್ಮ ವೆಬ್‌ಸೈಟ್ ಮೇಲೆ ಸೈಬರ್ ದಾಳಿ ನಡೆಯುತ್ತವೆ ಇದು ವಿದೇಶಗಳಿಂದ ನಡೆಯುತ್ತದೆ.

ಆದರೆ ಈ ಬಾರಿ ಭಾರಿ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಅದ್ರಲ್ಲೂ ಈಗ ರಷ್ಯಾದ ಮಧ್ಯಭಾಗದ ಪ್ರಮುಖ ನಗರ ಕಜಾನ್‌ನಲ್ಲಿ 'ಬ್ರಿಕ್ಸ್' ಶೃಂಗಸಭೆ ನಡೆಯುವ ಸಮಯಕ್ಕೆ ಈ ರೀತಿ ದಾಳಿ ನಡೆದಿದೆ, ಹೀಗಾಗಿ ಈ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ರಷ್ಯಾದ ಪ್ರಮುಖ ನಗರ ಕಜಾನ್ ಪ್ರದೇಶದಲ್ಲಿ 'ಬ್ರಿಕ್ಸ್' ಶೃಂಗಸಭೆ ಅಕ್ಟೋಬರ್ 22 ರಿಂದ 24 ವರೆಗೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+