ಉತ್ತರ ಕೊರಿಯಾ ಕೊಟ್ಟ ಅಸ್ತ್ರ ಬಳಸಿದೆಯಾ ರಷ್ಯಾ?
ರಷ್ಯಾ ಮತ್ತು ಉಕ್ರೇನ್ ಯುದ್ಧ ಕೈಮೀರಿ ಹೋಗಿದ್ದು, ಅಮೆರಿಕ ವಿರುದ್ಧದ ಸಿಟ್ಟಿಗೆ ಈಗ ರಷ್ಯಾ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ ಎಂಬ ಆರೋಪ ಇದೆ. ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲೇ, ರಷ್ಯಾ ವಿರುದ್ಧ ಈಗ ಗಂಭೀರ ಆರೋಪ ಕೇಳಿಬಂದಿದೆ. ಏನಪ್ಪಾ ಅಂದ್ರೆ ಉತ್ತರ ಕೊರಿಯಾ ಕೊಟ್ಟ ಅಸ್ತ್ರವನ್ನು ಈಗ ರಷ್ಯಾ ಬಳಸಿಕೊಂಡು ಉಕ್ರೇನ್ ವಿರುದ್ಧ ದಾಳಿ ಮಾಡಿದೆಯಂತೆ.
ಈಗಾಗಲೇ ಉತ್ತರ ಕೊರಿಯಾ ಸಾವಿರ ಸಾವಿರ ಕಂಟೇನರ್ ಶಸ್ತ್ರಾಸ್ತ್ರವನ್ನು ರಷ್ಯಾಗೆ ಗಿಫ್ಟ್ ಆಗಿ ಕೊಡುತ್ತಿದೆ, ಎಂಬ ಗಂಭೀರ ಆರೋಪವನ್ನು ಮಾಡಿತ್ತು ಅಮೆರಿಕ. ಈ ಆರೋಪದ ಪ್ರಕಾರ, ಕೆಲವು ತಿಂಗಳ ಹಿಂದೆಯೇ ರಷ್ಯಾಗೆ ಉತ್ತರ ಕೊರಿಯಾದಿಂದ ವೆಪನ್ಸ್ ಕಳುಹಿಸಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಉತ್ತರ ಕೊರಿಯಾ ದೇಶದ ಗಡಿಯು ರಷ್ಯಾ ಜೊತೆಯಲ್ಲಿ ಹೊಂದಿಕೊಂಡಿದೆ. ಹೀಗಾಗಿ ಅಲ್ಲಿಂದ ಉತ್ತರ ಕೊರಿಯಾ 1 ಸಾವಿರ ಕಂಟೇನರ್ ಶಸ್ತ್ರಾಸ್ತ್ರವನ್ನ ರಷ್ಯಾ ಸೇನೆಗೆ ಕಳುಹಿಸಿ ಕೊಟ್ಟಿರಬಹುದು ಎನ್ನಲಾಗಿತ್ತು. ಈಗ ನೋಡಿದರೆ ಉಕ್ರೇನ್ ವಿರುದ್ಧ ಭೀಕರ ದಾಳಿ ಆಗಿದೆ.

ರಷ್ಯಾ ರಿವೇಂಜ್ ಹೇಗಿದೆ ಗೊತ್ತೆ?
ಈಗಿರುವ ಮಾಹಿತಿ ಪ್ರಕಾರ, ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಸೇನೆ ಉತ್ತರ ಕೊರಿಯಾ ಕೊಟ್ಟಿದ್ದ ಕ್ಷಿಪಣಿ ಬಳಸಿದೆ ಎಂದು ಆರೋಪ ಮಾಡಲಾಗಿದೆ. ಈ ದಾಳಿಯ ವೇಳೆ ಉಕ್ರೇನ್‌ನ 24 ಪ್ರಜೆಗಳು ಮೃತಪಟ್ಟು, 100ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಅಂತಲೂ ಈಗ ಗಂಭೀರ ಆರೋಪ ಮಾಡಿದೆ ಉಕ್ರೇನ್. ಈ ದಾಳಿಯಲ್ಲಿ ಹ್ವಾಸಾಂಗ್-11 ಖಂಡಾಂತರ ಕ್ಷಿಪಣಿ ಬಳಕೆ ಮಾಡಲಾಗಿದೆಯಂತೆ.
3ನೇ ಮಹಾಯುದ್ಧದ ಆತಂಕ ಶುರು?
ಉತ್ತರ ಕೊರಿಯಾ ರಷ್ಯಾಗೆ ಖಂಡಾಂತರ ಕ್ಷಿಪಣಿ & ಉಡಾವಣಾ ವಾಹನ ಕಳಿಸುತ್ತಿದ್ದು. ರಷ್ಯಾಗೆ ಉತ್ತರ ಕೊರಿಯಾ ತನ್ನ ಬೆಂಬಲ ಹೆಚ್ಚಿಸಿರುವುದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಹೀಗೆ ಅಮೆರಿಕದ ಸಿಟ್ಟನ್ನೂ ಲೆಕ್ಕ ಮಾಡದೆ ರಷ್ಯಾ ಪರ ನಿಂತಿರುವ ಉತ್ತರ ಕೊರಿಯಾ, ಇದೀಗ ಉಕ್ರೇನ್ ವಿರುದ್ಧ ದಾಳಿ ನಡೆಸಲು ರಷ್ಯಾಗೆ ಏನು ಬೇಕೋ ಅದನ್ನ ಕೊಡುತ್ತಿದೆ. ಹೀಗಾಗಿ ಯುದ್ಧ ಮತ್ತಷ್ಟು ಕೈಮೀರಿ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಇದು 3ನೇ ಮಹಾಯುದ್ಧಕ್ಕೆ ಕೂಡ ತಿರುಗುವ ಆತಂಕ ಎದುರಾಗಿದೆ.

ರಷ್ಯಾ ಅಧ್ಯಕ್ಷ ಪುಟಿನ್ 2022ರ ಫೆಬ್ರವರಿ ತಿಂಗಳ ಕೊನೇ ವಾರದಲ್ಲಿ ಉಕ್ರೇನ್ ವಿರುದ್ಧ, ಯುದ್ಧ ಘೋಷಣೆ ಮಾಡಿದ್ದರು. ಸೇನಾಧಿಕಾರಿಗಳ ಜೊತೆಯಲ್ಲಿ ಮಹತ್ವದ ಮಾತುಕತೆ ನಡೆಸಿ, ಕೆಲವೇ ಕ್ಷಣದಲ್ಲಿ ಯುದ್ಧ ಘೋಷಣೆ ಮಾಡಿದ್ದರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಈ ಮೂಲಕ, ಶತ್ರುವಿನ ಸಾವಿಗೆ ಪಣತೊಟ್ಟರು ಪುಟಿನ್. ನೋಡ ನೋಡುತ್ತಲೇ ಯುದ್ಧ ಕೈಮೀರುತ್ತಿದ್ದು, ಈಗಾಗಲೇ ಉಕ್ರೇನ್ ಜನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಈ ನಡುವೆ ಸಾವಿನ ಸಂಖ್ಯೆ ಕೂಡ ಜೋರಾಗಿ ಏರಿಕೆ ಆಗುತ್ತಿದ್ದು, ಪುಟಿನ್ ಇನ್ನೂ ಹಲವಾರು ವರ್ಷಗಳ ಕಾಲ ಯುದ್ಧ ಮುಂದುವರಿಸುವ ಸಾಧ್ಯತೆ ಇದೆ.












Click it and Unblock the Notifications