Ukraine War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ, 30ಕ್ಕೂ ಹೆಚ್ಚು ಜನರು ಬಲಿ
ರಕ್ತಪಾತ ಮುಂದುವರಿದು, ಉಕ್ರೇನ್ ರಕ್ತದ ಮಡುವಿನಲ್ಲಿ ಒದ್ದಾಡಿ ಹೋಗುತ್ತಿದೆ. ಸಾಮಾನ್ಯ ಜನರು ಯಾರದ್ದೋ ತಪ್ಪಿಗೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ರಷ್ಯಾ & ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ಘೋರ ಸ್ವರೂಪ ಪಡೆಯುತ್ತಿದ್ದು, ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿ ಉಕ್ರೇನ್ ಪ್ರಜೆಗಳ ಎದೆಯಲ್ಲಿ ಇದೀಗ ನಡುಕ ಸೃಷ್ಟಿ ಮಾಡಿದೆ. ಈ ಸಮಯದಲ್ಲೇ, ಉಕ್ರೇನ್ ದೇಶದ ಪ್ರಮುಖ ನಗರದ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ 30ಕ್ಕೂ ಹೆಚ್ಚು ಜನರು ಬಲಿಯಾಗಿರುವ ಆರೋಪ ಕೇಳಿ ಬಂದಿದೆ.
ಅಮೆರಿಕ ಕೈಕೊಟ್ಟ ನಂತರ ಉಕ್ರೇನ್ ಸೇನೆಯು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ. ಉಕ್ರೇನ್ ಕೈಯಿಂದ ಈಗಾಗಲೇ ಎಲ್ಲವನ್ನೂ ಕಿತ್ತುಕೊಂಡಿರುವ ರಷ್ಯಾ ಸೇನೆ ಬಾಕಿ ಉಳಿದ ಪ್ರದೇಶಗಳ ಮೇಲೂ ಸ್ಕೆಚ್ ಹಾಕಿ ಕಾಯುತ್ತಿದೆ. ಉಕ್ರೇನ್‌ನ ಗಡಿ ಭಾಗದಲ್ಲಿ ಇರುವ ಎಲ್ಲಾ ಹಳ್ಳಿಗಳನ್ನು ಕಿತ್ತುಕೊಳ್ಳುತ್ತಿರುವ ರಷ್ಯಾ, ಇದೀಗ ಉಕ್ರೇನ್ ರಾಜಧಾನಿ ಕೀವ್‌ಗೆ ಕೂಡ ಗುರಿ ಇಟ್ಟಿದೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂಬುದು ಉಕ್ರೇನ್‌ನ ಒತ್ತಾಯವೂ ಆಗಿತ್ತು. ಇಂತಹ ಸಮಯದಲ್ಲೇ ಉಕ್ರೇನ್ ದೇಶದ ಪ್ರಮುಖ ನಗರದ ಮೇಲೆ ಭೀಕರ ದಾಳಿ ನಡೆಸಿರುವ ರಷ್ಯಾ ಸೇನೆ, 30ಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಿರುವ ಆರೋಪ ಇದೀಗ ಸಂಚಲನ ಸೃಷ್ಟಿ ಮಾಡಿದೆ.

ಭೀಕರ ಘಟನೆ ಸಂಭವಿಸಿದ್ದು ಹೇಗೆ?
ಉಕ್ರೇನ್ ದೇಶದ ಪ್ರಮುಖ ನಗರ ಸುಮಿ ಮೇಲೆ ರಷ್ಯಾ ಸೇನೆಯಿಂದ ಭೀಕರ ದಾಳಿ ನಡೆದಿರುವ ಆರೋಪ ಇದಾಗಿದೆ. ರಷ್ಯಾ ಕ್ಷಿಪಣಿ ದಾಳಿಯನ್ನ ನಡೆಸಿದ್ದು, ದಾಳಿ ಹಿನ್ನೆಲೆಯಲ್ಲಿ ಕನಿಷ್ಠ 30 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಮ್ ಸಂಡೆ ಆಚರಿಸಲು ಜನಗಳು ಇಲ್ಲಿ ಸೇರಿದ್ದರು ಎನ್ನಲಾಗಿದೆ. ಆದರೆ ಇದೇ ಸಮಯದಲ್ಲಿ ದಾಳಿಯನ್ನ ನಡೆಸಲಾಗಿತ್ತು, ಈ ಘಟನೆಯು ಉಕ್ರೇನ್ ಕಾಲಮಾನ ಭಾನುವಾರ ಬೆಳಗ್ಗೆ 10.15ರ ಸುಮಾರಿಗೆ ನಡೆದಿದೆ. ಜನರಿದ್ದ ಜಾಗಕ್ಕೆ ಬಂದು 2 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಬಿದ್ದಿದ್ದು, 30ಕ್ಕೂ ಹೆಚ್ಚು ಜನ ಬಲಿಯಾಗಿರುವ ಆರೋಪ ಮಾಡಲಾಗಿದೆ.
ಯುದ್ಧ ನಿಲ್ಲಿಸುವಂತೆ ಜಗತ್ತಿನಾದ್ಯಂತ ಆಗ್ರಹ
ರಷ್ಯಾ & ಉಕ್ರೇನ್ ಯುದ್ಧದಲ್ಲಿ ದಿನಕ್ಕೊಂದು ಕಾಂಟ್ರವರ್ಸಿ ಕ್ರಿಯೇಟ್ ಆಗುತ್ತಿದ್ದು, ಇಬ್ಬರ ಜಗಳ ಜಗತ್ತಿನ ನೆಮ್ಮದಿ ಹಾಳು ಮಾಡುತ್ತಿರುವ ಆರೋಪ ಕೇಳಿ ಬರುತ್ತಲೇ ಇದೆ. ಮತ್ತೊಂದು ಕಡೆ ಲಕ್ಷಾಂತರ ಜನರ ಜೀವ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬಲಿಯಾಗಿದ್ದು, ಆಕ್ರೋಶ ಕೂಡ ಮೊಳಗಿದೆ. ಇಷ್ಟೆಲ್ಲದರ ನಡುವೆ ಇದೀಗ ರಷ್ಯಾ ಸೇನೆಯಿಂದ ಭೀಕರ ದಾಳಿಯನ್ನ ನಡೆಸಿದ್ದು, ಒಂದೇ ನಗರದಲ್ಲಿ 30ಕ್ಕೂ ಹೆಚ್ಚು ಜನ ರಷ್ಯಾ ದಾಳಿಗೆ ಬಲಿಯಾಗಿರುವುದು ಭಯದ ಜೊತೆ ಆಕ್ರೋಶ ಮೊಳಗುವಂತೆ ಮಾಡಿದೆ. ಹೀಗಾಗಿ ಆದಷ್ಟು ಬೇಗ ಈ ಯುದ್ಧ ನಿಲ್ಲಿಸಬೇಕು ಎಂಬ ಒತ್ತಾಯ & ಆಗ್ರಹ ಶುರುವಾಗಿದೆ.












Click it and Unblock the Notifications