ಇಸ್ರೇಲ್ ನಡೆಸಿದ ದಾಳಿಗೆ 275 ಮಂದಿ ಸಾವು? ಲೆಬನಾನ್ ಪರಿಸ್ಥಿತಿ ಛಿದ್ರ ಛಿದ್ರ!

ಇಸ್ರೇಲ್ & ಲೆಬನಾನ್ ಜಗಳ ಇದೀಗ ಬಹುತೇಕ ಭೀಕರ ಯುದ್ಧಕ್ಕೆ ತಿರುಗಿದಂತೆ ಕಾಣುತ್ತಿದೆ. ಯಾಕಂದ್ರೆ ತನ್ನ ಮೇಲೆ ಲೆಬನಾನ್ 100ಕ್ಕೂ ಹೆಚ್ಚು ರಾಕೆಟ್‌ಗಳ ಮೂಲಕ ದಾಳಿ ಮಾಡಿದೆ ಎಂದು ಆರೋಪ ಮಾಡಿದ ನಂತರ, ದಿಢೀರ್ ರೊಚ್ಚಿಗೆದ್ದಿರುವ ಇಸ್ರೇಲ್ ಇದೀಗ ಶತ್ರುವಿನ ವಿರುದ್ಧ ಅಂದ್ರೆ ಲೆಬನಾನ್ ಮೇಲೆ ಭೀಕರ ವಾಯುದಾಳಿ ಆರಂಭ ಮಾಡಿದೆ. ಹೀಗೆ ಇಸ್ರೇಲ್ ಸೇನೆ ನಡೆಸಿದ ಭೀಕರ ದಾಳಿಯ ಪರಿಣಾಮ ಸುಮಾರು 275 ಜನರು ಮೃತಪಟ್ಟಿದ್ದು, ಇದೇ ದಾಳಿಗೆ ಸಾವಿರಾರು ಲೆಬನಾನ್ ನಾಗರಿಕರು ಗಾಯಗೊಂಡಿದ್ದಾರೆ ಅಂತಾ ಆರೋಪಿಸಲಾಗಿದೆ.

ಇಸ್ರೇಲ್ ಇದೀಗ ರೊಚ್ಚಿಗೆದ್ದು ತನ್ನ ಮೇಲೆ ದಾಳಿ ಮಾಡಿದವರನ್ನು ಬಲಿ ಹಾಕಲು ಭೀಕರ ಹೆಜ್ಜೆ ಇಟ್ಟಿದೆ. ಅದ್ರಲ್ಲೂ ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಗೆ 275ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಗಂಭೀರ ಆರೋಪವನ್ನು ಮಾಡಿದೆ. ಇನ್ನು ಮೃತಪಟ್ಟ ಜನರ ಪೈಕಿ 21 ಮಕ್ಕಳು ಮತ್ತು 39 ಮಹಿಳೆಯರು ಸೇರಿದ್ದಾರೆಂಬ ಆರೋಪ ಮಾಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಪೇಜರ್ಸ್ & ವಾಕಿಟಾಕಿ ಕೂಡ ಬ್ಲಾಸ್ಟ್ ಆಗಿದ್ದವು. ಆಗ ಕೂಡ ಹತ್ತಾರು ಜನ ಮೃತಪಟ್ಟಿದ್ದು ಸಾವಿರಾರು ಜನ ಈಗಲೂ ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಭೀಕರ ದಾಳಿ ನಡೆಸಿದೆ ಇಸ್ರೇಲ್ ಸೇನೆ.

Allegedly More Than 275 Died In Lebanon After Israel Airstrike

300ಕ್ಕೂ ಹೆಚ್ಚು ಸ್ಥಳಗಳೇ ಟಾರ್ಗೆಟ್?

ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಇದೀಗ ರೊಚ್ಚಿಗೆದ್ದಿರುವ ಇಸ್ರೇಲ್ ಭೀಕರ ದಾಳಿ ನಡೆಸುತ್ತಿದೆ. ಇದೇ ಕಾರಣಕ್ಕೆ ಹಿಜ್ಬುಲ್ಲಾ ಬಂಡುಕೋರರು ಅಡಗಿರುವ ಜಾಗಗಳನ್ನು ಬಿಟ್ಟು ದೂರ ಹೋಗುವಂತೆ ಸಾಮಾನ್ಯ ಜನರಿಗೂ ಸೂಚನೆ ನೀಡಿದೆ ಇಸ್ರೇಲ್ ಮಿಲಿಟರಿ. ಇದೇ ಕಾರಣಕ್ಕೆ ಈ ಪ್ರದೇಶದಲ್ಲಿ ಇರುವ ಜನರು ತಕ್ಷಣ ತಮ್ಮ ಮನೆಗಳನ್ನು ತೊರೆಯಬೇಕು ಎಂಬ ಸೂಚನೆ ನೀಡಿದ್ದಾರೆ, ಇಸ್ರೇಲ್‌ ಸೇನೆ ವಕ್ತಾರ ಅಡ್ಮಿರಲ್ ಜನರಲ್ ಡೇನಿಯಲ್‌ ಹಗರಿ. ಇಸ್ರೇಲ್ ಈವರೆಗೂ 300ಕ್ಕೂ ಹೆಚ್ಚು ಸ್ಥಳಗಳನ್ನ ಟಾರ್ಗೆಟ್ ಮಾಡಿ ದಾಳಿ ಮಾಡಿದೆ ಎಂಬ ಆರೋಪ ಮಾಡಲಾಗಿದೆ. ಈಗಾಗಲೇ ದಕ್ಷಿಣ ಲೆಬನಾನ್‌ನ ಪ್ರದೇಶಗಳಿಂದ ಸಾವಿರಾರು ಜನರು ತಮ್ಮ ಕುಟುಂಬಗಳ ಸಮೇತ ಮನೆ ಖಾಲಿ ಮಾಡಿ ಹೋಗಿದ್ದಾರೆ.

3,000ಕ್ಕೂ ಹೆಚ್ಚು ಜನರು ಗಂಭೀರ

ಕಳೆದ ಮಂಗಳವಾರ & ಬುಧವಾರ, ಲೆಬನಾನ್‌ & ಸಿರಿಯಾದಲ್ಲಿ ಪೇಜರ್ಸ್ ಸ್ಫೋಟ ನಡೆದಿತ್ತು. ಆಗ 39 ಜನ ಬಲಿಯಾಗಿ, 3 ಸಾವಿರಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಮಧ್ಯಪ್ರಾಚ್ಯದ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು ಯಾವ ಕ್ಷಣದಲ್ಲಿ ಏನಾಗುತ್ತದೋ? ಎನ್ನುತ್ತಾ ಅಲ್ಲಿನ ಜನರು ದಿನ ದೂಡುತ್ತಿದ್ದಾರೆ. ಅದರಲ್ಲೂ ಲೆಬನಾನ್‌ & ಸಿರಿಯಾ ದೇಶದಲ್ಲಿ ಕೆಲವು ದಿನಗಳ ಹಿಂದಷ್ಟೇ ಪೇಜರ್ಸ್ ಮತ್ತು ವಾಕಿಟಾಕಿಗಳು ಬ್ಲಾಸ್ಟ್ ಆಗಿದ್ದವು. ಈ ಘಟನೆಯ ಕಾರಣ ಜನರು ನರಳುತ್ತಿರುವ ಸಮಯದಲ್ಲೇ ಇದೀಗ ಇಸ್ರೇಲ್ ಮತ್ತೊಂದು ರೌಂಡ್ ನೇರ ವಾಯು ದಾಳಿಗೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+