Israel & Lebanon: ಇಸ್ರೇಲ್ & ಹಿಜ್ಬುಲ್ಲಾ ನಡುವೆ ಕಿರಿಕ್ ಮತ್ತೆ ಶುರು!
ಇಸ್ರೇಲ್ & ಲೆಬನಾನ್ ನಡುವೆ ಶಾಂತಿ ಮಾತುಕತೆ ನಡೆದು, ಎರಡೂ ದೇಶಗಳು ಯುದ್ಧದ ಕಚ್ಚಾಟ ನಿಲ್ಲಿಸಿ ಶಾಂತಿಯುತ ಜೀವನ ನಡೆಸಲು ಶುರು ಮಾಡಿದ್ದವು. ಹೀಗೆ ಎಲ್ಲಾ ಕೂಲ್ ಕೂಲ್ ಆಗುತ್ತಿದೆ ಅಂತಾ ಅಂದುಕೊಳ್ಳುವ ಸಮಯದಲ್ಲೇ, ಮತ್ತೆ ಬಡಿದಾಟ ಭುಗಿಲೆದ್ದಿದೆ. ಒಂದು ಕಡೆ ಶಾಂತಿ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲಿಸಿ ಇನ್ನು ಕೆಲವೇ ಕೆಲವು ದಿನಗಳು ಕಳೆದಿವೆ ಅಷ್ಟೇ, ಅಷ್ಟರಲ್ಲೇ ಮತ್ತೆ ಇಬ್ಬರ ನಡುವೆ ಮತ್ತೊಂದು ರೌಂಡ್ ಫೈಟಿಂಗ್ ಶುರು ಆಗಿದೆ!
ಇಸ್ರೇಲ್ ವಿರುದ್ಧ ದಾಳಿ ನಡೆಸಿದ್ದರು ಎಂಬ ಕಾರಣಕ್ಕೆ ಲೆಬನಾನ್ ನೆಲದ ಮೇಲೆ ಇಸ್ರೇಲ್ ಸೇನೆ ಅಟ್ಯಾಕ್ ಮಾಡಿ ಹಿಜ್ಬುಲ್ಲಾ ನಾಯಕರಿಗೆ ಆಘಾತ ನೀಡಿತ್ತು. ಹೀಗೆ ಇಬ್ಬರ ನಡುವೆ ಕಳೆದ ಕೆಲವು ತಿಂಗಳಿಂದ ಘೋರ ಯುದ್ಧ ನಡೆದಿತ್ತು. ಹೀಗೆ ಯುದ್ಧ & ತಿಕ್ಕಾಟವು ನಡೆದ ನಂತರ ಜಾಗತಿಕ ಮಟ್ಟದಲ್ಲಿ ಕೂಡ ಈ ಬಗ್ಗೆ ಚರ್ಚೆ ಜೋರಾಗಿತ್ತು. ಅಲ್ಲದೆ ಮತ್ತೊಂದು ಮಹಾಯುದ್ಧಕ್ಕೆ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೆ ಮುನ್ನುಡಿ ಬರೆಯಲಾಗುತ್ತಾ? ಎಂಬ ಭಯ ಕೂಡ ಆವರಿಸಿತ್ತು. ಹೀಗಿದ್ದಾಗಲೇ, ಇಸ್ರೇಲ್ ಸೇನೆ & ಲೆಬನಾನ್ ನಡುವೆ ಯುದ್ಧ ದಿಢೀರ್ ನಿಂತಿತ್ತು.

ಲೆಬನಾನ್ ನೆಲದಲ್ಲಿ ನಿಂತು ಹಿಜ್ಬುಲ್ಲಾ...
ಇಸ್ರೇಲ್ ಸೇನೆ & ಲೆಬನಾನ್ ನಡುವೆ ಯುದ್ಧ ಎರಡು ದಿನಗಳ ಹಿಂದಷ್ಟೇ ನಿಂತ ನೆಮ್ಮದಿ ಜನರಿಗೆ ಇತ್ತು. ಆದರೆ ಆ ನೆಮ್ಮದಿ ಇದೀಗ ಹಾಳಾಗಿ ಹೋಗಿದ್ದು, ಮತ್ತೆ ಇಬ್ಬರ ನಡುವೆಯೇ ಇದೀಗ ಬಡಿದಾಟ ಜೋರಾಗಿದೆ. ಲೆಬನಾನ್ ನೆಲದಲ್ಲಿ ನಿಂತು ಹಿಜ್ಬುಲ್ಲಾ ದಾಳಿಯನ್ನ ನಡೆಸಿ, ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಲಾಗಿದೆ.
ಹೀಗಾಗಿ, ಇದೀಗ ದೊಡ್ಡ ತಿಕ್ಕಾಟ ಆರಂಭವಾಗಿದೆ. ತನ್ನ ಮೇಲೆ ಮತ್ತೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಹಿಜ್ಬುಲ್ಲಾ ಮೇಲೆ ದಾಳಿ ಮಾಡಲು ಮತ್ತೆ ಇಸ್ರೇಲ್ ಸೇನೆ ಲೆಬನಾನ್ ನೆಲಕ್ಕೆ ನುಗ್ಗಿದೆ ಎಂಬ ಆರೋಪ ಮಾಡಲಾಗಿದೆ. ಅಲ್ಲದೆ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ, ಹಿಂಸಾಚಾರ ಹೆಚ್ಚಾಗುವ ಭಯ ಕಾಡುತ್ತಿದೆ.












Click it and Unblock the Notifications