Bomb Blast: ಪಾಕಿಸ್ತಾನ ಬಾಂಬ್ ಸ್ಫೋಟದ ಹಿಂದೆ ಐಸಿಸ್ ಕೈವಾಡ!
ಪೇಶಾವರ: ನಿನ್ನೆ ಪಾಕಿಸ್ತಾನದಲ್ಲಿ ಸಂಭವಿಸಿದ ಭೀಕರ ಸ್ಫೋಟದ ಹಿಂದೆ ಐಸಿಸ್ ಉಗ್ರರ ಕೈವಾಡ ಬಯಲಾಗಿದೆ. ಘಟನೆಯಲ್ಲಿ 44 ಜನರು ಮೃತಪಟ್ಟಿದ್ದರು. ರಾಜಕೀಯ ಪಕ್ಷದ ಸಮಾವೇಶದಲ್ಲಿ ನಡೆದ ಆತ್ಮಾಹುತಿ ದಾಳಿ ಹಿಂದೆ ಉಗ್ರ ಸಂಘಟನೆ ಐಸಿಸ್ ಕೈವಾಡವಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಮೂಲಕ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಬಾಂಬ್ ಬ್ಲಾಸ್ಟ್ ಹಿಂದಿನ ಕುತಂತ್ರ ರಿವೀಲ್ ಆಗಿದೆ.
ಪಾಕ್‌ನ ಖೈಬರ್ ಪಖ್ತುಂಖ್ವಾ ಭಾಗದಲ್ಲಿ ಇಸ್ಲಾಮಿಕ್ ರಾಜಕೀಯ ಪಕ್ಷದ ಸಭೆ ವೇಳೆ ಸೂಸೈಡ್ ಬಾಂಬರ್ ತನ್ನನ್ನೇ ತಾನು ಸ್ಫೋಟಿಸಿಕೊಂಡಿದ್ದ. ತಕ್ಷಣವೇ ಸಮಾವೇಷ ನಡೆಯುತ್ತಿದ್ದ ಜಾಗ ಸ್ಮಶಾನವಾಗಿತ್ತು. 44 ಜನ ಸಾವನ್ನಪ್ಪಿ, ಘಟನೆಯಲ್ಲಿ 150ಕ್ಕೂ ಹೆಚ್ಚು ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಂಬ್ ಬ್ಲಾಸ್ಟ್‌ನಲ್ಲಿ ಜೆಯುಐಎಫ್ ನಾಯಕ ಮೌಲಾನಾ ಜಿಯಾವುಲ್ಲಾ ಜಾನ್ ಸಹ ಮೃತಪಟ್ಟಿದ್ದು, ಹಲವು ಪತ್ರಕರ್ತರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಅಲ್ಲದೆ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಇದೀಗ ಬಾಂಬ್ ಸ್ಫೋಟದ ಹಿಂದೆ ಐಸಿಸ್ ಕೈವಾಡ ಬಯಲಾಗಿದೆ.

ತನಿಖೆ ತೀವ್ರಗೊಳಿಸಿದ ಪಾಕ್ ಪೊಲೀಸರು
ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿರುವ ತನಿಖಾಧಿಕಾರಿಗಳು, ಸ್ಫೋಟದ ಕುರಿತಾಗಿ ತನಿಖೆ ನಡೆಸುತ್ತಿದ್ದೇವೆ. ಸಂಬಂಧಪಟ್ಟ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಈಗ ತನಿಖೆಯಲ್ಲಿ ನಿಷೇಧಿತ ಸಂಘಟನೆ ಐಸಿಸ್ ಕೈವಾಡ ಇರುವುದು ಗೊತ್ತಾಗುತ್ತಿದೆ. ಹೀಗಾಗಿ ನಾವು ತನಿಖೆ ಇನ್ನಷ್ಟು ತೀವ್ರಗೊಳಿಸಿದ್ದು, ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ನಜೀರ್ ಖಾನ್ ಹೇಳಿದ್ದಾರೆ. ಸದಾ ಭಯೋತ್ಪಾದಕರನ್ನು ಬೆಳೆಸುತ್ತಾ, ಭಯೋತ್ಪಾದನೆ ಅನ್ನೋ ವಿಷದ ಮರಕ್ಕೆ ನೀರು ಎರೆಯುವ ಪಾಕಿಸ್ತಾನದಲ್ಲಿ ನಡೆದ ಇಂತಹ ಭೀಕರ ಘಟನೆ ಜಗತ್ತಿನ ಗಮನ ಸೆಳೆದಿತ್ತು.
ಚೀನಾ ರಾಯಭಾರ ಕಚೇರಿ ಬಳಿಯೂ ಅಟ್ಯಾಕ್
ಮತ್ತೊಂದ್ಕಡೆ ಈ ಬಾಂಬ್ ಬ್ಲಾಸ್ಟ್ ನಡೆಯುವ ಕೆಲ ಹೊತ್ತಿನ ಹಿಂದೆ ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿಯ ಚೀನಾ ರಾಯಭಾರಿ ಕಚೇರಿ ಹೊರಗೆ ಗುಂಡಿನ ದಾಳಿ ನಡೆದಿತ್ತು. ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು. ಗುಂಡಿನ ಚಕಮಕಿ ನಂತರ, ಖಾಕಿ ಗುಂಡಿಗೆ ಮೂವರು ಭಯೋತ್ಪಾದಕರು ನರಕ ಸೇರಿದ್ದರು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿತ್ತು. ಆದ್ರೆ ಘಟನೆ ನಡೆದ ಸ್ವಲ್ಪ ಹೊತ್ತಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ಇಡೀ ಪಾಕಿಸ್ತಾನ ಬೆಚ್ಚಿಬಿದ್ದಿದ್ದು, ಉಗ್ರ ಕೃತ್ಯದ ಬಗ್ಗೆ ಆಕ್ರೋಶವೂ ವ್ಯಕ್ತವಾಗಿದೆ.

ಒಟ್ನಲ್ಲಿ ಒಂದಷ್ಟು ದಿನ ಪಾಕಿಸ್ತಾನದಲ್ಲಿ ಸೈಲೆಂಟ್ ಆಗಿದ್ದ ಐಸಿಸ್ ಉಗ್ರರು ಈಗ ಮತ್ತೆ ಬಾಲ ಬಿಚ್ಚಿದಂತೆ ಕಾಣುತ್ತಿದೆ. ಹೀಗಾಗಿ ಪಾಕಿಸ್ತಾನದ ಪೊಲೀಸರು & ತನಿಖಾಧಿಕಾರಿಗಳು ಘಟನೆ ಬಗ್ಗೆ ಆಳವಾದ ತನಿಖೆಗೆ ಮುಂದಾಗಿದ್ದಾರೆ. ಅದೇನೆ ಇರಲಿ ಇಂತಹ ಹೀನವಾದ ಕೃತ್ಯ ನಡೆದಿರುವುದು ಮಾತ್ರ ವಿಪರ್ಯಾಸ. ಆದರೆ ಸದಾ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಪಾಕಿಸ್ತಾನಕ್ಕೆ ಇಂತಹ ಘಟನೆಯಿಂದ ಒಂದಷ್ಟು ಬುದ್ಧಿ ಬರಲಿ ಅಂತಿದ್ದಾರೆ ನೆಟ್ಟಿಗರು.











Click it and Unblock the Notifications